ಮಂಡ್ಯ: ಮಳವಳ್ಳಿ ತಾಲೂಕಿನ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗಹಳ್ಳಿ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ ಬಿಇ ಇನ್ ಎಲೆಕ್ಟ್ರಾನಿಕ್ಸ್ ಪದವೀಧರ ಸುಹಾಸ್, ಮಂಡ್ಯ ತಾಲೂಕಿನ ಬೇವುಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಮೀಸಲಾತಿಯಿಂದ ಸ್ಪರ್ಧಿಸಿದ್ದ ವಕೀಲ ಹಾಗೂ ಪದವೀಧರ ಎಂ.ಎಸ್.ವೆಂಕಟೇಶ್, ಹಲಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂತರವಳ್ಳಿ ಗ್ರಾಮದಿಂದ ಸಾಮಾನ್ಯ ಕ್ಷೇತ್ರದಿಂದ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಎಂಎ ಹಾಗೂ ಬಿಎಡ್ ಪದವಿ ವ್ಯಾಸಂಗ ಮಾಡಿದ್ದ ಎ.ಸಿ.ಸತೀಶ್, ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮ ಪಂಚಾಯಿತಿಯ 2ನೇ ವಾರ್ಡ್‌ನಿಂದ ಸಾಮಾನ್ಯ ಮೀಸಲು ಕ್ಷೇತ್ರದಿಂದ ಸ್ಪರ್ದಿಸಿದ್ದ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಪದವಿ ಪಡೆದಿರುವ ಆರ್. ಶೃತಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿದ್ಯಾವಂಥ ಪದವೀಧರರು ಸೋಲು ಕಂಡಿದ್ದಾರೆ.
ಸಿಎಂ ತವರೂರಲ್ಲಿ ಲಾಟರಿ ಮೂಲಕ ಆಯ್ಕೆ: ಸಿಎಂ ಬಿ.ಎಸ್.ಯಡಿಯೂರಪ್ಪ ತವರೂರು ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮ ಪಂಚಾಯಿತಿಯಲ್ಲಿ ಫಲಿತಾಂಶ ಡ್ರಾ ಆದ ಹಿನ್ನೆಲೆಯಲ್ಲಿ ನಡೆದ ಲಾಟರಿಯಲ್ಲಿ ಅಭ್ಯರ್ಥಿಗೆ ಜಯ
ಒಲಿದಿದೆ. ಸಾಮಾನ್ಯ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರುಕ್ಮಿಣಮ್ಮ ಇಬ್ಬರೂ ತಲಾ 183 ಮತ ಗಳಿಸಿದ್ದರು. ನಂತರ ಚುನಾವಣಾಧಿಕಾರಿಗಳು ಲಾಟರಿ ನಡೆಸಿದಾಗ ಜೆಡಿಎಸ್ ಅಭ್ಯರ್ಥಿ ಮಂಜುಳಾ ಆಯ್ಕೆಯಾದರು.
ಇದನ್ನೂ ಓದಿ:ರಾಷ್ಟ್ರೀಯ ಪಕ್ಷಗಳ ಪ್ರಭಾವದ ನಡುವೆಯೂ ಜೆಡಿಎಸ್ ಗಮನಾರ್ಹ ಸಾಧನೆ: ಎಚ್.ಡಿ ಕುಮಾರಸ್ವಾಮಿ
ಮರು ಎಣಿಕೆಗೆ ಮನವಿ: ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಪಂನ ಗುನ್ನನಾಯಕನ ಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ದಿಸಿದ್ದ ದಿವ್ಯಶ್ರೀ ಪ್ರತಿಸ್ಪರ್ಧಿ ರಾಜೇಶ್ ವಿರುದ್ಧ ಒಂದು ಮತದ ಅಂತರದಿಂದ ಸೋತಿದ್ದರು. ಇದರಿಂದ ಒಂದು ಮತದ ಹಿನ್ನೆಲೆಯಲ್ಲಿ ಏಜೆಂಟರು ಮರು ಎಣಿಕೆ ಮಾಡುವಂತೆ ಮನವಿ ಮಾಡಿದ್ದರು.