Advertisement

ಮಂಡಗದ್ದೆ: ಲಾರಿ ಮತ್ತು ಬಸ್ ಢಿಕ್ಕಿ; 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

05:40 PM Dec 30, 2021 | Team Udayavani |

ತೀರ್ಥಹಳ್ಳಿ : ಮಂಡಗದ್ದೆ ಸಮೀಪ ಲಾರಿ ಮತ್ತು ಸಹ್ಯಾದ್ರಿ ಬಸ್ ನಡುವೆ ಗುರುವಾರ ಅಪಘಾತ ಸಂಭವುಸಿ 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಲಾರಿ ಚಾಲಕನಿಗೆ ತೀವ್ರ ಗಾಯವಾಗಿದ್ದು ಆತನನ್ನು ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Advertisement

ಸಕ್ರೆಬೈಲು ಮತ್ತು ಮಂಡಗದ್ದೆಯ ರಸ್ತೆ ಮಧ್ಯೆ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುತ್ತಿದ್ದ ಬಸ್ ಮತ್ತು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕುಂಟವಳ್ಳಿಯ ಲಾರಿ ನಡುವೆ ಮುಖಾಮುಖಿ ಢಿಕ್ಕಿಯಾಗಿದ್ದು, ಲಾರಿ ಚಾಲಕ ಆದರ್ಶ ಎಂಬುವರಿಗೆ ತೀವ್ರ ಸ್ವರೂಪದ
ಗಾಯಗಳಾಗಿವೆ. ಅವರನ್ನ ಮಣಿಪಾಲ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next