Advertisement

ಉದ್ದಿನಮಲ್ಲನಹೊಸೂರಲ್ಲಿ ನೀರಿಗಾಗಿ ಪರದಾಟ

07:32 PM Jun 22, 2019 | Naveen |

ಕಿಕ್ಕೇರಿ: ಹೋಬಳಿಯ ಉದ್ದಿನಮಲ್ಲನಹೊಸೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಗ್ರಾಮ ಚಿಕ್ಕದಾಗಿದ್ದರೂ ನೀರಿನ ಸಮಸ್ಯೆ ದೊಡ್ಡದಾಗಿದೆ. ಗ್ರಾಮ ಯಾವುದೇ ಮೂಲ ಸೌಲಭ್ಯಗಳನ್ನು ಕಂಡಿಲ್ಲ. ಡಾಂಬರು ರಸ್ತೆ, ಸಂಚಾರ ಸೌಲಭ್ಯವೂ ಇಲ್ಲ. ಯಾವುದೇ ಅಧಿಕಾರಿಗಳು ಇತ್ತ ಗಮನಹರಿಸುವುದಿಲ್ಲ. ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಬಂದು ಭರವಸೆಗಳು ಸುರಿಸಿ ಹೋದರೆ ಮತ್ತೆ ಚುನಾವಣೆ ಬರುವವರೆಗೂ ಇತ್ತ ಮುಖ ಹಾಕಲ್ಲ.

ಲಕ್ಷ್ಮೀಪುರ ಗ್ರಾಪಂಗೆ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ 40 ಕುಟುಂಬಗಳಿದ್ದು 250 ಜನಸಂಖ್ಯೆ ಇದೆ. ಕೃಷಿಯಾಧಾರಿತ ಗ್ರಾಮದಲ್ಲಿ ಕುಡಿಯಲು ನೀರಿಲ್ಲ, ಬೇಸಾಯಕ್ಕೂ ನೀರಿಲ್ಲದಂತಾಗಿದೆ. ಮಳೆ ಬಂದರೆ ಗ್ರಾಮದಲ್ಲಿ ನೀರು ಸಮೃದ್ಧಿಯಾಗಿದೆ. ಬೇಸಿಗೆಯ ಝಳಕ್ಕೆ ಗ್ರಾಮದಲ್ಲಿನ ಬಹುತೇಕ ಕೃಷಿ ಪಂಪ್‌ಸೆಟ್‌ಗಳು ಬತ್ತಿ ಹೋಗಿವೆ. ಗ್ರಾಮದಲ್ಲಿ 6 ನೀರಿನ ತೊಂಬೆಗಳಿದ್ದು, ಒಂದೆರಡರಲ್ಲಿ ಜಿನುಗುತ್ತಿದ್ದ ನೀರು ಕೂಡ ಬರಿದಾಗಿದೆ. ಹಲವು ನೀರಿನ ತೊಂಬೆಗಳು ನಾಮಕೇವಸ್ತೆಗೆ ನಿರ್ಮಾಣವಾದಂತಿವೆ. ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆಯೂ ಇದ್ದು, ತೊಂಬೆಗೆ ನೀರು ತುಂಬಿಸುವುದು ಸಮಸ್ಯೆಯಾಗಿದೆ. ವಿದ್ಯುತ್‌ ಇದ್ದರೆ ಕೊಳವೆ ಬಾವಿಯಲ್ಲಿ ನೀರು ಬರುವುದಿಲ್ಲ. ಗ್ರಾಮದಲ್ಲಿರುವ ರೈತರ ಕೊಳವೆ ಬಾವಿಯಲ್ಲಿ ಕಾಡಿಬೇಡಿ ಗ್ರಾಮಸ್ಥರು ನೀರು ತುಂಬಿಸಿಕೊಳ್ಳುವುದು ನಿತ್ಯ ರೋಧನವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈಗಲಾದರೂ ಇತ್ತ ಗಮನಹರಿಸಿ ನೀರಿನ ಸಮಸ್ಯೆ ಬಗೆಹರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next