Advertisement

Gundlupete:ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಕಾಲು ಜಾರಿ ಕ್ವಾರಿಯಲ್ಲಿ ಬಿದ್ದು ಸಾವು

03:20 PM Feb 21, 2024 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಕ್ವಾರಿಯೊಂದರಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಅರೇಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ‌.

Advertisement

ಅರೇಪುರ ಗ್ರಾಮದ ರಾಜೇಂದ್ರ(36) ಮೃತ ವ್ಯಕ್ತಿ.

ಸುಮಾರು 10 ವರ್ಷಗಳ ಹಿಂದೆ ಗಣಿಗಾರಿಕೆ ನಿಂತು ಹೋಗಿದ್ದ ಕ್ವಾರಿಯೊಂದರಲ್ಲಿ ನೀರು ತುಂಬಿತ್ತು. ಮೃತ ವ್ಯಕ್ತಿ ಬಹಿರ್ದೆಸೆಯ ನಂತರ ನೀರು ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕ್ವಾರಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಮಾಹಿತಿ ಸ್ಥಳೀಯರಿಂದ ತಿಳಿದ ನಂತರ ಸ್ಥಳಕ್ಕೆ ಆಗಮಿಸಿದ ಬೇಗೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ ನಂತರ ಅಗ್ನಿಶಾಮಕ ದಳದವರನ್ನು ಬರಮಾಡಿಕೊಂಡು ಶವವನ್ನು ಮೇಲೆತ್ತಿದ್ದಾರೆ.

ಬೇಗೂರು ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ರವಾನಿಸಲಾಗಿದೆ. ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next