ನಿರ್ದೇಶಕ ಸ್ಥಾನಗಳಿಗೆ 47 ಮಂದಿ ಅಭ್ಯರ್ಥಿಗಳು 59 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಪೈಪೋಟಿ ಮೇಲೆ ಮತದಾರರ ಒಲೈಕೆಗೆ ಮುಂದಾಗಿದ್ದಾರೆ.
Advertisement
ಮತದಾರರಿಗೆ ಉಡುಗೊರೆ?: ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಅಭ್ಯರ್ಥಿಗಳು ಗೆಲುವಿಗಾಗಿ ಲಕ್ಷಾಂತರ ರೂ. ಖರ್ಚು ಮಾಡಲಿದ್ದು, ಮತದಾರ ಸದಸ್ಯರಿಗೆ ಆಮಿಷ, ವಿವಿಧ ರೀತಿಯ ಗಿಫ್ಟ್ಗಳನ್ನು ನೀಡಲು ಮುಂದಾಗಿದ್ದಾರೆ. ಈಗಾಗಲೇ ಕೆಲವು ಅಭ್ಯರ್ಥಿಗಳು ಚಿನ್ನದ ಉಂಗುರ, ಬೆಳ್ಳಿ ಪದಾರ್ಥಗಳು ಸೇರಿದಂತೆ ಲಕ್ಷಾಂತರ ರೂ. ನಗದು ನೀಡಿ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಚುನಾವಣೆಯಲ್ಲಿ ನಿರ್ದೇಶಕ ಸ್ಥಾನ ಗೆಲ್ಲಲೇಬೇಕು ಹಠಕ್ಕೆ ಬಿದ್ದಿರುವ ಅಭ್ಯರ್ಥಿಗಳುಕೋಟ್ಯಂತರ ರೂ. ಹಣದ ಹೊಳೆಯೇ ಹರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
Related Articles
ಮಾಜಿ ಅಧ್ಯಕ್ಷ ಅಮರಾವತಿ ಅಶ್ವಥ್ ಅಖಾಡಕ್ಕಿಳಿದಿದ್ದು, ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟಕ್ಕೆ ಧುಮುಕಿದ್ದಾರೆ. ಹಾಲಿ ಅಧ್ಯಕ್ಷ ಸಾತನೂರು ಸತೀಶ್, ಸಹಕಾರ ಸಂಘದ ಏಳಿಗೆಗಾಗಿ ದುಡಿದಿದ್ದೇನೆ. ಈ ಹಿನ್ನೆಲೆಯಲ್ಲಿ ಮತದಾರರು ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಇತ್ತ ಅಮರಾವತಿ ಅಶ್ವಥ್ ತಮ್ಮ ಬೆಂಬಲಿಗರ ಮೂಲಕ ನಾಮಪತ್ರ ಸಲ್ಲಿಸಿ ಗೆಲ್ಲುವ
ವಿಶ್ವಾಸದಲ್ಲಿದ್ದಾರೆ. ಇಬ್ಬರೂ ತಮ್ಮ ಪ್ರತಿಷ್ಠೆ ಪಣಕ್ಕಿಟ್ಟು ಸ್ಪರ್ಧೆಗಿಳಿದಿದ್ದಾರೆ.
Advertisement
621 ಮಂದಿ ಸದಸ್ಯರಿಗೆ ಮತದಾನದ ಹಕ್ಕು:ಜಿಲ್ಲೆಯಲ್ಲಿ ಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 621 ಮಂದಿ ಸದಸ್ಯರು ಮತದಾನ ಹಕ್ಕು ಪಡೆದಿದ್ದಾರೆ. ಮಂಡ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ 44, ಮಳವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ 31, ಮದ್ದೂರು ಸಂಘಗಳ ಕ್ಷೇತ್ರದಿಂದ 43, ಪಾಂಡವಪುರ ಸಂಘಗಳ ಕ್ಷೇತ್ರದಿಂದ 24, ಶ್ರೀರಂಗಪಟ್ಟಣ ಸಹಕಾರ ಸಂಘಗಳ
ಕ್ಷೇತ್ರದಿಂದ 20, ಕೆ.ಆರ್.ಪೇಟೆ ಸಂಘಗಳ ಕ್ಷೇತ್ರದಿಂದ 23, ನಾಗಮಂಗಲ ಸಂಘಗಳ ಕ್ಷೇತ್ರದಿಂದ 16, ವ್ಯವಸಾ ಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ 7, ಮಂಡ್ಯ ಉಪವಿಭಾಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ 202, ಪಾಂಡವಪುರ ಉಪವಿಭಾಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ 71, ಕೈಗಾರಿಕಾ ಸಹಕಾರ ಸಂಘಗಳು, ಕಾರ್ಮಿಕ ಸಹಕಾರ ಸಂಘಗಳು ಹಾಗೂ ಇನ್ನಿತರೆ ಸಹಕಾರ ಸಂಘಗಳ ಕ್ಷೇತ್ರದಿಂದ 88 ಹಾಗೂ ಬಳಕೆದಾರರ ಸಂಸ್ಕರಣ
ಸಹಕಾರ ಸಂಘಗಳು, ನಗರ ಸಹಕಾರಿ ಬ್ಯಾಂಕ್, ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ 52 ಸದಸ್ಯರು ಮತಹಕ್ಕು ಚಲಾಯಿಸಲಿದ್ದಾರೆ. ಇದನ್ನೂ ಓದಿ:ಲವ್‌ಜಿಹಾದ್ ವಿರುದ್ಧ ಹೋರಾಟ ಅಗತ್ಯ : ಲಕ್ಷ್ಮೀನರಸಿಂಹ ಶಾಸ್ತ್ರಿ 47 ಅಭ್ಯರ್ಥಿಗಳಿಂದ 59 ನಾಮಪತ್ರ ಸಲ್ಲಿಕೆ:
ಬುಧವಾರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದರಿಂದ ವಿವಿಧ ಸಹಕಾರ ಕ್ಷೇತ್ರಗಳಿಂದ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು. ಅ.20ರಿಂದ 28ರವರೆಗೆ 47 ಅಭ್ಯರ್ಥಿಗಳು ಒಟ್ಟು 59 ನಾಮಪತ್ರ ಸಲ್ಲಿಸಿದ್ದಾರೆ. ವಿವಿಧ ಸಹಕಾರ ಕ್ಷೇತ್ರಗಳಿಂದ
ಮುಖಂಡರು ನಾಮಪತ್ರ ಸಲ್ಲಿಸಿದ್ದಾರೆ. ಗುರುವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಳೆ ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಕೋವಿಡ್ ನಿಯಮ ಉಲ್ಲಂಘನೆ
ನಾಮಪತ್ರ ಸಲ್ಲಿಕೆ ವೇಳೆ ಕೇವಲ ಐದು ಮಂದಿಗೆ ಅವಕಾಶ ನೀಡಲಾಗಿತ್ತು. ಆದರೆ ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲೂ ಯಾವುದೇ ಮುಂಜಾಗ್ರತ ಕ್ರಮ ಅನುಸರಿಸದೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಗುಂಪು-ಗುಂಪಾಗಿ ಬ್ಯಾಂಕ್ ಪ್ರವೇಶಿಸಲು ಮುಕ್ತ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬ್ಯಾಂಕ್ ಆವರಣ ರಾಜಕೀಯ ಪಕ್ಷಗಳ ಕಾರ್ಯಕರ್ತರಿಂದ ತುಂಬಿತ್ತು. ಇದರಿಂದ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಬ್ಯಾಂಕ್ ಆವರಣದೊಳಗೆ ಪ್ರವೇಶಕ್ಕೆ ಪತ್ರಕರ್ತರು ಹಾಗೂ ಬ್ಯಾಂಕ್ ಸಿಬ್ಬಂದಿಗಳು ಪರದಾಡಬೇಕಾಯಿತು. – ಎಂ.ಶಿವರಾಜು