Advertisement

ತಯಾರಕರು, ವಿತರಕರು ಗುಣಮಟ್ಟ ಕಾಪಾಡಲಿ : ಪರಿಹಾರ ಆಯೋಗದ ಅಧ್ಯಕ್ಷ ರಾಮಚಂದ್ರ ಹೇಳಿಕೆ

03:56 PM Dec 30, 2021 | Team Udayavani |

ಮಂಡ್ಯ: ಗ್ರಾಹಕರ ಸಂರಕ್ಷಣಾ ಕಾಯ್ದೆಯಲ್ಲಿ ಗ್ರಾಹಕರಿಗೆ ಪ್ರಾಮುಖ್ಯತೆ ಇದ್ದು, ಉತ್ತಮ ಗುಣಮಟ್ಟದ ವಸ್ತುಗಳನ್ನು ಕೊಡುವುದು ತಯಾರಕರು ಮತ್ತು ವಿತರಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಂ.ಎಸ್‌. ರಾಮಚಂದ್ರ ಹೇಳಿದರು.

Advertisement

ನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ನಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ, ನಾಗರೀಕ ಸರಬ ರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಅಕ್ಷಯನಿಕೇತನ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಗ್ರಾಹಕ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಗ್ರಾಹಕರ ದಿನ ಮಹತ್ತರವಾದದ್ದು, ಪ್ರತಿಯೊಬ್ಬ ವ್ಯಕ್ತಿಯೂ ಸಹ ಗ್ರಾಹಕನಾಗಿರುತ್ತಾನೆ. ಯಾವ ವ್ಯಕ್ತಿ ದೈನಂದಿನ ದಿನದಲ್ಲಿ ವಸ್ತುವನ್ನು ಖರೀದಿ ಸಿದರೂ ಸಹ ಆತ ಗ್ರಾಹಕನೇ ಆಗಿರುತ್ತಾನೆ. 1986ರಲ್ಲಿ ಗ್ರಾಹಕರ ಕಾಯ್ದೆ ಜಾರಿಗೆ ಬಂತು. ಆದರೆ 2019ರಲ್ಲಿ ಈ ಕಾಯ್ದೆ ಬಲಿಷ್ಠವಾಯಿತು. ಅನೇಕ ನೂನ್ಯತೆಗಳನ್ನು ಮತ್ತು ಕಾನೂನಾತ್ಮಕ ಅಂಶಗಳನ್ನು ರಾಜ್ಯ ಮತ್ತು
ಕೇಂದ್ರ ಸರ್ಕಾರಗಳು ಅಳವಡಿಸಿಕೊಂಡವು ಎಂದರು.

ಅನ್ಯಾಯವಾದಾಗ ಗ್ರಾಹಕ ಯಾವ ರೀತಿಯಾಗಿ ದೂರು ನೀಡಬೇಕು ಎಂಬುದನ್ನು ಈ ಕಾಯ್ದೆಯಲ್ಲಿ ತಿಳಿಸಲಾಗಿದೆ. ವಸ್ತುಗಳಲ್ಲಿ ಏನಾದ್ರೂ ನ್ಯೂನತೆಗಳಿದ್ದರೆ ಆತನೇ ಕಾರಣಕರ್ತನಾಗಿರುತ್ತಾನೆ. ನಾವು ಕೊಡು ವಂಥ ಮೌಲ್ಯಕ್ಕೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಕೊಡುವುದು ಆತನ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಎಸ್‌.ವಸಂತಕುಮಾರ್‌, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಬಸವರಾಜು, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಕೆ.ಎಂ.ಮಹದೇವಯ್ಯ, ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ್‌, ಅಖೀಲ ಭಾರತ ವಕೀಲರ ಒಕ್ಕೂಟದ ಅಧ್ಯಕ್ಷ ಬಿ.ಟಿ.ವಿಶ್ವನಾಥ್‌, ಆಹಾರ ನಾಗರಿಕ ಸರಬರಾಜು ಇಲಾಖೆಯ ರೇಣುಕಾ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಹಾಗೂ ಶ್ರೀ ಅಕ್ಷಯನಿಕೇತನ ಟ್ರಸ್ಟ್‌ನ ಅಧ್ಯಕ್ಷ ಸೂನಗಹಳ್ಳಿ ಪುಟ್ಟಸ್ವಾಮಿ, ಎನ್‌ಎಸ್‌ಎಸ್‌ನ ಕಾರ್ಯಾಕ್ರಮಾಧಿಕಾರಿ ಡಾ.ಕೆಂಪಮ್ಮ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಕೆ.ರತ್ನಮ್ಮ, ಸಂಪನ್ಮೂಲ ವ್ಯಕ್ತಿ ಬಿ.ಗೋವಿಂದ ಭಟ್‌ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next