Advertisement
ಏನಿದು ಯೋಜನೆ?: ತಮಿಳುನಾಡಿನ ವೆಲ್ಲಾರು,ವೈಗೈ ಮತ್ತು ಗುಂಡರ್ ನದಿಗಳನ್ನು ಕಾವೇರಿ ನದಿಗೆ ಜೋಡಣೆ ಮಾಡುವ ಮೂಲ ನೀರನ್ನು ಬೇರೆ ಯೋಜನೆಗೆ ಬಳಸಲು ಮುಂದಾಗಿದೆ. ಇದರಿಂದ ಕರ್ನಾಟಕದ ಕಾವೇರಿ ಕಣಿವೆಯ ರೈತರಿಗೆ ಅನ್ಯಾಯವಾಗಲಿದೆ. ಆದ್ದರಿಂದ ತಮಿಳುನಾಡಿನ ಯೋಜನೆಗೆ ತಡೆಗೆ ರಾಜ್ಯ ಸರ್ಕಾರ ಮನವಿಸಲ್ಲಿಸಬೇಕು ಎಂಬ ಆಗ್ರಹಗಳು ಜಿಲ್ಲಾದ್ಯಂತ ಕೇಳಿ ಬರುತ್ತಿದೆ.
Related Articles
Advertisement
ಕೇಂದ್ರದಿಂದ ಮಲತಾಯಿ ಧೋರಣೆ: ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳೆರಡಕ್ಕೂ ಅನುಕೂಲವಾಗುವ ಮೇಕೆದಾಟು ಯೋಜನೆಗೆಅನುಮತಿ ನೀಡದೆ, ತಮಿಳುನಾಡಿನ ನದಿ ಜೋಡಣೆ ಮಾಡಿ ನೀರನ್ನು ಬೇರೆಡೆ ಕೊಂಡೊಯ್ಯುವ ಯೋಜನೆಗೆ ಅನುಮತಿ ನೀಡಿ ಯೋಜನೆಗೆ 6491ಕೋಟಿ ರೂ. ಅನುದಾನ ನೀಡುತ್ತಿರುವುದು ಸರಿಯಲ್ಲ ಎಂದು ಕಾವೇರಿ ಕಣಿವೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ವೆಲ್ಲಾರು, ವೈಗೈ ಮತ್ತು ಗುಂಡರ್ ನದಿಗಳನ್ನು ಕಾವೇರಿ ನದಿಗೆಜೋಡಣೆ ಮಾಡಿ, ಕಾವೇರಿ ತಪ್ಪಲಿನ ರೈತರಿಗೆ ಅನ್ಯಾಯವೆಸಗುವ ತಮಿಳುನಾಡಿನ ಯೋಜನೆಗೆ ತಡೆಗೆರಾಜ್ಯ ಸರ್ಕಾರ ಮನವಿ ಸಲ್ಲಿಸಲು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಕುಡಿಯುವ ನೀರಿಗೂ ತೊಂದರೆಯಾಗಲಿದೆ. – ಬಿ.ಶಿವಲಿಂಗಯ್ಯ, ಮಾಜಿ ಅಧ್ಯಕ್ಷ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಮೇಕೆದಾಟುವಿನಲ್ಲಿ ಉಷ್ಣ ಸ್ಥಾವರ ನಿರ್ಮಾಣ ಮಾಡಲಿದ್ದಾರೆ ಎಂದು ನ್ಯಾಯಾಂಗ ನಿಂದನೆ ಹೆಸರಿನಲ್ಲಿ ತಮಿಳುನಾಡುಸರ್ಕಾರ ತಡೆಯೊಡ್ಡಿದೆ. ಈಗ ತಮಿಳುನಾಡು ಸರ್ಕಾರ ಮಾಡುತ್ತಿರುವುದನ್ನು ಪ್ರಶ್ನಿಸಿ, ಸರ್ಕಾರಮೇಲ್ಮನವಿ ಸಲ್ಲಿಸಬೇಕು. ಕಾವೇರಿ ಕಣಿವೆಯ ಸಂಘ- ಸಂಸ್ಥೆಗಳು, ಜನಪ್ರತಿನಿಧಿಗಳು, ರೈತರು, ಸಾರ್ವಜನಿಕರು ಕೂಡಲೇ ಎಚ್ಚೆತ್ತುಕೊಂಡುತಮಿಳುನಾಡು ಸರ್ಕಾರದ ತಂತ್ರ, ಕುತಂತ್ರಹಾಗೂ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ಹೊರಗೆಳೆಯಬೇಕು. ರಾಜ್ಯ ಸರ್ಕಾರ ಕಾವೇರಿ ಕಣಿವೆಯ ಜನರಿಗೆ ನ್ಯಾಯ ಒದಗಿಸಬೇಕು. –ಅರ್ಜುನಹಳ್ಳಿ ಪ್ರಸನ್ನಕುಮಾರ್, ಜಲತಜ್ಞರು
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ತಮಿಳುನಾಡಿನಲ್ಲಿ ಚುನಾವಣೆ ಇರುವುದರಿಂದ ಅವರ ಪರವಾಗಿ ಕಾವೇರಿ ನದಿ ಜೋಡಣೆಗೆ ಅನುಮತಿ ನೀಡಿರುವುದು ಸರಿಯಲ್ಲ. ಇದರ ವಿಚಾರವಾಗಿ ಕರ್ನಾಟಕ ಸರ್ಕಾರ ಬಾಯಿ ಮುಚ್ಚಿಕೊಂಡು ಕುಳಿತಿರುವುದು ಸರಿಯಲ್ಲ. ಕೂಡಲೇ ಯೋಜನೆಗೆ ತಡೆಯೊಡ್ಡಬೇಕು. –ಎಂ.ಶ್ರೀನಿವಾಸ್, ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರ
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಬಿಡಬೇಕು. ಎರಡು ರಾಜ್ಯಗಳನ್ನು ಕರೆಸಿ, ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರನ್ನು ಬಳಸಿಕೊಳ್ಳುವಂತೆ ಮಾತುಕತೆ ನಡೆಸುವ ಮೂಲಕ ರಾಜ್ಯದ ಮೇಕೆದಾಟು ಯೋಜನೆಗೂ ಅನುಮತಿನೀಡಬೇಕು. ಕಾನೂನಾತ್ಮಕವಾಗಿ ಹೋದರೆ ಎರಡೂ ರಾಜ್ಯಗಳ ನಡುವೆ ದ್ವೇಷ ಬೆಳೆಯಲಿದೆ. ಕೇಂದ್ರ ಸರ್ಕಾರ ಚುನಾವಣೆ ದೃಷ್ಟಿ ಬಿಟ್ಟು ರಾಜ್ಯಗಳ ನಡುವೆ ಸಮನ್ವಯತೆ ಕಾಪಾಡಲು ಮುಂದಾಗಬೇಕು. – ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷ, ರೈತಸಂಘ
ರಾಜ್ಯ ಸರ್ಕಾರ ಜವಾಬ್ದಾರಿ ಹೊರಬೇಕು. ಕಾನೂನಾತ್ಮಕವಾಗಿ ಹೋರಾಟ ನಡೆಸಬೇಕು.ಮೇಕೆದಾಟು ಯೋಜನೆಗೆ ತಡೆಯೊಡ್ಡಿರುವ ತಮಿಳುನಾಡು, ಕಾವೇರಿ ನದಿ ನೀರನ್ನು ಬೇರೆಡೆಕೊಂಡೊಯ್ಯುವ ಯೋಜನೆ ಮಾಡುತ್ತಿದೆ. ಇದಕ್ಕೆಕೇಂದ್ರ ಸರ್ಕಾರವು ಹಣ ಒದಗಿಸುವ ಭರವಸೆ ನೀಡಿದೆ.ಇದು ಸರಿಯಲ್ಲ. ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದಜನರು ಹನಿ ನೀರಿಗೂ ಪರಿತಪಿಸಬೇಕಾದ ಪರಿಸ್ಥಿತಿ ಒದಗಲಿದೆ. ಆದ್ದರಿಂದ ರೈತರು ಎಚ್ಚೆತ್ತುಕೊಂಡು ಇದರವಿರುದ್ಧ ಹೋರಾಟ ಮಾಡುವ ಅಗತ್ಯವಿದೆ.ಹೋರಾಟದ ಬಗ್ಗೆ ಜಿ.ಮಾದೇಗೌಡ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದೇವೆ. – ಸುನಂದ ಜಯರಾಂ, ರೈತ ನಾಯಕಿ
– ಎಚ್.ಶಿವರಾಜು