Advertisement
ಕಳೆದ ವರ್ಷ ತರಾತುರಿಯಲ್ಲಿ ಕಾರ್ಖಾನೆ ಆರಂಭಿ ಸಿ ದ್ದರಿಂದ ಸರಿಯಾದ ಸಮಯಕ್ಕೆ ಕಬ್ಬು ಸಿಗಲಿಲ್ಲ. ಪ್ರತಿದಿನ ಅಗತ್ಯ ಪ್ರಮಾಣದಷ್ಟೂ ಅರೆಯಲು ಸಾಧ್ಯವಾಗಲಿಲ್ಲ. ಆದರೆ, ಈ ವರ್ಷ ಬೇಗನೇ ಕಾರ್ಖಾನೆ ಆರಂಭಿಸಲಾ ಗುತ್ತಿದೆ. ಯಂತ್ರಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಪ್ರಾರಂಭ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆದಿದೆ.
Related Articles
Advertisement
ಕಬ್ಬು ಕೊರತೆಗೆ ಅಧಿಕಾರಿಗಳೇ ಕಾರಣ?: ನಿಗದಿತ ಸಮಯಕ್ಕೆ ಕಾರ್ಖಾನೆಯನ್ನು ಆರಂಭಿಸದಿರುವುದು ಕಬ್ಬು ಕೊರತೆಗೆ ಕಾರಣವಾಗಲಿದೆ. ಇದಕ್ಕೆ ಕಾರ್ಖಾನೆಯ ಅಧಿಕಾರಿಗಳು ಕಾರಣರಾಗಲಿದ್ದಾರೆ. ಕಬ್ಬು ಸರಬರಾಜು ಮಾಡಿದಂತೆ ಅಗತ್ಯಕ್ಕೆ ತಕ್ಕಂತೆ ಕಬ್ಬು ಅರೆದರೆ ರೈತರಿಗೂ ನಂಬಿಕೆ ಬರಲಿದೆ. ಆದರೆ, ಯಂತ್ರಗಳಲ್ಲಿ ದೋಷ ಕಂಡು ಬಂದು ಕಾರ್ಖಾನೆ ಅರ್ಧಕ್ಕೆ ನಿಂತರೆ ರೈತರು ಕಬ್ಬು ಸರಬರಾಜು ಮಾಡಲು ಹಿಂದೇಟು ಹಾಕುತ್ತಾರೆ. ಇದು ಕಳೆದ ವರ್ಷವೂ ಪರಿಸ್ಥಿತಿ ಇತ್ತು.
5 ಲಕ್ಷ ಟನ್ ಕಬ್ಬು ಒಪ್ಪಿಗೆ: ಪ್ರಸ್ತುತ ಕಾರ್ಖಾನೆಯು 5 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದೆ. ಮೈಷುಗರ್ ವ್ಯಾಪ್ತಿಯಲ್ಲಿ ಸುಮಾರು 7ರಿಂದ 8 ಲಕ್ಷ ಟನ್ ಕಬ್ಬು ಸಿಗಲಿದೆ. ಆದರೆ, ಈಗಾಗಲೇ 5 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಇದನ್ನು ಸಂಪೂರ್ಣವಾಗಿ ಅರೆಯಬೇಕಾಗಿದೆ. ಕಳೆದ ವರ್ಷವೂ 3 ಲಕ್ಷ ಟನ್ ಗುರಿ ಹೊಂದಲಾಗಿತ್ತು. ಆದರೆ, ಅರೆದಿದ್ದು ಮಾತ್ರ ಕೇವಲ 1.01 ಲಕ್ಷ ಟನ್ ಮಾತ್ರ. ಇದರಿಂದ ರೈತರು ಕಬ್ಬು ಸರಬರಾಜು ಮಾಡಲು ಹಿಂದೇಟು ಹಾಕಿದ್ದರು. ಆದರೆ, ಈ ಬಾರಿ ಎಲ್ಲವನ್ನು ಸಮರ್ಪಕವಾಗಿ ನಿಭಾಯಿಸಿದರೆ ಮಾತ್ರವೇ ಕಾರ್ಖಾನೆ ಲಾಭದತ್ತ ನಡೆಯಲು ಸಾಧ್ಯ.
ಮೈಷುಗರ್ ವ್ಯಾಪ್ತಿ ಕಬ್ಬಿನ ಮೇಲೆ ಖಾಸಗಿಯವರ ಕಣ್ಣು : ಈಗಾಗಲೇ ಖಾಸಗಿ ಕಾರ್ಖಾನೆಗಳು ಆರಂಭಗೊಂಡಿವೆ. ಮೈಷುಗರ್ ಕಾರ್ಖಾನೆ ಕಳೆದ ಸೆಪ್ಟಂಬರ್‌ನಲ್ಲಿ ಆರಂಭಗೊಂಡು ಫೆಬ್ರವರಿಯಲ್ಲಿ ಕಬ್ಬು ಅರೆಯುವಿಕೆ ನಿಲ್ಲಿಸಲಾಗಿತ್ತು. ಖಾಸಗಿ ಕಾರ್ಖಾನೆಗಳು ಏಪ್ರಿಲ್‌ನಲ್ಲಿ ನಿಲ್ಲಿಸಿದ್ದವು. ಆದರೆ, ಈಗಾಗಲೇ ಖಾಸಗಿ ಕಾರ್ಖಾನೆಗಳು ಆರಂಭಗೊಂಡಿವೆ. ಇದರಿಂದ ಮೈಷುಗರ್ ವ್ಯಾಪ್ತಿಯ ಕಬ್ಬು ಖಾಸಗಿ ಕಾರ್ಖಾನೆಗಳ ಪಾಲಾಗುವ ಸಾಧ್ಯತೆ ಇದೆ. ಆದ್ದರಿಂದ ಮೈಷುಗರ್ ಕಾರ್ಖಾನೆಯನ್ನು ಶೀಘ್ರ ದುರಸ್ತಿಗೊಳಿಸಿ ಕಾರ್ಯಾರಂಭ ಮಾಡಬೇಕಿದೆ. ಅಧಿಕಾರಿಗಳು ಜೂನ್ ಅಂತ್ಯದಲ್ಲಿ ಆರಂಭಿಸಲಾಗುವುದು ಎಂದು ಹೇಳುತ್ತಿದ್ದಾರೆ.
ಆದರೆ, ಕಾರ್ಖಾನೆಯ ಪರಿಸ್ಥಿತಿ ಅವಲೋಕಿಸಿದರೆ ಆರಂಭದ ಲಕ್ಷಣಗಳ ಸಾಧ್ಯತೆ ಕಡಿಮೆ ಇದ್ದಂತಿದೆ.
ಪ್ರಸ್ತುತ ಸಾಲಿನಲ್ಲಿ ಕಾರ್ಖಾನೆಯಿಂದ 5 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಸಂಪೂರ್ಣವಾಗಿ ಅರೆಯಲು ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೈಷುಗರ್ ವ್ಯಾಪ್ತಿಯಲ್ಲಿ 7 ಲಕ್ಷ ಟನ್ ಲಭ್ಯವಿದ್ದು, ಅದರಲ್ಲಿ 5 ಲಕ್ಷ ಟನ್ ಕಬ್ಬು ಕಾರ್ಖಾನೆ ಅರೆಯಲಿದೆ. -ಚಂದ್ರಶೇಖರ್, ಕಬ್ಬು ಅಭಿವೃದ್ಧಿ ಅಧಿಕಾರಿ, ಮೈಷುಗರ್ ಕಾರ್ಖಾನೆ
-ಎಚ್.ಶಿವರಾಜು