Advertisement

Watch; ಖತರ್‌ ನಾಕ್‌ ಕುರಿ ಕಳ್ಳ…ಚಲಿಸುತ್ತಿದ್ದ ಟ್ರಕ್‌ ಹತ್ತಿ ಕುರಿಗಳನ್ನು ರಸ್ತೆಗೆ ಎಸೆದ…

05:45 PM May 02, 2023 | Team Udayavani |

ಮುಂಬೈ: ಮಹಾರಾಷ್ಟ್ರದ ಜನನಿಬಿಡ ಪ್ರದೇಶದಲ್ಲಿ ತೆರಳುತ್ತಿದ್ದ ಟ್ರಕ್‌ ಏರಿದ ವ್ಯಕ್ತಿಯೊಬ್ಬ ಐದಾರು ಕುರಿಗಳನ್ನು ರಸ್ತೆಗೆ ಎಸೆದು ಕಳವುಗೈದಿರುವ ಘಟನೆ ನಡೆದಿದ್ದು, ಈ ಚಾಕಚಕ್ಯತೆ ಕಳ್ಳತನದ ಘಟನೆ ಕ್ಯಾಮರಾರದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಇದನ್ನೂ ಓದಿ:Modi ಉಪನಾಮ ಹೇಳಿಕೆ: ರಾಹುಲ್‌‌ ಗಾಂಧಿ ಮೇಲ್ಮನವಿಯನ್ನು ವಜಾಗೊಳಿಸಿದ ಗುಜರಾತ್‌ ಹೈಕೋರ್ಟ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಯಾವಾಗ ಚಿತ್ರೀಕರಿಸಿದ್ದು ಎಂಬ ಮಾಹಿತಿ ಇಲ್ಲ. ಇದು ಉತ್ತರಪ್ರದೇಶದ ಕಾನ್ಪುರ್-‌ ಉನ್ನಾವೋ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆಯಾಗಿದೆ ಎಂದು ತಿಳಿಸಲಾಗಿದೆ. ಆದರೆ ಈ ಘಟನೆ  ಮಹಾರಾಷ್ಟ್ರದ ಇಗತ್ಪುರಿಯಲ್ಲಿ ನಡೆದಿರುವುದಾಗಿ ಮಹಾರಾಷ್ಟ್ರ ಪೊಲೀಸರು ಟ್ವೀಟ್‌ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಈ ವಿಡಿಯೋವನ್ನು ಕೆಲವು ಪತ್ರಕರ್ತರು ಮತ್ತು ಟ್ವೀಟರ್‌ ಬಳಕೆದಾರರು ಶೇರ್‌ ಮಾಡಿದ್ದು, ಮಹಾರಾಷ್ಟ್ರ ನಾಸಿಕ್‌ ಸಮೀಪ ಹೆದ್ದಾರಿಯಲ್ಲಿ ತೆರಳುತ್ತಿದ್ದ ಟ್ರಕ್‌ ಮೇಲೇರಿದ ವ್ಯಕ್ತಿಯೊಬ್ಬ ನಿರ್ದಯವಾಗಿ ಕುರಿಗಳನ್ನು ಕದ್ದು ರಸ್ತೆಗೆ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ.

Advertisement

ಚಲಿಸುತ್ತಿದ್ದ ಟ್ರಕ್‌ ನಿಂದ ಸುಮಾರು ಐದಾರು ಕುರಿಗಳನ್ನು ರಸ್ತೆಗೆ ಎಸೆದ ಮೇಲೆ ಟ್ರಕ್‌ ಹಿಂಬದಿಯಿಂದ ಬಂದ ಕಾರಿನ ಬಾನೆಟ್‌ ಮೇಲೆ ಕಾಲಿಟ್ಟು ಕೆಳಗಿಳಿದಿರುವುದು ವಿಡಿಯೋದಲ್ಲಿದೆ. ಭಾರೀ ಟ್ರಾಫಿಕ್‌ ನಡುವೆಯೂ ಈ ವ್ಯಕ್ತಿ ಟ್ರಕ್‌ ಹತ್ತಿ ಕುರಿಗಳನ್ನು ಕಳ್ಳತನ ಮಾಡಿರುವ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next