Advertisement
ಪ್ರತೀ ಚುನಾವಣೆಯಲ್ಲೂ ಅನಿರೀಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದ್ದ ಬಿಜೆಪಿ, ಈ ಬಾರಿ ಅಳೆದು ತೂಗಿ ಯಾವುದೇ ಹೊಂದಾಣಿಕೆ ಇಲ್ಲದ ರಾಜಕಾರಣಕ್ಕೆ ಅಡಿಗಲ್ಲು ಹಾಕಿದ್ದು, ನಿರೀಕ್ಷೆಯಂತೆ ಸಂಭಾವ್ಯ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದೆ.
Related Articles
Advertisement
ಫೈಟರ್ ರವಿಗೆ ತಪ್ಪಿದ ಟಿಕೆಟ್: ನಾಗಮಂಗಲ ಕ್ಷೇತ್ರ ದಲ್ಲಿ ಸಂಚಲನ ಮೂಡಿಸಿದ್ದ ಫೈಟರ್ ರವಿ ಆಲಿಯಾಸ್ ಮಲ್ಲಿಕಾರ್ಜುನ ಟಿಕೆಟ್ ಪೈಪೋಟಿಯಲ್ಲಿದ್ದರು. ಕ್ಷೇತ್ರದಲ್ಲಿ ಸಂಚರಿಸಿ ಬಿಜೆಪಿ ಮತ ಬ್ಯಾಂಕ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಇತ್ತೀಚೆಗೆ ರೌಡಿಶೀಟರ್ ಎಂಬ ಹಣೆಪಟ್ಟಿಯೂ ಸುತ್ತಿಕೊಂಡಿತು. ಅಲ್ಲದೆ, ಪ್ರಧಾನಿ ಮೋದಿ ಕೈಮುಗಿದಿದ್ದರಿಂದ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಈ ಎಲ್ಲ ಬೆಳವಣಿಗೆಯ ನಂತರ ಬಿಜೆಪಿ ಮುಜುಗರ ತಪ್ಪಿಸಿಕೊಳ್ಳಲು ಫೈಟರ್ ರವಿ ಹೆಸರು ಕೈಬಿಟ್ಟಿದೆ.
ತ್ರಿಕೋನ ಸ್ಪರ್ಧೆ: ಪ್ರತೀ ಚುನಾವಣೆಯಲ್ಲೂ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಪೈಪೋಟಿ ನೀಡಲು ಬಿಜೆಪಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ, ಈ ಬಾರಿ ಏಳು ಕ್ಷೇತ್ರಗಳಲ್ಲೂ ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಮಾಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಪೈಪೋಟಿ ನೀಡುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ.
ಮಂಡ್ಯ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಡಿ.ಜಯರಾಂ ಪುತ್ರ ಅಶೋಕ್ ಜಯರಾಂ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕೆ.ಆರ್.ಪೇಟೆ ಸಚಿವ ನಾರಾಯಣಗೌಡ, ಶ್ರೀರಂಗಪಟ್ಟಣ ಸಚ್ಚಿದಾನಂದ, ಮೇಲುಕೋಟೆ ಡಾ.ಇಂದ್ರೇಶ್, ಮದ್ದೂರು ಎಸ್. ಪಿ.ಸ್ವಾಮಿ, ನಾಗಮಂಗಲ ಸುಧಾ ಶಿವರಾಮೇಗೌಡ, ಮಳವಳ್ಳಿ ಬಿ.ಮುನಿರಾಜು ಎಲ್ಲರೂ ಕೈ-ದಳಕ್ಕೆ ಪೈಪೋಟಿ ನೀಡುವ ಅಭ್ಯರ್ಥಿಗಳಾಗಿದ್ದಾರೆ.
– ಎಚ್.ಶಿವರಾಜು