ಕ್ಯಾನ್‌ಬೆರಾ : ಕೋವಿಡ್ ಲಾಕ್‌ಡೌನ್ ಈಗಾಗಲೇ ಲಕ್ಷಾಂತರ ಜನ ನಿರುದ್ಯೋಗಿಗಳಾಗಿದ್ದು, ಜೀವನ ನಡೆಸಲು ಸಾಧ್ಯವಾಗದ ಸ್ಥಿತಿಗೆ ಬಂದು ತಲುಪಿದ್ದಾರೆ. ಆದರೆ ಉದ್ಯೋಗ ಕಳೆದುಕೊಂಡು ಚಿಂತೆಗೀಡಾಗಿದ್ದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನ ಅದೃಷ್ಟ ಖುಲಾಯಿಸಿದ್ದು, ಬರೋಬ್ಬರಿ ೩1 ಕೋಟಿ ರೂ.ಬಂಪರ್ ಬಹುಮಾನ ಬಂದಿದೆ.
ಆಸ್ಟ್ರೇಲಿಯಾ ಪರ್ತ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ. ಆದರೆ ಕೋವಿಡ್ ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಳ್ಳಬೇಕಾಯಿತು. ಒಂದು ದಿನ ತನ್ನ ಮೂರು ವರ್ಷದ ಪುತ್ರಿಗೆ ಅಗತ್ಯವಸ್ತು ಖರೀದಿಸಲು ದಿನಸಿ ಅಂಗಡಿಗೆ ಹೋಗಿದ್ದ ಆತನಿಗೆ ಪಕ್ಕದಲ್ಲೇ ಇದ್ದ ಲಾಟರಿವೆಸ್ಟ್ ಕೌಂಟರ್ ಕಾಣಿಸಿತ್ತು. ನೇರವಾಗಿ ಅಲ್ಲಿಗೆ ಹೋದವನೇ ಒಂದು ಟಿಕೆಟ್ ಖರೀದಿಸಿಕೊಂಡು ಮನೆಗೆ ಮರಳಿದ್ದ.
ಆದರೆ ಆತನಿಗೆ ಮಾತ್ರ ತಾನು ಲಾಟರಿ ಖರೀದಿಸಿದೆ ಎಂಬ ವಿಷಯವೇ ಮರೆತುಹೋಗಿತ್ತು. ಕೆಲದಿನಗಳ ಹಿಂದೆ ಯಾರಿಗೋ ಲಾಟರಿ ಹೊಡೆದಿದ್ದು, ಅವರು ಹಣ ಪಡೆದುಕೊಂಡಿಲ್ಲ ಎಂದು ಹೇಳುತ್ತಿದ್ದ ಸುದ್ದಿ ಆತನಿಗೆ ತಲುಪಿತ್ತು. ತತ್‌ಕ್ಷಣವೇ ಆತ ನಾನು ಖರೀದಿಸಿದ್ದ ಲಾಟರಿಯನ್ನು ನೋಡಿದಾಗ ತಾನೇ ಆ ಅದೃಷ್ಟವಂತ ಎಂಬುದು ಗೊತ್ತಾಗಿದೆ.
ಲಾಟರಿ ಗೆದ್ದ ಸಂಭ್ರಮದಲ್ಲಿ ತನ್ನ ಪುತ್ರಿಯನ್ನು ಅಪ್ಪಿಕೊಂಡು, ಮುದ್ದಾಡಿದ್ದಾನೆ.
ಜೀವನ ಅನ್ನುವುದು ಒಂದು ಕನಸು ಎಂದು ನಾನು ಸದಾ ಹೇಳುತ್ತಿದ್ದೆ. ಇದೀಗ ಈ ಮಾತು ನನ್ನ ಜೀವನದಲ್ಲಿ ವಾಸ್ತವವಾಗಿ ಮಾರ್ಪಟ್ಟಿದೆ. ನಾನು ಲೊಟ್ಟೊ ವಿಜೇತರ ಬಗ್ಗೆ ಓದುತ್ತಿದ್ದೆ. ಈಗ ನಾನೇ ಅದರ ಭಾಗವಾಗಿದ್ದೇನೆ ಎಂದು ಹೆಮ್ಮೆಪಟ್ಟುಕೊಂಡಿದ್ದಾನೆ.