Advertisement

ಬಾಲಿವುಡ್ ನಟಿ ಮಂದಿರ ಬೇಡಿ ಪತಿ, ನಿರ್ದೇಶಕ ರಾಜ್ ಕೌಶಲ್ ಹೃದಯಾಘಾತದಿಂದ ನಿಧನ

10:43 AM Jun 30, 2021 | Team Udayavani |

ಮುಂಬಯಿ: ಬಾಲಿವುಡ್ ನಟಿ, ಫ್ಯಾಶನ್ ಡಿಸೈನರ್ ಮಂದಿರ ಬೇಡಿ ಪತಿ, ನಿರ್ದೇಶಕ, ನಿರ್ಮಾಪಕ ರಾಜ್ ಕೌಶಲ್ (49ವರ್ಷ) ಬುಧವಾರ (ಜೂನ್ 30) ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:BMW 5 Series ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆ: ಉತ್ಕೃಷ್ಟ ಡ್ಯಾಶ್‌ಬೋರ್ಡ್‌, ವಿಶಾಲ ಒಳಾಂಗಣ

ಪ್ರಾಥಮಿಕ ವರದಿಗಳ ಪ್ರಕಾರ, ರಾಜ್ ಕೌಶಲ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಆಘಾತ ವ್ಯಕ್ತಪಡಿಸಿರುವುದಾಗಿ ಹೇಳಿದೆ. ಇಷ್ಟೊಂದು ಬೇಗ ನಾವು ಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್ ಕೌಶಲ್ ಅವರನ್ನು ಕಳೆದುಕೊಳ್ಳುವಂತಾಗಿದೆ. ಇದೊಂದು ಆಘಾತಕಾರಿ ಸುದ್ದಿ. ನನ್ನ ಮೊದಲ ಸಿನಿಮಾ ಮೈ ಬ್ರದರ್ ನಿಖಿಲ್ ನಿರ್ಮಾಪಕನನ್ನು ಕಳೆದುಕೊಂಡಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಒನಿರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಏತನ್ಮಧ್ಯೆ ರಾಜ್ ಕೌಶಲ್ ನಿಧನದ ಸುದ್ದಿಯನ್ನು ಕುಟುಂಬ ಸದಸ್ಯರು ಇನ್ನಷ್ಟೇ ಖಚಿತಪಡಿಸಬೇಕಾಗಿದೆ ಎಂದು ವರದಿ ಹೇಳಿದೆ. ಮಂದಿರ ಬೇಡಿ ರಾಜ್ ಕೌಶಲ್ ಅವರನ್ನು 1999ರ ಫೆಬ್ರುವರಿ 4ರಂದು ವಿವಾಹವಾಗಿದ್ದರು. ದಂಪತಿಗೆ 2011ರಲ್ಲಿ ಪುತ್ರ ಜನಿಸಿದ್ದು, 2020ರ ಅಕ್ಟೋಬರ್ ನಲ್ಲಿ 4ವರ್ಷದ ಹೆಣ್ಣು ಮಗುವನ್ನು (ತಾರಾ ಬೇಡಿ ಕೌಶಲ್) ದತ್ತು ಪಡೆದಿದ್ದರು.

ರಾಜ್ ಕೌಶಲ್ ಅವರು ಪ್ಯಾರ್ ಮೈನೆ ಕಭೀ, ಕಭೀ (1999), ಶಾದಿ ಕಾ ಲಡ್ಡೂ (2004), ಮೈ ಬ್ರದರ್ (2005) ನಂತಹ ಹಲವು ಸಿನಿಮಾಗಳ ನಿರ್ಮಾಪಕರಾಗಿದ್ದಾರೆ. ನಂತರ ನಿರ್ದೇಶನದಲ್ಲಿ ತೊಡಗಿದ್ದರು ಎಂದು ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next