Advertisement
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದೊಂದು ಮಹಿಳಾ ಪ್ರಾತಿನಿಧ್ಯದ ಸಮ್ಮೇಳನ. ಬೆಂಗಳೂರು ಕಿದ್ವಾಯಿ ಆಸ್ಪತ್ರೆ ಸಹಕಾರದಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ಅಂಬೇಡ್ಕರ್ ಭವನದಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್ ತಪಾಸಣೆ, ಕಿಮ್ಸ್ ಆಸ್ಪತ್ರೆ ಸಹಕಾರದೊಂದಿಗೆ ಕಣ್ಣು ಮತ್ತು ದಂತ ತಪಾಸಣೆ, ಎಸ್.ಡಿ.ಜಯರಾಂ ಆಸ್ಪತ್ರೆ ಸಹಯೋಗದಲ್ಲಿ ಫೈಲ್ಸ್ (ಮೊಳೆರೋಗ), ಸಕ್ಕರೆ ಕಾಯಿಲೆ, ರಕ್ತದೊತ್ತಡ ತಪಾಸಣೆ ಮಾಡಲಾಗುವುದೆಂದರು.
Related Articles
Advertisement
ಖ್ಯಾತ ಹರಟೆ ಮಲ್ಲರಾದ ರಿಚರ್ಡ್ ಲೂಯಿಸ್, ಮಿಮಿಕ್ರಿ ಗೋಪಿ, ಕಿರ್ಲೋಸ್ಕರ್ ಸತ್ಯ, ಅಸಾದುಲ್ಲಾ ಬೇಗ್ ತಂಡದಿಂದ ಮಧ್ಯಾಹ್ನ 2.30ಕ್ಕೆ ಹಾಸ್ಯಗೋಷ್ಠಿ ನಡೆಯಲಿದೆ. ಸಂಜೆ 5.30ಕ್ಕೆ ನಡೆಯುವ ಸಮಾ ರೋಪದ ಅಧ್ಯಕ್ಷತೆಯನ್ನು ಸಚಿವ ಕೆ.ಸಿ.ನಾರಾಯಣ ಗೌಡ ವಹಿಸುವರು. ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಸಮಾರೋಪ ಭಾಷಣ ಮಾಡುವರು. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಸಮ್ಮೇಳನಾಧ್ಯಕ್ಷರಿಗೆ ಗೌರವ ಸಮರ್ಪಣೆ ಮಾಡುವರು ಎಂದರು.
ವಿವಿಧ ಕ್ಷೇತ್ರದ ಸಾಧಕರಾದ ಡಿ.ಮಂಜುನಾಥ್, ಕೆ.ಬಿ.ಜವರೇಗೌಡ, ಪುಷ್ಪ ಕಕ್ಕಿಲಾಯ, ಎಂ.ಸಿ. ರಾಜಗೋಪಾಲ್, ಹಸೀನಾ ತಾಜ್, ಬಿ.ಟಿ. ಗುರುರಾಜ್ ಮತ್ತಿತರರಿಗೆ ಸನ್ಮಾನ ನಡೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ನಗರ ಘಟಕದ ಅಧ್ಯಕ್ಷೆ ಸುಜಾತಾಕೃಷ್ಣ, ಮಂಡ್ಯ ತಾಲೂಕು ಅಧ್ಯಕ್ಷ ಮಂಜು ಮುತ್ತೇಗೆರೆ, ಚಂದ್ರಕುಮಾರ್ ಮತ್ತಿತರರು ಇದ್ದರು.
ಜಿಪಂ ಸಿಇಒಯಿಂದ ರಾಷ್ಟ್ರಧ್ವಜಾರೋಹಣ: ಅಂದು ಬೆಳಗ್ಗೆ 8.30ಕ್ಕೆ ರಾಷ್ಟ್ರಧ್ವಜವನ್ನು ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ನಾಡಧ್ವಜವನ್ನು ಅಶೋಕ್ ಜಯರಾಂ, ಪರಿಷತ್ ಧ್ವಜಾರೋಹಣ ನೆರವೇರಿಸುವರು. 10.30ಕ್ಕೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರಸಭೆ ಅಧ್ಯಕ್ಷ ಎಚ್. ಎಸ್.ಮಂಜು ಉದ್ಘಾಟಿಸುವರು.
ಈ ವೇಳೆ ಪತ್ರಕರ್ತ ಹೊಳಲು ಶ್ರೀಧರ್ ಅವರ “ಪದ ಸಂಚಯ’ ಕೃತಿಯನ್ನು ಜಿಲ್ಲಾ ಧಿಕಾರಿ ಡಾ.ಎಚ್. ಎನ್.ಗೋಪಾಲಕೃಷ್ಣ ಬಿಡುಗಡೆ ಮಾಡುವರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ತಿಳಿಸಿದರು.