Advertisement

ಮಂಚಿಕೆರೆ ಭೂಮಿ ಬಿರುಕು: ಭೂ ವಿಜ್ಞಾನಿಗಳಿಂದ ಪರಿಶೀಲನೆ

11:48 AM Jun 21, 2019 | Team Udayavani |

ಉಡುಪಿ: ಮಣಿಪಾಲ-ಅಲೆವೂರು ರಸ್ತೆಯ ಮಂಚಿಕೆರೆ ನಾಗಬ್ರಹ್ಮಸ್ಥಾನ ಮುಂಭಾಗದ ಕಾಲನಿ ಸಮೀಪ ಭೂಮಿಯಲ್ಲಿ ಬಿರುಕು ಕಂಡುಬಂದಿರುವ ಪ್ರದೇಶಕ್ಕೆ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅಂತರ್ಜಲ ಪ್ರಾಧಿಕಾರದ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ವಿಜ್ಞಾನಿಗಳು ಸುಮಾರು ಒಂದೂವರೆ ಗಂಟೆಯ ಕಾಲ ಮಂಚಿಕೆರೆಯ ಭೂ ವೈಜ್ಞಾನಿಕ ರಚನೆ ಬಗ್ಗೆ ಪರಿಶೀಲನೆ ನಡೆಸಿದರು.

ಭೂಮಿ ಉಷ್ಣತೆ ಹೆಚ್ಚಿದೆ!

ಇಲ್ಲಿ ಒಂದೆಡೆ ತಗ್ಗು ಮತ್ತೂಂದು ಕಡೆ ಎತ್ತರ ಪ್ರದೇಶ ಇದ್ದು, ಮೇಲ್ಭಾಗದಲ್ಲಿ ಮುರ ಕಲ್ಲು ಮತ್ತು ಒಳಗಿನ ಪದರದಲ್ಲಿ ಜೇಡಿ ಮಣ್ಣು ಇದೆ. ಅಂತರ್ಜಲ ಕಡಿಮೆಯಾಗಿರುವ ಪರಿಣಾಮ ಭೂಮಿ ಒಳಗೆ ಉಷ್ಣತೆ ಹೆಚ್ಚಾಗಿದೆ. ಮಳೆನೀರು ಇಂಗಿದಾಗ ಮುರಕಲ್ಲಿನ ಅಡಿ ಭಾಗದಲ್ಲಿರುವ ಮೃದುವಾದ ಜೇಡಿ ಮಣ್ಣು ನಿಧಾನವಾಗಿ ಕೊಚ್ಚಿ ಹೋಗುತ್ತಿದೆ. ಆದ್ದರಿಂದ ಬಿರುಕು ಕಾಣಿಸಿಕೊಂಡಿದೆ. ಇದಕ್ಕಾಗಿಭಯಪಡಬೇಕಾಗಿಲ್ಲ. ಪಶ್ಚಿಮ ಘಟ್ಟಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿರುತ್ತದೆ. ಮೇಲ್ನೋಟಕ್ಕೆ ಈ ಬಿರುಕು ಭೂಕಂಪನದಿಂದ ಆದಂತಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ರಾನ್‌ಜಿ ನಾಯಕ್‌ ತಿಳಿಸಿದ್ದಾರೆ.

ಸಂಶೋಧನೆ ಅಗತ್ಯ

Advertisement

ನಾಲ್ಕು ದಿಕ್ಕುಗಳಲ್ಲಿರುವ ಗುಹೆಗಳಿಂದಾಗಿ ಈ ಬಿರುಕು ಸಂಭವಿಸಿರಬಹುದು ಎಂಬುದನ್ನು ನಾವು ತತ್‌ಕ್ಷಣ ಹೇಳಲಾಗದು. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಸಂಶೋಧನೆ ಮಾಡಿದ ಬಳಿಕವಷ್ಟೇ ಹೇಳಬಹುದು. ಮೇಲ್ನೋಟಕ್ಕೆ ಇದು ಸಾಮಾನ್ಯ ಪ್ರಕ್ರಿಯೆ ಎಂದರು.

ಜಿಲ್ಲಾಧಿಕಾರಿಗೆ ವರದಿ

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ರಾನ್‌ಜಿ ನಾಯಕ್‌ ನೇತೃತ್ವದಲ್ಲಿ ಭೂ ವಿಜ್ಞಾನಿಗಳಾದ ಮಹೇಶ್‌, ಡಾ| ಮಹದೇಶ್ವರ, ಗೌತಮ್‌ ಶಾಸ್ತ್ರಿ, ಸಂಧ್ಯಾ, ಅಂತರ್ಜಲ ಪ್ರಾಧಿಕಾರದ ಪ್ರಭಾರ ಹಿರಿಯ ಭೂ ವಿಜ್ಞಾನಿ ಡಾ| ದಿನಕರ ಶೆಟ್ಟಿ, ಕಂದಾಯ ನಿರೀಕ್ಷಕ ಉಪೇಂದ್ರ ಅವರು ಮಂಚಿಕೆರೆಯ ಭೌಗೋಳಿಕ ಶಿಲಾ ರಚನೆಯ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಸಿದ್ಧಪಡಿಸಲಿದ್ದು, ಬಳಿಕ ಜಿಲ್ಲಾಧಿಕಾರಿಗೆ ಸಲ್ಲಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next