Advertisement

Octopus: ವಾಂತಿಯಾಗುತ್ತಿದೆ ಎಂದು ಆಸ್ಪತ್ರೆಗೆ ಬಂದ ವ್ಯಕ್ತಿಯ ಗಂಟಲಲ್ಲಿ ಆಕ್ಟೋಪಸ್ ಪತ್ತೆ!

02:23 PM Jul 06, 2023 | Team Udayavani |

ಸಿಂಗಾಪುರ: ಸಮುದ್ರದಲ್ಲಿ ಸ್ನಾನ ಮಾಡುವಾಗ ಬಾಯಿ ತೆರೆಯಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಒಂದು, ಸಮುದ್ರದ ಉಪ್ಪು ನೀರು ಒಳಗೆ ಹೋಗುತ್ತದೆ ಎಂದು, ಇದು ಅನೇಕ ರೋಗಗಳಿಗೆ ಕಾರಣವಾಗಬಹುದು ಎಂದು. ಅದೂ ಅಲ್ಲದೆ ನೀರಿನಲ್ಲಿ ಕಣ್ಣಿಗೆ ಕಾಣದ ಅದೆಷ್ಟೋ ಸೂಕ್ಷ್ಮ ಜೀವಿಗಳು ವಾಸಿಸಿರುತ್ತವೆ ಅದು ಯಾವುದೇ ಸಮಯದಲ್ಲಿ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸಬಹುದು. ಇದರಿಂದ ದೇಹದ ಮೇಲೆ ಪರಿಣಾಮ ಬೀರಬಹುದು ಎಂದು. ಆದರೆ ಇಲ್ಲೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು ವ್ಯಕ್ತಿಯೊಬ್ಬನಿಗೆ ನಿರಂತರವಾಗಿ ವಾಂತಿಯಾಗುತ್ತಿದ್ದು ಜೀವದಲ್ಲಿ ನಿಸ್ತ್ರಾಣಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ವೇಳೆ ತಪಾಸಣೆ ನಡೆಸಿದ ವೈದ್ಯರೇ ಒಮ್ಮೆ ಹೌ ಹಾರಿದ್ದಾರೆ… ಹೌದು ವೈದ್ಯರು ಬೆಚ್ಚಿ ಬೀಳಲು ಒಂದು ಕಾರಣವಿದೆ ವೈದ್ಯರ ಲೋಕಕ್ಕೂ ಅಪರೂಪವೆಂಬ ಪ್ರಕರಣ ಇಲ್ಲಿ ಪತ್ತೆಯಾಗಿದ್ದು ಆಸ್ಪತ್ರೆಗೆ ಬಂದ ವ್ಯಕ್ತಿಯ ಗಂಟಲಲ್ಲಿ ಆಕ್ಟೋಪಸ್ ಪತ್ತೆಯಾಗಿರುವುದು.

Advertisement

ಪ್ರಕರಣ ಏನು: ಡೈಲಿ ಮೇಲ್ ವರದಿಯ ಪ್ರಕಾರ, ಸಿಂಗಾಪುರದನ 55 ವರ್ಷದ ವ್ಯಕ್ತಿ ಸಮುದ್ರ ಸ್ನಾನ ಮಾಡುವ ವೇಳೆ ಆತನಿಗೆ ಗೊತ್ತಿಲ್ಲದೇ ಆಕ್ಟೋಪಸ್ ಅನ್ನು ನುಂಗಿದ್ದಾನೆ. ಎಂಟು ಕಾಲಿನ ಆಕ್ಟೋಪಸ್ ಆ ವ್ಯಕ್ತಿಯ ಗಂಟಲಿನಲ್ಲಿ ಸಿಕ್ಕಿಕೊಂಡಿತು. ಆದರೆ ಇದು ಆತನಿಗೆ ಗೊತ್ತಿರಲಿಲ್ಲ ದಿನ ಕೆಲವೇ ಹೊತ್ತಿನಲ್ಲಿ ಆತನ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ವಾಂತಿ ಮಾಡಲು ಶುರು ಮಾಡಿದ್ದಾನೆ ಕೆಲವು ಸಲ ವಾಂತಿ ಮಾಡಿದ ವ್ಯಕ್ತಿ ನಿತ್ರಾಣಗೊಂಡಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ಮನೆಯವರು ಆತನನ್ನು ಸಿಂಗಪುರದ ಟ್ಯಾನ್ ಟಾಕ್ ಸೆಂಗ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ವೈದ್ಯರು ವಿವಿಧ ತಪಾಸಣೆ ನಡೆಸಿ ಬಳಿಕ ಸ್ಕ್ಯಾನ್ ಮಾಡಿದ್ದಾರೆ. ಈ ವೇಳೆ ವೈದ್ಯರಿಗೆ ವ್ಯಕ್ತಿಯ ಮೇದೋಜ್ಜೀರಕ ಗ್ರಂಥಿಗೆ ಆಹಾರವನ್ನು ಸಾಗಿಸುವ ನಾಳದಲ್ಲಿ ಆಕ್ಟೋಪಸ್ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಇದನ್ನು ಕಂಡ ವೈದ್ಯರೇ ಒಮ್ಮೆ ಗಾಬರಿಗೊಂಡಿದ್ದರೆ. ಪರೀಕ್ಷೆ ನಡೆಸಿದ ವೇಳೆ ಆಕ್ಟೋಪಸ್ ವ್ಯಕ್ತಿಯ ಗಂಟಲಿನಲ್ಲಿ ಮುಂದಕ್ಕೆ ಚಲಿಸುತ್ತಿರುವುದು ಪತ್ತೆಯಾಗಿದೆ.

ಆಕ್ಟೋಪಸ್ ಹೊರತೆಗೆಯಲು ಹರಸಾಹಸ ಪಟ್ಟ ವೈದ್ಯರು:
ವ್ಯಕ್ತಿಯ ಗಂಟಲಲ್ಲಿದ್ದ ಅಕ್ಟೋಪಸನ್ನು ಹೊರ ತೆಗೆಯಲು ಹರಸಾಹಸವೇ ಪಟ್ಟಿದ್ದಾರೆ, ಗಂಟಲಲ್ಲಿ ಸಿಲುಕಿದ ಅಕ್ಟೋಪಸನ್ನು ಹೊರತೆಗೆಯಲು ನಾನಾ ಪ್ರಯತ್ನ ಮಾಡಿದ್ದಾರೆ ಆದರೆ ಅದು ಯಾವುದು ಫಲ ನೀಡಲಿಲ್ಲ ಬಳಿಕ ಹೊಟ್ಟೆಯೊಳಗೆ ಆಹಾರದ ಬೋಲಸ್‌ನ ಹಿಂದೆ ಸ್ಕೋಪ್ ಅನ್ನು ಎಚ್ಚರಿಕೆಯಿಂದ ನಿರ್ವಹಿಸಲಾಯಿತು ಮತ್ತು ರೆಟ್ರೋಫ್ಲೆಕ್ಸ್ ಮಾಡಿ ಆಕ್ಟೋಪಸ್ ತಲೆಯ ಭಾಗವನ್ನು ಬಲವಾಗಿ ವಸ್ತುವಿನ ಮೂಲಕ ಹಿಡಿದು ನಿಧಾನವಾಗಿ ಹೊರ ಎಳೆದ ಬಳಿಕ ವ್ಯಕ್ತಿ ಚೇತರಿಸಿಕೊಂಡಿದ್ದಾನೆ. ಇದಾದ ಎರಡು ದಿನದ ಬಳಿಕ ಆಸ್ಪತ್ರೆಯಿಂದ ವ್ಯಕ್ತಿ ಡಿಸ್ಚಾರ್ಜ್ ಆಗಿದ್ದು ಸದ್ಯ ಆರೋಗ್ಯವಾಗಿದ್ದಾನೆ ಎಂದು ವೈದ್ಯರ ಮೂಲಗಳು ತಿಳಿಸಿವೆ.

ಈ ಘಟನೆಯು 2018 ರಲ್ಲಿ ನಡೆದಿದ್ದು, ಪ್ರಮುಖ ವೈದ್ಯಕೀಯ ನಿಯತಕಾಲಿಕಗಳಿಂದ ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next