Advertisement

WHO ಗೆ ಮಂಡ್ಯ ಮೂಲದ ಡಾ| ವಿವೇಕ್‌ ಮೂರ್ತಿ ನೇಮಕ?

01:22 AM Jan 11, 2024 | Team Udayavani |

ವಾಷಿಂಗ್ಟನ್‌: ಅಮೆರಿಕದ ಮುಖ್ಯ ವೈದ್ಯಾಧಿಕಾರಿ (ಸರ್ಜನ್‌ ಜನರಲ್‌), ಮಂಡ್ಯ ಮೂಲದ ಡಾ| ವಿವೇಕ್‌ ಮೂರ್ತಿ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ ವ್ಯವಸ್ಥಾಪಕ ಮಂಡಳಿಗೆ ಅಮೆರಿಕದ ಪ್ರತಿನಿಧಿಯಾಗಿ ಅಧ್ಯಕ್ಷ ಜೋ ಬೈಡೆನ್‌ ನಾಮನಿರ್ದೇಶನ ಮಾಡಿದ್ದಾರೆ.

Advertisement

ಅವರ ನಾಮನಿರ್ದೇಶನ ಅಮೆರಿಕದ ಸೆನೆಟ್‌ನಲ್ಲಿ 2022ರ ಅಕ್ಟೋಬರ್‌ನಿಂದ ಬಾಕಿ ಇದ್ದ ಕಾರಣ ಅಮೆರಿಕ ಅಧ್ಯಕ್ಷರು ಸೆನೆಟ್‌ಗೆ ಪುನಃ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. 2021ರ ಮಾಚ್‌ನಲ್ಲಿ ಅಮೆರಿಕದ 21ನೇ ಮುಖ್ಯ ವೈದ್ಯಾಧಿಕಾರಿಯಾಗಿ ಮೂರ್ತಿ ಅವರನ್ನು ನೇಮಿಸಲಾಯಿತು. ಬರಾಕ್‌ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮೂರ್ತಿ 19ನೇ ಮುಖ್ಯ ವೈದ್ಯಾಧಿಕಾರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next