ಗದಗ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ತಿನ ನೂರಾರು ಕಾರ್ಯಕರ್ತರು ಅವಳಿ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಿದರು.
ನಗರದ ಮುಳಗುಂದ ರಸ್ತೆಯ ಹುಡ್ಕೋ ಅಂಬಾಭವಾನಿ ದೇವಸ್ಥಾನ ಬಳಿ ಬೈಕ್ ರ್ಯಾಲಿಗೆ ಬಿಜೆಪಿ ಮುಖಂಡ ರವಿ ದಂಡಿನ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವೀರಣ್ಣ ಹೇಮಾದ್ರಿ ಚಾಲನೆ ನೀಡಿದರು. ರವಿ ದಂಡಿನ ಮಾತನಾಡಿ, ರಾಮ ಮಂದಿರ ಎಂಬುದು ಹಿಂದೂಗಳ ಶತಮಾನದ ಕನಸಾಗಿದ್ದು, ಸಾಕಾರಗೊಳ್ಳುತ್ತಿದೆ.
ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ರಾಮ ಭಕ್ತರ ಆಶಯದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿವಾದ ಸುಖಾಂತ್ಯಗೊಂಡಿದೆ. ಇದು ದೇಶದ ಬಹುಸಂಖ್ಯಾತ ಹಿಂದೂಗಳಿಗೆ ಸಂದ ಜಯ. ಮಂದಿರ ನಿರ್ಮಾಣ ಕಾರ್ಯದಲ್ಲಿ ಸಾರ್ವಜನಿಕರು ತನು, ಮನ, ಧನಗಳೊಂದಿಗೆ ಕೈಜೋಡಿಸಿ, ರಾಮ ಮಂದಿರ ನಿಧಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಹುಣಸೋಡು ದುರಂತ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ : ಸಿಎಂ
ಬೈಕ್ ರ್ಯಾಲಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ರಾಘವೇಂದ್ರ ಹಬೀಬ, ಮಾರುತಿ ಪವಾರ, ಗಿರೀಶ ನರಗುಂದಕರ, ಸಚಿನ ಮಡಿವಾಳರ, ರವಿ ಮಾನ್ವಿ, ಎಚ್. ಸಂದೀಪ, ವಿಶ್ವನಾಥ ಅಂಗಡಿ, ರಾಜೇಶ ರಾಠೊಡ, ರಾಹುಲ್ ಅರಳಿ, ಅನೀಲ ಅಬ್ಬಿಗೇರಿ, ಅಶ್ವಿನಿ ಜಗತಾಪ, ವಂದನಾ ವೆರ್ಣೇಕರ, ಸ್ವರೂಪ ಹುಬ್ಬಳ್ಳಿ, ಕಿಶನ್ ಮೆರವಾಡೆ, ಮಹಾಂತೇಶ ಮಡಿವಾಳರ ಮತ್ತಿತರರು ಪಾಲ್ಗೊಂಡಿದ್ದರು.