ಚಿತ್ತಾಪುರ: ಗ್ರಾಮ ಪಂಚಾಯಿತಿ ಚುನಾವಣಾ ಕಾರ್ಯಕ್ಕೆ ನೇಮಕವಾಗಿರುವ ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾನದ ಒಂದು ದಿನ ಮುಂಚಿತವಾಗಿಯೇ ನಿಯೋಜನೆ ಮಾಡಲಾಗಿರುವ ಎಲ್ಲ ಅಧಿ ಕಾರಿಗಳು ಆಯಾ ಬೂತ್‌ಗಳಿಗೆ ತೆರಳಬೇಕು. ಮತ ಪತ್ರಗಳ ಮಾಸ್ಟ್‌ರಿಂಗ್, ಡಿಮಾಸ್ಟರಿಂಗ್ ಕುರಿತು ತಿಳಿದುಕೊಳ್ಳಬೇಕು. ಮತದಾನ ಕೇಂದ್ರದ ಸುತ್ತಲೂ 200 ಮೀಟರ್‌ವರೆಗೆ ನಿಷೇಧಾಜ್ಞೆಜಾರಿಗೊಳಿಸಬೇಕು. ಗಲಾಟೆ, ಚುನಾವಣೆ ನಿಯಮ ಉಲ್ಲಂಘನೆ ಮಾಡುತ್ತಿರುವ ವ್ಯಕ್ತಿಗಳು ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಚುನಾವಣೆಗೆ ಸ್ಪರ್ದಿಸುವ ಅಭ್ಯರ್ಥಿಗಳು ಸ್ಥಳೀಯರು ಆಗಿರುವುದರಿಂದ ಸಣ್ಣಪುಟ್ಟ ಲೋಪದೋಷ ಕಂಡು ಬಂದರೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಚುನಾವಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಗರೂಕರಾಗಿ ಕೆಲಸ ಮಾಡಬೇಕು. ಲೋಪದೋಷ ಕಂಡರೆ ಮೇಲಾಧಿ ಕಾರಿಗಳ ಗಮನಕ್ಕೆ ತರಬೇಕು ಎಂದು ಅಧಿ ಕಾರಿಗಳಿಗೆ ಸಲಹೆ ನೀಡಿದರು.
ಇದನ್ನೂ ಓದಿ:ಲವ್ ಜೆಹಾದ್ ಹಿಂದೂ -ಮುಸ್ಲಿಂ ವಿಚಾರವಲ್ಲ: ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಯೇ ಉದ್ದೇಶ
ಸಹಾಯಕ ಆಯುಕ್ತ ರಮೇಶ ಕೋಲಾರ ಮಾತನಾಡಿ, ಶಾಂತಿಯುತ ಮತದಾನಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು. ನಿಷ್ಠೆ ಹಾಗೂ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಬೇಕು. ತಾಲೂಕಿನಲ್ಲಿ ನಡೆಯುವ ಚುನಾವಣೆಯಲ್ಲಿ ಯಾವುದೇ ರೀತಿಯ ಗಲಾಟೆಯಾಗದಂತೆ ನೋಡಿಕೊಂಡು ಚುನಾವಣೆ ಯಶಸ್ವಿಯಾಗಲು ಸಹಕರಿಸಬೇಕು ಎಂದರು.
ನೋಡಲ್ ಅಧಿಕಾರಿ ಶಂಕರ್, ಚುನಾವಣೆ ಸೆಕ್ಟರ್ ಅ ಧಿಕಾರಿಗಳಾದ ಮನೋಜಕುಮಾರ ಗುರಿಕಾರ್, ವಿಠಲ ಹಾದಿಮನಿ, ಸಿಡಿಪಿಒ ರಾಜಕುಮಾರ ರಾಠೊಡ, ಕ್ಷೇತ್ರ ಶಿಕ್ಷಣಾ ಧಿಕಾರಿ ಸಿದ್ಧವೀರಯ್ಯ, ಗಿರೀಶ ರಂಜೋಳಕರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂಜೀವಕುಮಾರ, ತೋಟಗಾರಿಕೆ ಇಲಾಖೆ ಅಧಿಕಾರಿ ಸಿದ್ಧು ಅಣಬಿ, ತಾ.ಪಂ ಇಒ ಮೋನಪ್ಪ, ಶ್ರೀಧರ ಹಾಗೂ ಮತ್ತಿತರರು ಇದ್ದರು.