Advertisement

ಪೋರ್ಟಲ್ ದೋಷ : ಹಣಕಾಸು ಸಚಿವೆ ಸೀತಾರಾಮನ್ ಭೇಟಿಯಾದ ಇನ್ಫೋಸಿಸ್ ಸಿಇಒ

07:10 PM Aug 23, 2021 | Team Udayavani |

ನವದೆಹಲಿ : ಹೊಸ ಇ-ಫೈಲಿಂಗ್ ಪೋರ್ಟಲ್ ನ ತಾಂತ್ರಿಕ ದೋಷಗಳ ವಿಚಾರವಾಗಿ ಇನ್ಫೋಸಿಸ್ ಎನ್ ಡಿ ಸಲಿಲ್ ಜೊತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ( ಆ.23) ಸಂಜೆ ಸಭೆ ನಡೆಸಿದ್ದಾರೆ.

Advertisement

ಪೋರ್ಟಲ್ ಪ್ರಾರಂಭವಾಗಿ ಎರಡೂವರೆ ತಿಂಗಳು ಕಳೆದ ನಂತರವೂ ವೆಬ್ ಸೈಟ್ ನ ಕಾರ್ಯನಿರ್ವಹಣೆಯಲ್ಲಿ ತಾಂತ್ರಿಕ ದೋಷಗಳು ಮುಂದುವರೆದಿರುವ ಹಿನ್ನೆಲೆ ಭಾನುವಾರ ಇನ್ಫೋಸಿಸ್ ವಿರುದ್ಧ ಕೇಂದ್ರ ಹಣಕಾಸು ಇಲಾಖೆ ಸಮನ್ಸ್ ನೀಡಿತ್ತು.

ಇನ್ಫೋಸಿಸ್ ಹೊಸ ಪೋರ್ಟಲ್ ವಿನ್ಯಾಸಗೊಳಿಸಿದ್ದು, ಇದು ಜೂನ್ 7 ರಿಂದ ಸೇವೆ ಆರಂಭಿಸಿದೆ. ಆದರೆ ಪ್ರಾರಂಭದ ದಿನಗಳಿಂದ ಹಲವಾರು ತಾಂತ್ರಿಕ ಸಮಸ್ಯೆಗಳಿರುವುದು ಕಂಡು ಬಂದಿದೆ. ಈ ವಿಚಾರವಾಗಿ ಬಳಕೆದಾರರು ಆಗಾಗ್ಗೆ ಸೈಟ್ನ ಸ್ಕ್ರೀನ್ಶಾಟ್ಗಳನ್ನು ಟ್ವೀಟ್ ಮಾಡುವುದಲ್ಲದೆ ಹಣಕಾಸು ಸಚಿವರನ್ನು ಟ್ಯಾಗ್ ಮಾಡಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಹಣಕಾಸು ಇಲಾಖೆ, ವೆಬ್ ಸೈಟ್ ನಲ್ಲಿನ ತಾಂತ್ರಿಕ ದೋಷಗಳನ್ನು ಇನ್ನೂ ಏಕೆ ಸರಿಪಡಿಸಲಾಗಿಲ್ಲ ಎಂಬುದರ ಬಗ್ಗೆ ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಣೆ ನೀಡುವಂತೆ ಇನ್ಫೋಸಿಸ್ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಪರೇಖ್ ಗೆ ಸಮನ್ಸ್ ನೀಡಿತ್ತು.ಅದರಂತೆ ಇಂದು ಸಂಜೆ ಇನ್ಫೋಸಿಸ್ ನ ಸಿಇಒ ಹಾಗೂ ಎಂಡಿ ಆಗಿರುವ ಸಲಿಲ್ ಪರೇಖ್ ಅವರು ಹಣಕಾಸು ಸಚಿವರನ್ನು ಭೇಟಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next