Advertisement

ಹಿರಿಯ ಶ್ರೀಗಳ ಇಚ್ಛೆಯಂತೆಯೇ ಮಠದ ನಿರ್ವಹಣೆ: ಸಿದ್ಧಲಿಂಗ ಶ್ರೀ

01:08 AM Jan 24, 2019 | |

ತುಮಕೂರು: ಹಿರಿಯ ಶ್ರೀಗಳ ಆಶೀರ್ವಾದ ನಮ್ಮೆಲ್ಲರ ಮೇಲೆ ಇರುತ್ತದೆ. ಅವರು ನಮಗೆ ನೀಡಿರುವ ಮಾರ್ಗದರ್ಶನದಂತೆ ಮಠದಲ್ಲಿ ಈ ಹಿಂದೆ ನಡೆಯುತ್ತಿದ್ದ ರೀತಿಯಲ್ಲಿಯೇ ಎಲ್ಲಾ ಕಾರ್ಯಗಳು ನಡೆಯುತ್ತವೆ. ಶ್ರೀಗಳ ಶ್ರೀರಕ್ಷೆ ನಮ್ಮ ಮೇಲಿದ್ದು, ಅದು ಮುಂದುವರಿದುಕೊಂಡು ಹೋಗುತ್ತದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ತಿಳಿಸಿದರು.

Advertisement

ಸಿದ್ಧಗಂಗಾ ಮಠದಲ್ಲಿ ಹಿರಿಯ ಶ್ರೀಗಳ ಕ್ರಿಯಾ ಸಮಾಧಿ ಗದ್ದುಗೆಗೆ ಬುಧವಾರ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳು ಮಠವನ್ನು ಯಾವ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ಅದೇ ರೀತಿ ಶ್ರೀಗಳ ಆಶಯದಂತೆ ಎಲ್ಲಾ ಕಾರ್ಯ ನಡೆಸಲಾಗುವುದು. ಕಾಯಕ ದಾಸೋಹ, ಪೂಜಾದಿ ಕ್ರಮಗಳು ಎಂದಿನಂತೆ ನಿರಂತರವಾಗಿ ನಡೆಯಲಿವೆ ಎಂದರು.

ಶ್ರೀಗಳ ಇಚ್ಛೆಯಂತೆ ಸಿದ್ಧಗಂಗಾ ಮಠದ ಕಾರ್ಯಗಳು ಸೇರಿದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. ಅವರ ಆಶೀರ್ವಾದದಿಂದ ಎಲ್ಲವನ್ನೂ ಸುಸ್ಥಿರವಾಗಿ ನಿರ್ವಹಿಸಿಕೊಂಡು ಹೋಗುತ್ತೇನೆ ಎಂದು ನುಡಿದರು.

ಅನ್ನದಾಸೋಹ, ಜ್ಞಾನದಾಸೋಹ ಪಾಲಿಸುತ್ತೇವೆ: ಸಿದ್ಧಗಂಗಾ ಸಂಸ್ಥೆಯ ಎÇ್ಲಾ ಕಾರ್ಯ ಚಟುವಟಿಕೆಗಳು ಎಂದಿನಂತೆ ಆರಂಭವಾಗಿವೆ. ಮಠದಲ್ಲಿ ದಿನನಿತ್ಯದಂತೆ ದಾಸೋಹ, ಪ್ರಾರ್ಥನೆ ನೆರವೇರಿದೆ. ಹಿರಿಯ ಶ್ರೀಗಳು ನೆರವೇರಿಸಿಕೊಂಡು ಹೋಗುತ್ತಿದ್ದ ಪೂಜಾ ಕೈಂಕರ್ಯ ಎಂದಿನಂತೆ ನೆರವೇರಿದೆ. ಶ್ರೀಗಳ ಇಚ್ಛೆಯಂತೆ ಅನ್ನದಾಸೋಹ, ಜ್ಞಾನದಾಸೋಹ ಕಾರ್ಯವನ್ನು ಚಾಚೂ ತಪ್ಪದೆ ನಾವೆಲ್ಲರೂ ಪಾಲಿಸಿಕೊಂಡು ಹೋಗುತ್ತೇವೆ ಎಂದರು.

ಶ್ರೀಗಳ ಗದ್ದುಗೆ ದರ್ಶನಕ್ಕಾಗಿ ಭಕ್ತರು ರಾತ್ರಿಯಿಡಿ ಮಠದÇ್ಲೇ ತಂಗಿದ್ದರು. ಹಾಗಾಗಿ ಅವರಿಗೆÇ್ಲಾ ಶ್ರೀಗಳ ಗದ್ದುಗೆಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಂದಿನಿಂದ 11 ದಿನಗಳ ಕಾಲ ನಿರಂತರವಾಗಿ ಗದ್ದುಗೆಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಲಿವೆ ಎಂದು ಹೇಳಿದರು. ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾಗಿ ಬುಧವಾರ ಮೂರನೇ ದಿನವಾಗಿದ್ದು, ವಿವಿಧ ಮಠಗಳ ಮಠಾಧೀಶ್ವರರು ಹಾಗೂ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಶ್ರೀಗಳ ಗದ್ದುಗೆಯಲ್ಲಿ ವಿಶೇಷ ಪೂಜೆ ನೆರವೇರಿಸಿದರು.

Advertisement

ಶ್ರೀಗಳ ಪಾದುಕೆಗೆ ಭಕ್ತರಿಂದ ಭಕ್ತಿಯ ನಮನ

ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಸದಾ ಲವಲವಿಕೆಯಿಂದ ನಡೆದಾಡುತ್ತಾ ಭಕ್ತರಿಗೆ ಆಶೀರ್ವಾದ ಮಾಡುತ್ತಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರು ಶಿವನಲ್ಲಿ ಲೀನವಾಗಿದ್ದಾರೆ. ಆದರೆ, ಅವರ ನೆನಪು ಮಾತ್ರ ಇನ್ನೂ ಭಕ್ತರಲ್ಲಿ ಮನೆ ಮಾಡಿದೆ. ಬುಧವಾರ ಮಠಕ್ಕೆ ಭಕ್ತ ಸಾಗರವೇ ಹರಿದು ಬಂತು. ಭಕ್ತರಿಗೆ ಆಶೀರ್ವದಿಸುತ್ತಿದ್ದ ಶಕ್ತಿಪೀಠ ಮಂಚದಲ್ಲಿ ಅವರು ಇರದೇ ಇರುವುದನ್ನು ಕಂಡು ಭಾವುಕರಾದ ಭಕ್ತರು, ಶಕ್ತಿಪೀಠದ ಮೇಲೆ ಇರಿಸಲಾಗಿದ್ದ ಶ್ರೀಗಳ ಪಾದುಕೆಗಳಿಗೆ ಭಕ್ತಿಯಿಂದ ನಮನ ಸಲ್ಲಿಸುತ್ತಿ ರುವುದು ಕಂಡು ಬಂತು.

ಮಠವನ್ನು 88 ವರ್ಷಗಳ ಕಾಲ ಜಾತ್ಯತೀತ ವಾಗಿ ನಡೆಸಿಕೊಂಡು ಬಂದಿದ್ದ ಶ್ರೀಗಳು, ಮಠಕ್ಕೆ ಬರುವ ಭಕ್ತರಿಗೆ ಆಶೀರ್ವಾದ ಮಾಡು ತ್ತಿದ್ದರು. ಮಠದ ಆವರಣದಲ್ಲಿರುವ ಶಕ್ತಿ ಪೀಠದ ಮಂಚದ ಮೇಲೆ ಶ್ರೀಗಳು ಕುಳಿತು ಯಂತ್ರ ಬರೆದು ಬರುವ ಭಕ್ತರಿಗೆ ಸ್ವತಃ ಕೈಯಾರೆ ಕಟ್ಟಿ ಕತ್ತರಿಯಿಂದ ಕತ್ತರಿಸುತ್ತಿದ್ದರು.

ತಮ್ಮ ಎಲ್ಲಾ ಪೂಜಾ ಕಾರ್ಯಗಳು ಮುಗಿದ ನಂತರ ಮಂಚದ ಮೇಲೆ ಕುಳಿತು ಭಕ್ತರಿಗೆ ದರ್ಶನ ನೀಡಿ ಆಶೀರ್ವಾದ ಮಾಡು ತ್ತಿದ್ದುದನ್ನು ಕಂಡಿದ್ದ ಭಕ್ತರು, ಮಂಚದ ಮೇಲೆ ಇರಿಸಲಾಗಿರುವ ಶ್ರೀಗಳು ತೊಡುತ್ತಿದ್ದ ಪಾದುಕೆಗಳಿಗೆ ಭಕ್ತಿಯಿಂದ ನಮಿಸುತ್ತಿದ್ದರು. ಈ ವೇಳೆ ಮಾತನಾಡಿದ ಹಲವು ಭಕ್ತರು, ಶ್ರೀಗಳ ಪಾದುಕೆಯನ್ನು ಮುಟ್ಟಿ ನಮಸ್ಕರಿಸು ವಾಗ ಶ್ರೀಗಳ ಪಾದವನ್ನೇ ಮುಟ್ಟಿದ ಅನುಭವ ವಾಗುತ್ತಿದೆ ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದರು.

ಶ್ರೀಗಳಿಗೆ ಭಾರತರತ್ನ ನೀಡಲು ಕೇಂದ್ರಕ್ಕೆ ನಿಯೋಗ

ಬೆಂಗಳೂರು: ಸಿದ್ಧಗಂಗಾ ಶ್ರೀಗಳಾದ ಶಿವಕುಮಾರಸ್ವಾಮಿಯವರಿಗೆ ಮರಣೋತ್ತರವಾಗಿ ಭಾರತರತ್ನ ನೀಡುವಂತೆ ಮನವಿ ಮಾಡಲು ಸದ್ಯದಲ್ಲೇ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ, ರಾಜ್ಯದ ಬಿಜೆಪಿ ಸಚಿವರು, ಸಂಸದರು ಸೇರಿ ಎಲ್ಲ ಪಕ್ಷಗಳ ಮುಖಂಡರ ನಿಯೋಗವನ್ನು ಪ್ರಧಾನಿ ಬಳಿ ಕರೆದೊಯ್ಯಲಾಗುವುದು. ಇದರಲ್ಲಿ ರಾಜಕೀಯ ಇರಬಾರದು. ಅವರಿಗೆ ನೊಬೆಲ್‌ ಪುರಸ್ಕಾರ ಸಹ ಲಭಿಸಬೇಕು ಎಂದರು.

ಡಾ.ಶಿವಕುಮಾರ ಸ್ವಾಮಿಗಳ ಅಂತಿಮ ದರ್ಶನ ಹಾಗೂ ಕ್ರಿಯಾ ಸಮಾಧಿ ಸೇರಿ ಇತರ ಪ್ರಕ್ರಿಯೆ ಸುಗಮವಾಗಿ ನೆರವೇರಲು ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ತುಮಕೂರು ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನತೆಯ ನೆರವು ಸಹಕಾರ ಅಭಿನಂದನೀಯ ಎಂದು ಹೇಳಿದರು. ಎರಡು ದಿನಗಳ ಕಾಲ ಸ್ಥಳದಲ್ಲಿಯೇ ನಿಂತು 15 ಲಕ್ಷ ಜನರಿಗೆ ದರ್ಶನ, 10 ಲಕ್ಷ ಜನರಿಗೆ ದಾಸೋಹ ಸೇರಿ ಗಣ್ಯರು, ಮಠಾಧೀಶರಿಗೆ ಯಾವುದೇ ಲೋಪ ಆಗದಂತೆ ಶ್ರಮಿಸಿದ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next