Advertisement
ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಅಡಗಿಸಿಟ್ಟಿರುವ ಕೆಲವು ಗಣಪತಿ ವಿಗ್ರಹ ಮಾರಾಟಗಾರರು ಮೇಲ್ನೋಟಕ್ಕೆ ಕಾಗದ ಹಾಗೂ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಪಿಒಪಿ ಮೂರ್ತಿಗಳಿಗೆ ಬೇಡಿಕೆ ಬಂದವರಿಂದ ಮುಂಗಡವಾಗಿ ಹಣ ಪಡೆದುಕೊಂಡು ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದು, ಹಬ್ಬಕ್ಕೆ ಒಂದೆರಡು ದಿನಗಳಿರುವಾಗ ಆ ಮೂರ್ತಿಗಳನ್ನು ಕೊಡುವ ಭರವಸೆ ನೀಡಿ ಕಳುಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.
Related Articles
Advertisement
ಕಾಗದದ ಗಣೇಶ ವಿಗ್ರಹ: ಪಿಒಪಿ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿರುವುರಿಂದ ಯಾರೂ ಅವುಗಳನ್ನು ಬಹಿರಂಗವಾಗಿ ಮಾರಾಟಕ್ಕಿಡುವ ಧೈರ್ಯ ಮಾಡಿಲ್ಲ. ಮಣ್ಣಿನ ಮೂರ್ತಿಗಳನ್ನು ಕೊಂಡೊಯ್ಯುವುದು ಕಷ್ಟ. ಅವುಗಳನ್ನು ಸಾಗಿಸುವ ಸಮಯದಲ್ಲಿ ಸ್ವಲ್ಪ ಜಾಗ್ರತೆ ತಪ್ಪಿದರೂ ಬಿರುಕು ಬಿಡುತ್ತವೆ. ಕಾಗದದಿಂದ ತಯಾರಿಸಿದ ವಿಗ್ರಹಗಳನ್ನು ರಕ್ಷಣೆ ಇನ್ನೂ ಕಷ್ಟವಾಗಿದ್ದು, ಮಳೆ ನೀರಿನಿಂದ ಸಂರಕ್ಷಣೆ ಮಾಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಯುವಕರು ಪಿಒಪಿ ಗಣೇಶಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.
ಮಾರಾಟಗಾರರ ಬಳಿ ಪಿಒಪಿಗಳನ್ನೇ ಕೇಳುತ್ತಿದ್ದಾರೆಯಾದರೂ ಅವುಗಳು ಸುಲಭಕ್ಕೆ ಸಿಗುತ್ತಿಲ್ಲವಾಗಿವೆ. ಅದಕ್ಕಾಗಿ ಕೆಲವು ಯುವಕರು ವಿಧಿಯಿಲ್ಲದೆ ಮಣ್ಣು ಅಥವಾ ಕಾಗದದ ಗಣೇಶ ಮೂರ್ತಿಗಳ ಖರೀದಿಗೆ ಮೊರೆ ಹೋಗುತ್ತಿದ್ದಾರೆ.
ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರೀಸ್, ಬಣ್ಣ ಲೇಪಿತ ವಿಗ್ರಹಗಳನ್ನು ಕಡೆಗಣಿಸಬೇಕು. ಬಣ್ಣ ಹಚ್ಚಿಲ್ಲದ ಮಣ್ಣಿನಿಂದ ಮಾಡಿರುವ ಗಣಪತಿ ವಿಗ್ರಹಗಳನ್ನು ಖರೀದಿಸಿ ಹಬ್ಬ ಆಚರಿಸಬೇಕು. ಪಿಒಪಿ ಅಥವಾ ಬಣ್ಣ ಲೇಪಿತ ವಿಗ್ರಹಗಳನ್ನು ನಿಯ ಮಬಾಹೀರವಾಗಿ ನದಿ, ಕಾಲುವೆ, ಬಾವಿ, ಕೆರೆ ಸೇರಿದಂತೆ ಇನ್ನಿತರ ಜಲಮೂಲಗಳಿಗೆ ಬಿಡುವುದು ಕಂಡುಬಂದಲ್ಲಿ ಅಂತಹವರಿಗೆ ಜಲ ಮಾಲಿನ್ಯ ತಡೆ ಮತ್ತು ನಿಯಂ ತ್ರಣ ಕಾಯ್ದೆ 1974ರ ಕಲಂ 45-ಎ ಅನ್ವಯ 10 ಸಾವಿರ ರೂ.ವರೆಗೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾ ಗುತ್ತದೆ ಎಂಬ ಎಚ್ಚರಿಕೆ ಯನ್ನು ಜಿಲ್ಲಾಡಳಿತ ನೀಡಿದೆ.