ಮಂಡ್ಯ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಬೈಕ್‌ನಲ್ಲಿ ಬರುತ್ತಿದ್ದವರನ್ನು ಅಡ್ಡೆ ಹಾಕಿ ಚಿನ್ನದ ಸರ, ನಗದು ದೋಚಿರುವ ಘಟನೆ ಸೋಮವಾರ ರಾತ್ರಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯ ತಾಲೂಕಿನ ಇಂಡುವಾಳು ಗೇಟ್ ಮತ್ತು ಬ್ಯಾಡರಹಳ್ಳಿ ಕ್ರಾಸ್ ಬಳಿ ಸೋಮವಾರ ರಾತ್ರಿ ಬೈಕ್‌ನಲ್ಲಿ ಬರುತ್ತಿದ್ದವರನ್ನು ಅಡ್ಡ ಹಾಕಿ ಚಿನ್ನದ ಸರ, ನಗದನ್ನು ದೋಚಲಾಗಿದೆ.
ನಗರದ ಗುತ್ತಲು ಬಡಾವಣೆಯ ಶಿವರಾಜು ಮತ್ತು ತಾಲೂಕಿನ ತೂಬಿನಕೆರೆ ಗ್ರಾಮದ ಸಂತೋಷ್ ಚಿನ್ನ ಕಳೆದುಕೊಂಡವರು. ಅಂಗಡಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಶಿವರಾಜು ಎಂಬುವರನ್ನು ಇಂಡುವಾಳು ಸಮೀಪ ಅಡ್ಡೆ ಹಾಕಲಾಗಿದೆ. ಬಳಿಕ ಹಲ್ಲೆ ನಡೆಸಿ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಬೈಕುಗಳ ನಡುವೆ ಭೀಕರ ಅಪಘಾತ: ನಾಲ್ವರ ಸಾವು, ಇಬ್ಬರಿಗೆ ಗಂಭೀರ ಗಾಯ
ಅಂತೆಯೇ ಸಂತೋಷ್‌ನನ್ನು ಬ್ಯಾಡರಹಳ್ಳಿ ಕ್ರಾಸ್‌ನಲ್ಲಿ ಅಡ್ಡ ಹಾಕಿ ಚಿನ್ನದ ಸರದ ಜತೆಗೆ ಹಣವನ್ನು ಕಿತ್ತು ಪರಾರಿಯಾಗಿದ್ದಾರೆ.
ಈ ಎರಡು ಕೃತ್ಯವನ್ನು ಒಂದೇ ತಂಡ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ರಾತ್ರಿ ಪೊಲೀಸರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹುಡುಕಾಡಿದ್ದು, ಕಳ್ಳರು ಪತ್ತೆಯಾಗಿಲ್ಲ. ಘಟನೆ ಸಂಬoಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.