Advertisement
ಸಾಮಾಜಿಕ ವಲಯದಲ್ಲಿ ಮಂಗಳಮುಖಿಯರೆಂದರೇ, ಅದೇನೋ ಅಸ್ಪೃಶ್ಯತೆಯ ಭಾವ ಇದೆ. ಸ್ವತಃ ದೇಶದ ಸರ್ವೋಚ್ಛ ನ್ಯಾಯಾಲಯ ಮಂಗಳಮುಖಿಯರನ್ನು ತೃತೀಯ ಲಿಂಗಿಗಳೆಂದು ಪರಿಗಣಿಸಿದರೂ, ಲಿಂಗವನ್ನು ಆರಿಸಿಕೊಳ್ಳುವ ಹಕ್ಕು ಅವರವಿಗೆ ಬಿಟ್ಟ್ಇದ್ದು ಎಂದು ತೀರ್ಪು ಕೊಟ್ಟಿದ್ದರೂ ಕೂಡ ಇಂದಿಗೂ ಆ ವರ್ಗದವರನ್ನು ನೋಡುವ ದೃಷ್ಟಿ ಕೋನ ಬೇರೇನೇ ಇದೆ.
Related Articles
Advertisement
ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ..!
ಕುಟುಂಬದ ಆದಿಯಾಗಿ ಸಮಾಜದಲ್ಲಿ ಹಲವಾರು ತಾರತಮ್ಯಗಳನ್ನು ಕಂಡು ದುಃಖದಲ್ಲೇ ಬೆಳೆದ ಸೋಮನಾಥ, ಎಳವೆಯಲ್ಲೇ ತಾನು ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದವರು. ಸಾಮಾಜಿಕ ವ್ಯವಸ್ಥೆಯಲ್ಲಿ ಪೂರಕವಾದ ವಾತಾವರಣ ಇಲ್ಲದಿದ್ದ ಸಂದರ್ಭದಲ್ಲಿಯೂ ಸಮಾಜದ ತಪ್ಪುಗಳನ್ನು ಪ್ರಶ್ನಿಸಿ ಎದುರು ನಿಂತವರು. ಮನೆಯಲ್ಲಿ ತಂದೆ ತಾಯಿಯರ ಬೆಂಬಲದಿಂದಾಗಿ ಯಾವುದೇ ರೀತಿಯಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿಲ್ಲ. ಆದಾಗ್ಯೂ ಸಮಾಜದಲ್ಲಿ ತುಂಬಾ ನೋವನ್ನು ಅನುಭವಿಸುತ್ತಾರೆ ಮಾನವಿ.
ಶೋಷಣೆ, ದೌರ್ಜನ್ಯವನ್ನು ಸಾಮಾನ್ಯವಾಗಿ ಎಲ್ಲಾ ಮಂಗಳಮುಖಿಯರು ಎದುರಿಸುವಂತೆ ಇವರೂ ಬದುಕಿನುದ್ದಕ್ಕೂ ಕಾಣುತ್ತಾ ಬಂದವರು. ಶಾಲಾ ಜೀವನದಲ್ಲಿ ಮನಸ್ಥಿತಿಯಲ್ಲಾದ ಬದಲಾವಣೆಗಳಿಂದಾಗಿ ತುಸು ತೊಂದರೆ ಅನುಭವಿಸಿದ್ದರೂ, ಓದಿನ ಬಗ್ಗೆ ಎಂದೂ ಕೂಡ ರಾಜಿ ಮಾಡಿಕೊಂಡವರಲ್ಲ. ಕಷ್ಟಗಳನ್ನು ನುಂಗಿ, ದೇಹದೊಳಗೆ, ಮನಸ್ಸಿನೊಳಗೆ ಆಗುತ್ತಿರುವ ಪರಿವರ್ತನೆಯನ್ನು ಸಹಿಸಿಕೊಂಡು ಮೇಲೆ ಬಂದು ಉನ್ನತ ಶಿಕ್ಷಣಗಳನ್ನೆಲ್ಲಾ ಪೂರೈಸಿ, ಇಂದು ಕಾಲೇಜೊಂದರ ಪ್ರಾಂಶುಪಾಲೆಯಾಗಿದ್ದಾರೆ ಎಂದರೇ ನೀವು ನಂಬಲೇ ಬೇಕು.
ಹೌದು, ದೇಶದ ಮೊಟ್ಟ ಮೊದಲ ತೃತೀಯ ಲಿಂಗಿ ಪಿ ಎಚ್ ಡಿ ಸ್ಲಾಲರ್ ಮಾನವಿ ಬಂಡೋಪಾಧ್ಯಾಯ. ಜಾದವ್ ಪುರ ವಿಶ್ವವಿದ್ಯಾಲಯದಲ್ಲಿ 2005ರಲ್ಲಿ ತನ್ನ ಡಾಕ್ಟರ್ ಆಫ್ ಫಿಲಾಸಫಿ ಪೂರೈಸಿದ ಮಾನವಿ, 2006 ರಲ್ಲಿ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪ್ರಮಾಣ ಪತ್ರವನ್ನು ಪಡೆಯುತ್ತಾರೆ. ಆ ಮೂಲಕ ಮೊಟ್ಟ ಮೊದಲಾಗಿ ಪಿ ಎಚ್ ಡಿ ಪಡೆದ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗುತ್ತಾರೆ.
1990ರಲ್ಲಿ ಉಪನ್ಯಾಸಕಿಯಾಗಿ ವೃತ್ತಿ..!
ಬಂಗಾಳಿ ಭಾಷೆಯಲ್ಲಿ ಎಂ ಎ ಮಾಡಿದ್ದ ಅವರು 1990ರ ಅಂತ್ಯದಲ್ಲಿ ವಿವೇಕಾನಂದ ಸತೋಬರ್ಶಿಕಿ ಕಾಲೇಜಿನಲ್ಲಿ ಬಂಗಾಳಿ ಭಾಷಾ ಪ್ರಾಧ್ಯಾಪಕಿಯಾಗಿ ವೃತ್ತಿ ಆರಂಭಿಸಿದ್ದರು. ಬೋಧಾನ ವೃತ್ತಿಯಲ್ಲಿ ಸಾಕಷ್ಟು ಅವಮಾನ ಹಾಗೂ ಸಮಸ್ಯೆಯನ್ನು ಎದುರಿಸಬೇಕಾಯಿತು. ಸಹೋದ್ಯಗಿಗಳಿಂದ ಹಾಗೂ ತನ್ನ ವಿದ್ಯಾರ್ಥಿಗಳಿಂದಲೇ ನೋವನನ್ನುಭವಿಸಬೇಕಾಯಿತು. ಇದರಿಂದ ಮನನೊಂದ ಮಾನವಿ, ತನ್ನ ವೃತ್ತಿಯಿಂದ ಹೊರಬಂದು ತಾನು ಸಮಾಜದಲ್ಲಿ ಎತ್ತರಕ್ಕೆ ಬೆಳೆದು ನಿಲ್ಲಲೇ ಬೇಕು ಎಂಬ ಛಲದಿಂದ ಪಿ ಎಚ್ ಡಿ ಮಾಡಲು ನಿರ್ಧರಿಸಿ, ಜಾದವ್ ಪುರ ವಿಶ್ವವಿದ್ಯಾಲಯಕ್ಕೆ ಪಿ ಎಚ್ ಡಿ ವಿದ್ಯಾರ್ಥಿಯಾಗಿ ಸೇರಿಕೊಂಡರು. 2005 ರಲ್ಲಿ ಪಿ ಎಚ್ ಡಿ ಮುಗಿಸಿ ಡಾ. ಮಾನವಿ ಬಂಡೋಪಾಧ್ಯಾಯರಾಗಿ ಹೊರಗೆ ಬಂದು ಸಮಾಜದ ವ್ಯವಸ್ಥೆಗೆ ಅಕ್ಷರಶಃ ಕನ್ನಡಿ ಹಿಡಿದರು.
ನನನ್ನು ಕೊಲ್ಲಲು ಕೂಡ ಪ್ರಯತ್ನ ನಡೆದಿತ್ತು..!
ನಿರಂತರ ಹೋರಾಟದ ಬದುಕನ್ನೇ ಅನುಭವಿಸಿದ ಅವರು, ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ವೃತ್ತಿ ಜೀವನದ ಆರಂಭದಲ್ಲಿ, ನನ್ನ ತಂದೆ ಹಾಗೂ ನಾನು, ವಿದ್ಯಾರ್ಥಿ ಸಂಘಟನೆಗಳ ಬೆದರಿಕೆಗಳನ್ನು ಎದುರಿಸಬೇಕಾಯಿತು. ನಾನು ಪುರುಷ ಉಪನ್ಯಾಸಕರಾಗಿ ನೋಂದಾಯಿಸಕೊಳ್ಳಬೇಕು ಎನ್ನುವುದು ಅವರ ಆಗ್ರಹವಾಗಿತ್ತು. ನನ್ನನ್ನು ಹಾಗೂ ನನ್ನ ತಂದೆಯನ್ನು ಕೊಲ್ಲಲು ಕೂಡ ಪ್ರಯತ್ನಗಳು ನಡೆದವು. ಝಾರ್ ಗ್ರಾಮ್ ನಲ್ಲಿ ನಮಗೆ ಉಳಿದುಕೊಳ್ಳಲು ಬಾಡಿಗೆ ಮನೆಯನ್ನು ಕೂಡ ನೀಡುತ್ತಿರಲಿಲ್ಲ ಎಂದು ದುಃಖದಲ್ಲಿ ತಾನು ಎದುರಿಸಿದ ಕಷ್ಟದ ದಿಗಳನ್ನು ನೆನಪಿಸಿಕೊಳ್ಳುತ್ತಾರೆ ಮಾನವಿ.
ಹೀಗೆ ಆಕೆ ಹೋದಲ್ಲೆಲ್ಲಾ ಇದೇ ರೀತಿಯ ಅವಮಾನಗಳನ್ನು ಎದುರಿಸಿದ್ದರಿಂದ, ಅವಳು ಲಿಂಗ ಬದಲಾವಣೆಯ ಆಪರೇಷನ್ ಗೆ ಒಳಗಾಗಲು ನಿರ್ಧರಿಸುತ್ತಾರೆ.
“ನಾನು 2003 ಮತ್ತು 2004 ರಲ್ಲಿ ಲಿಂಗ ಬದಲಾವಣೆಯ ಆಪರೇಷನ್ ಗೆ ಒಳಗಾಗಿದ್ದೆ ಮತ್ತು ಈಗ ಪೂರ್ಣ ಪ್ರಮಾಣದ ಮಹಿಳೆಯಾಗಿದ್ದೇನೆ. ಸೋಮನಾಥ್ ಆಗಿದ್ದ ನಾನು 2004 ರಲ್ಲಿ ಮಾನವಿ ಆಗಿದ್ದೇನೆ. ಅದೊಂದು ಕಷ್ಟಕರ ಹಾಗೂ ಅದ್ಭುತ ಅನುಭವ ಎಂದು ಮುಕ್ತ ಮನಸ್ಸಿನಲ್ಲಿ ಅವರು ಹೇಳಿಕೊಳ್ಳುತ್ತಾರೆ.
ಪಶ್ಚಿಮ ಬಂಗಾಳದ ಲೈಂಗಿಕ ಬದಲಾವಣೆಯ ಕಾರ್ಯಾಚರಣೆಗೆ ಒಳಗಾದ ಮೊದಲ ಕೆಲವು ಮಂಗಳಮುಖಿಯರಲ್ಲಿ ಇವರೂ ಒಬ್ಬರು.
2015 ರಲ್ಲಿ ಪ್ರಾಂಶುಪಾಲೆಯಾಗಿ ಡಾ. ಮಾನವಿ ಬಂಡೋಪಾಧ್ಯಾಯ.!
ಸತತ ಒಂದು ದಶಕದ ಹೋರಾಟದ ನಂತರ 2015 ಜೂನ್ 7 ರಂದು 16 ವರ್ಷಗಳ ವೃತ್ತಿಯಲ್ಲಿನ ಅನುಭವ ಹಾಗೂ ಪಿಎಚ್‌ಡಿ ಪದವಿ ಆಧರಿಸಿ ಕೃಷ್ಣನಗರ ಮಹಿಳಾ ಕಾಲೇಜಿನ ಪ್ರಾಂಶುಪಾಲೆಯ ಹುದ್ದೆಯನ್ನು ಅಲಂಕರಿಸಿದ್ದಾರೆ. ಆ ಮೂಲಕ ದೇಶದ ಮೊಟ್ಟ ಮೊದಲ ತೃತೀಯ ಲಿಂಗಿ ಪ್ರಾಂಶುಪಾಲೆ ಎಂಬ ಹಿರಿಮೆಗೂ ಕೂಡ ಭಾಜನರಾದರು.
ಮಾನವಿ ಶಾರದಾ ದೇವಿಯ ಭಕ್ತರಾಗಿದ್ದು, ಸ್ವಾಮಿ ಆತ್ಮಸ್ಥಾನಂದ ಅವರಲ್ಲಿ ಆಧ್ಯಾತ್ಮಿಕ ದೀಕ್ಷೆ ಪಡೆದವರು. ಬಂಗಾಳಿ ಸಾಹಿತ್ಯದಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಮಾತ್ರವಲ್ಲದೇ, “ಎ ಗಿಫ್ಟ್ ಆಫ್ ಗಾಡೆಸ್ ಲಕ್ಷ್ಮಿ” ಎಂಬ ಶೀರ್ಷಿಕೆಯೊಂದಿಗೆ ಜೀವನ ಚರೀತ್ರೆಯನ್ನೂ ಕೂಡ ಅವರು ಬರೆದಿದ್ದಾರೆ.
ನೋವಿನ ಕನ್ನಡಿ “ಎ ಗಿಫ್ಟ್ ಆಫ್ ಗಾಡೆಸ್ ಲಕ್ಷ್ಮಿ”