ಮಹಾರಾಷ್ಟ್ರ: ಭಾರತೀಯ ಜನತಾ ಪಕ್ಷದ ನಾಯಕಿ ಪಂಕಜಾ ಮುಂಡೆ ಅವರು ಬೀಡ್ ಲೋಕಸಭಾ ಕ್ಷೇತ್ರದಿಂದ ಸೋತರೆ ತಾನು ಬದುಕುವುದಿಲ್ಲ ಎಂದು ಹೇಳಿಕೊಂಡಿದ್ದ ಟ್ರಕ್ ಚಾಲಕ ಶುಕ್ರವಾರ ರಾತ್ರಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂಬುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಮಾಹಿತಿ ಹಂಚಿಕೊಂಡ ಕಿಂಗಾವ್ ಪೊಲೀಸ್ ಠಾಣೆಯ ಅಧಿಕಾರಿ ಬೋರ್ಗಾಂವ್ ಪಟ್ಟಿ ಬಳಿಯ ಅಹ್ಮದ್‌ಪುರ-ಅಂಧೋರಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಬಸ್ ಡಿಕ್ಕಿ ಹೊಡೆದು ವ್ಯಕ್ತ್ತಿಯೊಬ್ಬರು ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ, ಈ ಸಂಬಂಧ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದ್ದು ಮೃತ ವ್ಯಕ್ತಿಯನ್ನು ಲಾತೂರ್‌ನ ಅಹ್ಮದ್‌ಪುರದ ಯೆಸ್ಟರ್‌ನ ಟ್ರಕ್ ಡ್ರೈವರ್ ಆಗಿದ್ದ ಸಚಿನ್ ಕೊಂಡಿಬಾ ಮುಂಡೆ ಎಂಬುದು ತಿಳಿದು ಬಂದಿದೆ.
ಅಲ್ಲದೆ ವ್ಯಕ್ತಿಯ ಕುರಿತು ಮಾಹಿತಿ ಕಲೆಹಾಕಿದ ಪೊಲೀಸರಿಗೆ ಪ್ರಮುಖ ಮಾಹಿತಿಯೊಂದು ಲಭ್ಯವಾಗಿದ್ದು, ಇತ್ತೀಚಿಗೆ ನಡೆದ ಲೋಕ ಸಭಾ ಚುನಾವಣೆಯಲ್ಲಿ ಬೀಡ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪಂಕಜಾ ಮುಂಡೆ ಸ್ಪರ್ಧಿಸಿದ್ದರು ಈ ಸಮಯದಲ್ಲಿ ಸಚಿನ್ ಕೊಂಡಿಬಾ ಮುಂಡೆ ಅವರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಬಿಜೆಪಿ ಅಭ್ಯರ್ಥಿ ಪಂಕಜಾ ಮುಂಡೆ ಚುನಾವಣೆಯಲ್ಲಿ ಸೋತರೆ ನಾನು ಜೀವ ಕಳೆದುಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಅಲ್ಲದೆ ಪಂಕಜಾ ಮುಂಡೆ ಬೀಡ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಬಜರಂಗ್ ಸೋನಾವಾನೆ ವಿರುದ್ಧ 6,553 ಮತಗಳಿಂದ ಸೋಲು ಕಂಡಿದ್ದಾರೆ. ಚುನಾವಣಾ ಫಲಿತಾಂಶದ ನಂತರ ಸಚಿನ್ ಬೇಸರಗೊಂಡು ಮೌನವಾಗಿದ್ದರು ಇದರ ಬೆನ್ನಲೇ ಸಚಿನ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಪೊಲೀಸರು ಈ ಮಾಹಿತಿಯನ್ನು ಗಮನದಲ್ಲಿ ಇರಿಸಿಕೊಂಡು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.
ತನಿಖೆಯ ಭಾಗವಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕಿನಗಾಂವ್ ಪೊಲೀಸ್ ಠಾಣೆಯ ಸಹಾಯಕ ನಿರೀಕ್ಷಕ ಭೌಸಾಹೇಬ್ ಖಂಡಾರೆ ತಿಳಿಸಿದ್ದಾರೆ. ಮೃತರು ಅವಿವಾಹಿತರಾಗಿದ್ದು, ತಂದೆ-ತಾಯಿ ಹಾಗೂ ಸಹೋದರನೊಂದಿಗೆ ವಾಸವಿದ್ದರು.
ಇದನ್ನೂ ಓದಿ: ಅಪಾರ್ಟ್ಮೆಂಟ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ಯುವ ನಟಿ: ಕಾರಣ ನಿಗೂಢ