Advertisement

ಮಂಡ್ಯ : ಅತ್ತೆಯನ್ನೇ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಅಳಿಯಂದಿರ ಬಂಧನ

07:19 PM Jul 16, 2021 | Team Udayavani |

ಮoಡ್ಯ: ಕೆ.ಆರ್.ಪೇಟೆ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಅತ್ತೆಯ ಶೀಲಶಂಕಿಸಿ ಆಕೆಯ ಅಳಿಯಂದಿರೇ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಆಟೋದಲ್ಲಿ ಶವವನ್ನು ತೆಗೆದುಕೊಂಡು ಹೋಗಿ ಕೆಆರ್‌ಎಸ್ ಹಿನ್ನೀರಿನ ಕಾವೇರಿ ನದಿಗೆ ಎಸೆದು ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಘಟನೆ ನಡೆದ ನಾಲ್ಕು ದಿನದಲ್ಲಿ ಬಂಧಿಸಿದ್ದಾರೆ.

Advertisement

ವಿಠಲಾಪುರ ಗ್ರಾಮದ ನಿವಾಸಿಗಳಾದ ಮೃತಳ ಅಳಿಯ ಅವಿನಾಶ್(26) ಮತ್ತು ಮೃತಳ ಭಾವಿ ಅಳಿಯ ರವಿಕುಮಾರ್(24) ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆಯ ವಿವರ: ವಿಠಲಾಪುರ ಗ್ರಾಮದ ಲೇಟ್ ಶ್ರೀಧರ್ ಅವರ ಪತ್ನಿ ಲೀಲಾವತಿ(37) ಅವರನ್ನು ಜು.9ರಂದು ರಾತ್ರಿ ಆರೋಪಿಗಳಾದ ಅವಿನಾಶ ಮತ್ತು ರವಿಕುಮಾರ್ ಅವರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಶವವನ್ನು ಆಟೋದಲ್ಲಿ ಸಾಗಿಸಿ ಸಂಗಾಪುರ ಬಳಿ ಕೆಆರ್‌ಎಸ್ ಹಿನ್ನೀರಿನಲ್ಲಿ ನಿರ್ಮಿಸಿರುವ ಕೆ.ಆರ್.ಪೇಟೆ-ಕೆ.ಆರ್.ನಗರ ಸಂಪರ್ಕ ಕಲ್ಪಿಸುವ ಹೊಸ ಸೇತುವೆ ಬಳಿ ಕಾವೇರಿ ನದಿಯೊಳಕ್ಕೆ ಬಿಸಾಡಿ ನಂತರ ಬೂಕನಕೆರೆ ಹೋಬಳಿಯ ಹೊಡಕೆ ಶೆಟ್ಟಿಹಳ್ಳಿ ಗ್ರಾಮದ ತಮ್ಮ ಸಂಬಂಧಿಕರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದರು.

ಜು.11ರಂದು ಸದರಿ ಸೇತುವೆ ಬಳಿಯ ನೀರಿನಲ್ಲಿ ಲೀಲಾವತಿ ಅವರ ಶವ ಸಿಕ್ಕಿತ್ತು. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಸುರೇಶ್ ಅವರು ಅಪರಿಚಿತ ಶವ ಸಿಕ್ಕಿದ್ದು ವಾರಸುದಾರರು ಇದ್ದರೆ ಬರಬೇಕೆನ್ನುವ ಮಾಹಿತಿಯನ್ನು ಮೃತ ಮಹಿಳೆಯ ಪೋಟೋ ಸಹಿತ ಪತ್ರಿಕಾ ಪ್ರಕಟಣೆ ನೀಡಿದ್ದರು. ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಗಮನಿಸಿದ ವಿಠಲಾಪುರ ಗ್ರಾಮಸ್ಥರು ಇದು ಲೀಲಾವತಿ ಅವರ ಪೋಟೋ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ :ಸಿದ್ದರಾಮಯ್ಯ ಮುಂದಿನ ಸಿಎಂ : ಮೈಲಾರಲಿಂಗೇಶ್ವರ ದೇವಾಸ್ಥಾನದ ಗೊರವಯ್ಯ ಭವಿಷ್ಯ

Advertisement

ಜಿಲ್ಲಾ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ, ಎ.ಎಸ್ಪಿ ವಿ.ಧನಂಜಯ, ಡಿವೈಎಸ್‌ಪಿ ನವೀನ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ನಿರಂಜನ್, ಸಬ್‌ಇನ್ಸ್ಪೆಕ್ಟರ್ ಸುರೇಶ್, ತನಿಖೆ ಕೈಗೊಂಡು ಈ ಮಾಹಿತಿ ಬೆನ್ನತ್ತಿ ಹೋದಾಗ ಮೃತ ಲೀಲಾವತಿ ಅವರ ಹಿರಿಯ ಮಗಳ ಗಂಡ ಅವಿನಾಶ್ ಮತ್ತು ಕಿರಿಯ ಮಗಳನ್ನು ಕೊಟ್ಟು ವಿವಾಹ ಮಾಡಲು ವಿವಾಹ ನಿಶ್ಚಯವಾಗಿದ್ದ ರವಿಕುಮಾರ್ ಅವರು ಘಟನೆ ನಡೆದ ದಿನದಿಂದಲೂ ಗ್ರಾಮದಿಂದ ನಾಪತ್ತೆಯಾಗಿದ್ದರು. ಇಬ್ಬರನ್ನೂ ಹೊಡಕೆಶೆಟ್ಟಿಹಳ್ಳಿ ಗ್ರಾಮದ ಅವರ ಸಂಬಂಧಿಕರ ಮನೆಯಲ್ಲಿ ಗುರುವಾರ ಪತ್ತೆ ಮಾಡಿ ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದಾಗ ಮೃತ ಲೀಲಾವತಿ ಅವರೊಂದಿಗೆ ಕೌಟುಂಬಿಕ ಕಲಹ ನಡೆಯುತ್ತಿದ್ದ ಕಾರಣ ಹಾಗೂ ಆಕೆಯ ನಡತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ತನಿಖಾ ತಂಡದಲ್ಲಿ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ನಿರಂಜನ್, ಸಬ್‌ಇನ್ಸ್ಪೆಕ್ಟರ್ ಸುರೇಶ್, ಎಎಸ್‌ಐ ಕುಮುದಾ, ಅರುಣ್, ನಾಗರಾಜು, ಕುಮಾರ್, ಪ್ರಶಾಂತ್ ಇತರರಿದ್ದರು. ತನಿಖಾ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ, ಎಎಸ್ಪಿ ವಿ.ಧನಂಜಯ ಮತ್ತು ಡಿವೈಎಸ್ಪಿ ನವೀನ್‌ಕುಮಾರ್ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next