Advertisement
ಇಲ್ಲಿನ ಸಂಪರ್ಕ ರಸ್ತೆಯ ಸುಮಾರು 300 ಮೀ. ನಷ್ಟು ಉದ್ದದಲ್ಲಿ ತ್ಯಾಜ್ಯ ರಾಶಿ ಸುಮಾರು 100ಮೀ. ಎತ್ತರದಲ್ಲಿ ಬಿದ್ದಿರುವುದರಿಂದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಕಂಜಿರಾಡಿ ಭಾಗಕ್ಕೆ ಸಂಪರ್ಕಿಸಲು ಪರ್ಯಾಯ ರಸ್ತೆಯನ್ನೇ ಅವಲಂಬಿಸ ಬೇಕಾಗಿದೆ. ರಸ್ತೆಯಲ್ಲಿ ಬಿದ್ದಿರುವ ತ್ಯಾಜ್ಯ ವನ್ನು ತೆಗೆದು ವಾಹನಗಳಿಗೆ ಅವಕಾಶ ನೀಡುವ ನೆಲೆಯಲ್ಲಿ ಮಂಗಳೂರು ಪಾಲಿಕೆಯು ಕಾಮಗಾರಿ ನಡೆಸುತ್ತಿದೆ. ಎರಡು ಬುಲ್ಡೋಜರ್ ಸಹಾಯದಿಂದ ಕೆಲವು ದಿನಗಳಿಂದ ರಸ್ತೆಯ ತ್ಯಾಜ್ಯವನ್ನು ತೆಗೆದು ಪಕ್ಕಕ್ಕೆ ಸರಿಸಲಾಗುತ್ತಿದೆ. ಆದರೆ ತೆಗೆದ ತ್ಯಾಜ್ಯ ಮತ್ತೆ ಜರಿದು ಅದೇ ಜಾಗಕ್ಕೆ ಬೀಳುತ್ತಿರುವುದರಿಂದ ಕೆಲಸ ಮಾಡುವುದೇ ಇಲ್ಲಿ ಕಷ್ಟವಾಗಿದೆ.
Related Articles
Advertisement
ಇಂಧೋರ್‌ನಲ್ಲಿ ಸುಮಾರು 13 ಲಕ್ಷ ಟನ್ ತ್ಯಾಜ್ಯ ರಾಶಿಯನ್ನು ವಿಲೇ ಮಾಡಿ ಅನುಭವ ಇರುವ ತಜ್ಞರ ತಂಡವೊಂದು ಸೆ. 2ರಂದು ಮಂದಾರಕ್ಕೆ ಭೇಟಿ ನೀಡಲಿದೆ. ಇಲ್ಲಿನ ತ್ಯಾಜ್ಯವನ್ನು ವಿಲೇ ಮಾಡುವ ಬಗ್ಗೆ ವರದಿ ನೀಡಲಿದ್ದಾರೆ. ಈಗಾಗಲೇ ಚೆನ್ನೈ, ಕೊಯಮತ್ತೂರು ಸಹಿತ ವಿವಿಧ ತಜ್ಞರ ತಂಡ ಆಗಮಿಸಿ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಇದೆಲ್ಲದರ ಪರಾಮರ್ಶೆ ಆದ ಬಳಿಕ ಯಾವ ರೀತಿಯಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಬಹುದು ಎಂಬುದರ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ಮನಪಾ ಪರಿಸರ ಅಧಿಕಾರಿ ಮಧು ‘ಸುದಿನ’ಕ್ಕೆ ತಿಳಿಸಿದ್ದಾರೆ.
ಸೆ. 2ರಂದು ಇಂದೋರ್ ತಜ್ಞರ ತಂಡ ಆಗಮನಇಂಧೋರ್ನಲ್ಲಿ ಸುಮಾರು 13 ಲಕ್ಷ ಟನ್ ತ್ಯಾಜ್ಯ ರಾಶಿಯನ್ನು ವಿಲೇ ಮಾಡಿ ಅನುಭವ ಇರುವ ತಜ್ಞರ ತಂಡವೊಂದು ಸೆ. 2ರಂದು ಮಂದಾರಕ್ಕೆ ಭೇಟಿ ನೀಡಲಿದೆ. ಇಲ್ಲಿನ ತ್ಯಾಜ್ಯವನ್ನು ವಿಲೇ ಮಾಡುವ ಬಗ್ಗೆ ವರದಿ ನೀಡಲಿದ್ದಾರೆ. ಈಗಾಗಲೇ ಚೆನ್ನೈ, ಕೊಯಮತ್ತೂರು ಸಹಿತ ವಿವಿಧ ತಜ್ಞರ ತಂಡ ಆಗಮಿಸಿ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಇದೆಲ್ಲದರ ಪರಾಮರ್ಶೆ ಆದ ಬಳಿಕ ಯಾವ ರೀತಿಯಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಬಹುದು ಎಂಬುದರ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ಮನಪಾ ಪರಿಸರ ಅಧಿಕಾರಿ ಮಧು ‘ಸುದಿನ’ಕ್ಕೆ ತಿಳಿಸಿದ್ದಾರೆ.