Advertisement

ಸರ್ಕಾರಿ ನೌಕರರಿಗೆ ಆರೋಗ್ಯ ಸೇತು ಆ್ಯಪ್‌ ಬಳಕೆ ಕಡ್ಡಾಯ

07:17 AM May 22, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಹರಡುವಿಕೆ ನಿಯಂತ್ರಿಸಲು ಸರ್ಕಾರಿ ನೌಕರರು ಕಡ್ಡಾಯವಾಗಿ “ಆರೋಗ್ಯ ಸೇತು’ ಆ್ಯಪ್‌ ಬಳಕೆ ಮಾಡಬೇಕು. ಇಲ್ಲದಿದ್ದರೆ ಅಂತಹ ಸಿಬ್ಬಂದಿಗೆ ಕಚೇರಿಗೆ ಪ್ರವೇಶ ದೊರೆಯದಂತೆ ಇಲಾಖೆ ಮುಖ್ಯಸ್ಥರು ನೋಡಿಕೊಳ್ಳುತ್ತಾರೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಗ್ಯ ಸೇತು ಆ್ಯಪ್‌ ಪ್ರತಿ ನಾಗರಿಕನ ಸುರಕ್ಷಾ ಕವಚವಾಗಿದೆ.

Advertisement

ಪ್ರತಿಯೊಬ್ಬ ಸರ್ಕಾರಿ  ಸಿಬ್ಬಂದಿಗಳೂ ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಇದನ್ನು ಬಳಸದೇ ಕಚೇರಿಗೆ ಬರುವ ಸಿಬ್ಬಂದಿಯನ್ನು ಕಚೇರಿ ಒಳಗೆ ಬಿಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೋವಿಡ್‌ 19 ಸಾಂಕ್ರಾಮಿಕ ರೋಗದ  ವಿರುದಟಛಿ ಆರೋಗ್ಯ ಸೇತು ಪ್ರಬಲ ಅಸ್ತ್ರಉವಾಗಿ ಬಳಕೆಯಾಗುತ್ತಿದೆ. 10 ಕೋಟಿಗೂ ಅಧಿಕ ಜನರು ಇದನ್ನು ಬಳಸುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿ ಮತ್ತೆ ಬಳಸಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ  ನೀಡುತ್ತದೆ.

ಬಳಕೆದಾರರ ಸುರಕ್ಷತಾ ದೃಷ್ಟಿಯಿಂದ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ಮಾಹಿತಿಯನ್ನೂ ಈ ಆ್ಯಪ್‌ ನೀಡುತ್ತದೆ. ಸೋಂಕಿತರು ನಿಕಟದಲ್ಲಿದ್ದರೆ ಬಳಕೆದಾರರನ್ನು ಎಚ್ಚರಿಸುತ್ತದೆ. ಕೋವಿಡ್‌ 19 ಕುರಿತಾದ ಎಲ್ಲಾ ಸಂದೇಹ, ಗೊಂದಲಗಳಿಗೆ ಉತ್ತರವನ್ನೂ ನೀಡುವ ಈ ಆ್ಯಪ್‌ ಕೋವಿಡ್‌ 19 ವಿರುದ್ಧದ ಹೋರಾಟದಲ್ಲಿ ಪರಿಣಾಮಕಾರಿ ಸಾಧನವಾಗಿದೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಈವರೆಗೆ 63 ಲಕ್ಷ ಜನ ಆರೋಗ್ಯ ಸೇತು ಆ್ಯಪ್‌ ಬಳಸುತ್ತಿದ್ದು, ಇದರಲ್ಲಿನ ಸ್ವಯಂ ನಿಗಾ ಪ್ರಕ್ರಿಯೆ ಮೂಲಕ 2,255 ಜನರಿಗೆ ರೆಡ್‌ ಫ್ಲಾಗ್‌ ಅಲರ್ಟ್‌ ನೀಡಲಾಗಿದೆ. ಅವರೆಲ್ಲರಿಗೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳು ವಂತೆ  ಸಂದೇಶ ಹೋಗಿದೆ. ಇವರಲ್ಲಿ 233  ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದು 17 ಮಂದಿಗೆ ಪಾಸಿಟಿವ್‌ ಬಂದಿದೆ. ಅಂದರೆ ಆ್ಯಪ್‌ ಮೂಲಕ ಪರೀಕ್ಷೆಗೊಳ ಪಟ್ಟವರಲ್ಲಿ ರಾಜ್ಯದ ಶೇ.7.5 ಪ್ರಕರಣಗಳು ಪಾಸಿಟಿವ್‌ ಬಂದಿದ್ದು ರಾಷ್ಟ್ರೀಯ ಸರಾ ಸರಿ ಶೇ.30 ರಷ್ಟಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next