“ಮನಸಾಗಿದೆ’ ಹೀಗೊಂದು ಚಿತ್ರ ಫೆ.25ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಅಭಯ್ ನಾಯಕರಾಗಿ ಎಂಟ್ರಿ ಕೊಡುತ್ತಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀರೋ ಆಗುವ ಸಲುವಾಗಿಯೇ ಕಳೆದ ಕೆಲ ವರ್ಷಗಳಿಂದ ತೆರೆಮರೆಯಲ್ಲಿ ಆ್ಯಕ್ಟಿಂಗ್, ಡ್ಯಾನ್ಸ್, ಫೈಟ್ಸ್ ಪ್ರಾಕ್ಟೀಸ್… ಹೀಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದ ಅಭಯ್, “ಮಸನಾಗಿದೆ’ ಚಿತ್ರದಲ್ಲಿ ಕಾಲೇಜು ಹುಡುಗನ ಪಾತ್ರ, ಲವರ್ ಬಾಯ್ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಮಾತನಾಡುವ ಅಭಯ್, “ನನಗೆ ಬಾಲ್ಯದಿಂದಲೂ ಸಿನಿಮಾದ ಕಡೆಗೆ ಆಸಕ್ತಿ.
ಕಳೆದ ಕೆಲ ವರ್ಷಗಳಿಂದ ಅದಕ್ಕಾಗಿ ಸಾಕಷ್ಟು ತರಬೇತಿ, ಅನುಭವ ಪಡೆದುಕೊಂಡಿದ್ದೇನೆ. ನನಗೆ ಸೂಕ್ತವೆನಿಸುವ ಕಥೆ ಮತ್ತು ಪಾತ್ರ ಸಿಕ್ಕಿದ್ದರಿಂದ, ಈ ಸಿನಿಮಾದ ಮೂಲಕ ಹೀರೋ ಆಗುತ್ತಿದ್ದೇನೆ. ಈ ಸಿನಿಮಾದಲ್ಲಿ ಎಲ್ಲರಿಗೂ ಕನೆಕ್ಟ್ ಆಗುವಂಥ ಕಥೆಯಿದೆ. ನನ್ನ ಪಾತ್ರ ಇಂದಿನ ಜನರೇಶನ್ ಹುಡುಗರನ್ನಪ್ರಸೆಂಟ್ ಮಾಡುವಂಥಿದೆ. ಸಾಕಷ್ಟು ಕನಸುಗಳನ್ನುಇಟ್ಟುಕೊಂಡು ಒಂದೊಳ್ಳೆ ಸಿನಿಮಾ ಮಾಡಿದ್ದೇನೆ. ಆಡಿಯನ್ಸ್‌ಗೂ “ಮನಸಾಗಿದೆ’ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಸುಮಾರು ಒಂದುದಶಕದಿಂದ ಕನ್ನಡಚಿತ್ರರಂಗದಲ್ಲಿಸಕ್ರಿಯರಾಗಿರುವ ಎಸ್.ಚಂದ್ರ ಶೇಖರ್, “ಮನಸಾಗಿದೆ’ ಚಿತ್ರಕ್ಕೆ ಕಥೆ ಬರೆದು, ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಎಸ್. ಚಂದ್ರಶೇಖರ್, “ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಯೂಥ್‌ಫುಲ್ ಸಬ್ಜೆಕ್ಟ್ ಸಿನಿಮಾ.
ಇಡೀ ಫ್ಯಾಮಿಲಿ ಕುಳಿತು ನೋಡುವಂಥ ಕಂಟೆಂಟ್ ಇದರಲ್ಲಿದೆ.ಲವ್ ಸ್ಟೋರಿಯಾಗಿದ್ದರೂ, ಇಲ್ಲಿಯವರೆಗೆ ಎಲ್ಲೂ ಹೇಳಿರದಹಲವು ಸಂಗತಿಗಳನ್ನ ತೆರೆಮೇಲೆ ತೋರಿಸುತ್ತಿದ್ದೇವೆ. ಈಸಿನಿಮಾದ ಮೂಲಕ ಕನ್ನಡ ಇಂಡಸ್ಟ್ರಿಗೆ ಹೀರೋ ಅಭಯ್‌ಸೇರಿದಂತೆ ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದೇವೆ’ ಎನ್ನುತ್ತಾರೆ.