Advertisement

ಸಚಿವ ತಾವಡೆ ಮೇಲೆ ಕಪ್ಪು ಪುಡಿ ಎಸೆದ ಧಂಗರ್‌ ಸದಸ್ಯ ಅರೆಸ್ಟ್‌

05:23 PM Sep 22, 2017 | Team Udayavani |

ಮುಂಬಯಿ : ಧಂಗರ್‌ ಸಮುದಾಯದ ಸದಸ್ಯನೋರ್ವ ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್‌ ತಾವಡೆ ಅವರ ಮೇಲೆ ಸಾತಾರಾದಲ್ಲಿ ಕಪ್ಪು ಪುಡಿಯನ್ನು ಎಸೆಯಲು ಯತ್ನಿಸಿದ ಘಟನೆ ನಡೆದಿದೆ.

Advertisement

ತಾವಡೆ ಅವರು ಇಲ್ಲಿಂದ ಸುಮಾರು 250 ಕಿ.ಮೀ.ದೂರದ ಪಶ್ಚಿಮ ಮಹಾರಾಷ್ಟ್ರ ಪಟ್ಟಣದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾರುತಿ ಜನಕಾರ್‌ ಎಂಬ ವ್ಯಕ್ತಿಯೋರ್ವ ತಾವಡೆ ಅವರ ಸಮೀಪಕ್ಕೆ ತೆರಳಿ ಅವರ ಮೇಲೆ ಕಪ್ಪು ಪುಡಿಯನ್ನು ಚೆಲ್ಲಲು ಯತ್ನಿಸಿದ.

ಕೂಡಲೇ ಪೊಲೀಸರು ಜನಕಾರ್‌ನನ್ನು ವಶಕ್ಕೆ ತೆಗೆದುಕೊಂಡರು. ಆದರೆ ಆತ ಎಸೆದ ಕಪ್ಪು ಪುಡಿಯು ಮಂಗಳಕರ ಸಮಾರಂಭಗಳಲ್ಲಿ ಬಳಸಲಾಗುವ “ಬುಕ್ಕ’ ಎಂದು ಗೊತ್ತಾಗಿದೆ. 

ಧಂಗಾರ್‌ ಸಮುದಾಯದವರು ಬಹಳ ಕಾಲದಿಂದ ತಮಗೆ ಸರಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕೆಂದು ಸರಕಾರವನ್ನು  ಆಗ್ರಹಿಸುತ್ತಾ ಬಂದಿದ್ದಾರೆ. 

ಕೆಲ ದಿನಗಳ ಹಿಂದೆ ಇದೇ ಸಮುದಾಯದ ಕೆಲ ಸದಸ್ಯರು ಸಚಿವ ತಾವಡೆ ಅವರ ಮೇಲೆ ಶೋಲಾಪುರ ನಗರದಲ್ಲಿನ ನಡೆದಿದ್ದ ಸಮಾರಂಭವೊಂದರಲ್ಲಿ ಹಳದಿ ಪುಡಿ (ಭಂಡಾರ) ಎಸೆದಿದ್ದರು. ಶೋಲಾಪುರ ವಿವಿಗೆ ಅಹಲ್ಯಾಬಾಯಿ ಹೋಳ್ಕರ್‌ ಹೆಸರು ಇಡಬೇಕೆಂಬುದು ಅವರ ಆಗ್ರಹವಾಗಿತ್ತು. ಅಹಲ್ಯಾಬಾಯಿ ಹೋಳ್ಕರ್‌ ಮರಾಠಾ ಆಳ್ವಿಕೆಗೆ ಒಳಪಟ್ಟಿದ್ದ ಮಧ್ಯ ಕಾಲೀನ ಮಾಲ್ವಾ  ಆರಸೊತ್ತಿಗೆಯ ರಾಣಿಯಾಗಿದ್ದಳು. 

Advertisement
Advertisement

Udayavani is now on Telegram. Click here to join our channel and stay updated with the latest news.

Next