ಮಾಗಡಿ: ಕಳೆದ ವರ್ಷದ ಸುರಿದ ಧಾರಾಕಾರ ಮಳೆಗೆ ಮಂಚನಬೆಲೆ ಹಿಂಭಾಗದ ಸೇತುವೆ ರಸ್ತೆ ಕೊಚ್ಚಿ ಹೋಗಿತ್ತು. 6 ತಿಂಗಳು ಕಳೆದರೂ ಮುರಿದ ಸೇತುವೆ ಮಾತ್ರ ಶಾಶ್ವತವಾದ ಸೇತುವೆ ನಿರ್ಮಾ ಣಗೊಳ್ಳಲಿಲ್ಲ. ಸೇತುವೆ ಅಡ್ಡಲಾಗಿ ಮಣ್ಣು ಸುರಿದು ತಾತ್ಕಾಲಿಕ ರಸ್ತೆಯಷ್ಟೆ ಮಾಡಿ ಕೈಚಲ್ಲಿದ ಜಿಲ್ಲಾಡಳಿತ, ಇಲ್ಲಿಯವರೆಗೂ ಶಾಶ್ವತವಾದ ಸೇತುವೆ ಮಾಡಲಿಲ್ಲ. ಶಾಶ್ವತವಾದ ಸೇತುವೆ ಆಗುವುದು ಯಾವಾಗ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.
ತಾಲೂಕಿನ ಮಾಡಬಾಳ್ ಹೋಬಳಿ ಹಂಚೀಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಮಂಚನಬೆಲೆ ಜಲಾಶಯವಿದ್ದು, ಕಳೆದ ಬಾರಿ ಸುರಿದ ಬಾರಿ ಮಳೆಗೆ ಜಲಾಶಯದಿಂದ ಹೆಚ್ಚುವರಿ ನೀರು ಹರಿದ ಪರಿಣಾಮ ಡಾಂಬರೀಕರಣ ಗೊಂಡಿ ದ್ದ ಜಲಾಶಯದ ಹಿಂಭಾಗದ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು. ಇದರಿಂದ ರಸ್ತೆ ಸಂಚಾರವೇ ಕಡಿದು ಹೋಗಿತ್ತು. ಕಳೆದ ವರ್ಷ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಶಾಸಕರಾಗಿದ್ದ ಎ.ಮಂಜುನಾಥ್, ಮಾಜಿ ಶಾಸಕರಾಗಿದ್ದ ಎಚ್. ಸಿ. ಬಾಲಕೃಷ್ಣ ಸಹ ಭೇಟಿ ನೀಡಿ ತಾತ್ಕಾಲಿಕ ರಸ್ತೆ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳೆ ಚರ್ಚಿಸಿದ್ದರು. ಅದರಂತೆ ತಾತ್ಕಾಲಿಕ ರಸ್ತೆ ಆಗಿದ್ದು, ಇತ್ತೀಚಗೆ ಸುರಿಯುತ್ತಿರುವ ಮಳೆಗೆ ಮಣ್ಣಿನಿಂದ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಸಹ ಕೊಚ್ಚಿ ಹೋಗಿದೆ. ಇದರಿಂದ ಈ ಅಪಾಯದ ಸೇತುವೆ ಮೇಲೆ ಸಂಚರಿಸುವುದು ಭಯದ ವಾತಾವರಣ ನಿರ್ಮಾಣಗೊಂಡಿದೆ.
ಅದರಲ್ಲೂ ಮಹಿಳೆಯರು ಮಕ್ಕಳು, ದ್ವಿಚಕ್ರ ವಾಹನ ಸವಾರರು ಸಂಚರಿಸದೆ ಈ ರಸ್ತೆಯನ್ನು ಬಿಟ್ಟು ಸುಮಾರು 7 ಕಿ.ಮೀ. ಸುತ್ತಿಬಳಸಿ ಗ್ರಾಮಗಳಿಗೆ ಸಂಚರಿಸುವ ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ಮುಂಗಾರು ಆರಂಭಗೊಂಡಿದೆ. ಮಳೆಗಾಲವಾಗಿರುವುದರಿಂದ ಯಾವಾಗ ಬೇಕಾದರೂ ತಾತ್ಕಾಲಿಕವಾಗಿ ನಿರ್ಮಿಸಿರುವ ಮಣ್ಣಿನ ಸೇತುವೆ ಮಳೆಗೆ ಕೊಚ್ಚಿ ಹೋಗುವ ಆತಂಕವನ್ನು ಸ್ಥಳೀಯರು ಎದುರಿಸುತ್ತಿದ್ದಾರೆ.
ಸಂಚಾರ ಸ್ಥಗಿತವಾಗುವ ಆತಂಕ: ಮಂಚನಬೆಲೆ ಮೂಲಕ ಬೆಂಗಳೂರು ನಗರಕ್ಕೆ ಸಂಚಾರ ಸ್ಥಗಿತವಾಗುವ ಆತಂಕ ಎದುರಾಗುತ್ತದೆ. ಮಂಚನಬೆಲೆ ಜಲಾಶಯದ ಮಾರ್ಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ದೊ ಡ್ಡ ಆಲದಮರ, ಕೆಂಗೇರಿ, ಬೆಂಗಳೂರು ನಗರಕ್ಕೆ ಸಂಚರಿಸುವವರು ಇದ್ದು, ಸುಗಮ ಸಂಚಾ ರಕ್ಕೆ ಸಂಚಾಕಾರ ಉಂಟಾಗಲಿದೆ ಎಂಬ ಆತಂಕವಿದೆ.
Related Articles
ಪ್ರವಾಸಿಗರೂ ಅನನುಕೂಲ: ಪ್ರವಾಸಿಗರು ಸಾವ ನ ದುರ್ಗ ಏಕಶಿಲಾಬೆಟ್ಟ, ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ವೀಕ್ಷಣೆ ಮಾಡಿಕೊಂಡು ಮಂಚ ನ ಬೆಲೆ ಜಲಾ ಶಯ, ದೊಡ್ಡ ಆಲದ ಮರ ವೀಕ್ಷಣೆ ಮಾಡಿ ಒಂದು ದಿನ ಪ್ರವಾಸ ಕೈಗೊಂಡು ಮತ್ತೆ ನಗರಕ್ಕೆ ವಾಪಸ್ಸಾಗುತ್ತಿದ್ದರು. ಮಳೆಗೆ ಸೇತುವೆ ಕೊಚ್ಚಿ ಹೋದರೆ ಸಂಚಾರಕ್ಕೆ ತೊಂದರೆಯಾ ಗ ಬಹುದು. ಇದರಿಂದ ಪ್ರವಾಸಿಗರಿಗೆ ಅನನುಕೂಲ ಉಂಟಾಗಲಿದ್ದು,ವಾಹನ ಸಂಚಾರ ಹೇಗೆ ಎಂಬ ಭೀತಿ ಪ್ರವಾಸಿಗರನ್ನು ಸಹ ಬಿಟ್ಟಿಲ್ಲ.
ಶಾಸಕರಿಗೆ ಸೇತುವೆ ಸವಾಲು: ಶಾಸಕ ಎಚ್ .ಸಿ. ಬಾಲಕೃಷ್ಣಗೆ ಮಂಚನಬೆಲೆ ಹಿಂಭಾ ಗದ ಸೇತುವೆ ಸವಾಲಾಗಿದ್ದು, ಶೀಘ್ರದಲ್ಲಿಯೇ ಶಾಶ್ವತ ಸೇತುವೆಗೆ ಅಗತ್ಯ ಕ್ರಮ ಕೈಗೊಳ್ಳುವವರೇ ಕಾದು ನೀಡಬೇಕಿದೆ.
ಸಂಪರ್ಕ ಕಡಿತ: ಮಂಚನಬೆಲೆ ಜಲಾಶಯದ ಸಮೀಪದಲ್ಲೇ ಇರುವ ಸೇತುವೆ ಈಗ ಕುಸಿದಿರುವುದರಿಂದ ಸಂಪರ್ಕ ಕಡಿತವಾಗಿದ್ದು, ಮಕ್ಕಳು ಶಾಲಾ, ಕಾಲೇಜಿಗೆ ಹಾಗೂ ರೈತರು ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲು ಸಾಕಷ್ಟು ಸಮಸ್ಯೆಯಾಗಿದೆ. 7 ಕಿ.ಮೀ. ದೂರ ಬಳಸಿಕೊಂಡು ಮಂಚನಬೆಲೆ ಮತ್ತು ಬೆಂಗ ಳೂ ರಿಗೆ ತಲುಪುತ್ತಿದ್ದಾರೆ. ಕೂಡಲೇ ಕಾವೇರಿ ನೀರಾವರಿ ನಿಗಮದ ಜಲಾಶಯದ ನೀರು ಕಡಿಮೆಯಾಗುತ್ತಿದ್ದಂತೆ ಶಾಶ್ವತವಾಗಿ ಸೇತುವೆ ನಿರ್ಮಾಣ ಮಾಡಬೇಕೆಂದು ಮಂಚನಬೆಲೆ ಗ್ರಾಮಸ್ಥರು ಮಾಜಿ ಸಿಎಂ ಅವರಲ್ಲಿ ಒತ್ತಾಯಿ ಸಿದರೂ ಇಲ್ಲಿಯವರೆಗೂ ಶಾಶ್ವತವಾದ ಸೇತು ವೆ ರಸ್ತೆ ಆಗಿಲ್ಲ ಎಂದು ದೂರಿದ್ದಾರೆ.
ಮಂಚನಬೆಲೆ ಹಿಂಭಾಗದ ಕಳೆದ ವರ್ಷ ಮುರಿದು ಬಿದ್ದಿದ್ದು, ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶಾಶ್ವತವಾದ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ● ವೆಂಕಟೇಗೌಡ, ಕಾವೇರಿ ನೀರಾವರಿ ನಿಗಮ ಎಇಇ
ಪ್ರವಾಸೋಧ್ಯಮ ಮತ್ತು ಕಾವೇರಿ ನೀರಾವರಿ ಇಲಾಖೆ ಹಾಗೂ ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಬಂಧಪಟ್ಟ ಸಚಿವರಿಂದ ಅನುದಾನ ಮಂಜೂರಾತಿ ಮಾಡಿಸುವ ಮೂಲಕ ಶೀಘ್ರದಲ್ಲೇ ಶಾಶ್ವತ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ● ಎಚ್.ಸಿ.ಬಾಲಕೃಷ್ಣ, ಶಾಸಕ
– ತಿರುಮಲೆ ಶ್ರೀನಿವಾಸ್