Advertisement

ಮಂದಾರ ಸಂಘಟನೆ : ‘ದೂತ ಘಟೋತ್ಕಚ’ನಾಟಕ ಪ್ರಸ್ತುತಿ

07:28 PM Mar 26, 2022 | Team Udayavani |

ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಗಾಂಧಿನಗರ ಇವರ ನೂತನ ನಾಟಕ ‘ದೂತ ಘಟೋತ್ಕಚ’ ತೆಕ್ಕಟ್ಟೆಯ ಹಯಗ್ರೀವ ಸಭಾಮಂಟಪದಲ್ಲಿ ಉದ್ಘಾಟನೆಗೊಂಡು ಪ್ರದರ್ಶನಗೊಂಡಿತು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮುದಾಯ ಕುಂದಾಪುರದ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಉದಯ ಗಾಂವ್ಕರ್, ತೆಕ್ಕಟ್ಟೆಯ ಭಾಗ ಕಳೆದ ಹಲವು ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರವಾಗಿ ಬೆಳವಣಿಗೆ ಹೊಂದುತ್ತಾ ಇದೆ.ನಾಲ್ಕು ಜನ ಕೂಡಿ ನೆಡೆಯುವ ಯಾವುದೇ ಘಟನೆಯೂ ಕೂಡ ಸಂತೋಷವನ್ನು ನೀಡುವಂತದ್ದು ಮತ್ತೆ ಹೀಗೆ ಒಡನಾಡುವುದರಿಂದ ನಮ್ಮ ಸಂಬಂಧಗಳನ್ನು ಶೋಧಿಸಿಕೊಳ್ಳುದಕ್ಕೆ ಸಾಧ್ಯ. ನಾಟಕ ನೋಡುವುದರ ಜೊತೆಗೆ ಪ್ರೇಕ್ಷಕನು ತನ್ನೊಳಗೆ ನಾಟಕ ಕಟ್ಟಿಕೊಂಡು ಆ ಮೂಲಕ ಹೊಸ ಆಯಾಮದಲ್ಲಿ ಜಗತ್ತನ್ನು ನೋಡುವುದಕ್ಕೆ ಸಾಧ್ಯ. ಅಂತಹದ್ದನ್ನು ಮಂದಾರದ ಈ ನಾಟಕ ಸಾಧ್ಯವಾಗಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನಾಟಕದ ಸಂಗೀತ ನಿರ್ದೇಶಕ ವಾಸು ಗಂಗೇರ ಕುಂದಾಪುರ, ನಿರ್ದೇಶಕ ರೋಹಿತ್. ಎಸ್. ಬೈಕಾಡಿ, ಹಾಗೂ ಹಯಾಗ್ರೀವ ಸಭಾ ಮಂಟಪದ ಮುಖ್ಯಸ್ಥರಾದ ವೆಂಕಟೇಶ್ ವೈದ್ಯ ಉಪಸ್ಥಿತರಿದ್ದರು. ಸಚಿನ್ ಅಂಕೋಲಾ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next