Advertisement

ಗಿಟಾರ್‌ ನುಡಿಸುವಾಗಲೇ ಸಂಗೀತಗಾರನಿಗೆ ಶಸ್ತ್ರ ಚಿಕಿತ್ಸೆ!

11:30 AM Jul 21, 2017 | |

ಬೆಂಗಳೂರು: ಸಾಮಾನ್ಯವಾಗಿ ಯಾವುದೇ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅರವಳಿಕೆ ನೀಡಿ, ಸ್ಪರ್ಶ ಜ್ಞಾನವಿಲ್ಲದಂತೆ ಮಾಡುವುದು ಸಹಜ ಪ್ರಕ್ರಿಯೆ. ಆದರೆ ಮೆದುಳಿಗೆ ಗಂಭೀರ ಸ್ವರೂಪದ ಶಸ್ತ್ರ ಚಿಕಿತ್ಸೆ ನಡೆಯುವಾಗಲೇ ರೋಗಿ ಎಚ್ಚರ ಇರುವುದರ ಜತೆಗೆ ಗಿಟಾರ್‌ ನುಡಿಸುತ್ತಿದ್ದ ಎಂಬ ಸಂಗತಿ ಈಗ ಅಚ್ಚರಿಗೆ ಕಾರಣವಾಗಿದೆ.

Advertisement

ಇಂತಹದೊಂದು ಸಾಹಸಕ್ಕೆ ನಗರದ ಖಾಸಗಿ ಆಸ್ಪತ್ರೆಯೊಂದು ಕೈಹಾಕಿದ್ದಲ್ಲದೆ, ಯಶಸ್ವಿಯೂ ಆಗಿದೆ. 32 ವರ್ಷದ ಸಾಫ್ಟ್ವೇರ್‌ ಎಂಜಿನಿಯರ್‌ ಮತ್ತು ಗಿಟಾರ್‌ ವಾದಕ ತುಷಾರ್‌ (ಹೆಸರು ಬದಲಿಸಲಾಗಿದೆ) ಕಳೆದ ವಾರ ನರರೋಗದ ಅಸ್ವಸ್ಥತೆ ಸರಿಪಡಿಸಿಕೊಳ್ಳಲು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯರು ಸುಮಾರು 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು. ಈ ವೇಳೆ ಶಸ್ತ್ರಚಿಕಿತ್ಸೆಗೆ ನೆರವಾಗುವಂತೆ ತುಷಾರ್‌ ಗಿಟಾರ್‌ ನುಡಿಸುತ್ತಿದ್ದರು ಎನ್ನಲಾಗಿದೆ.

ಡಿಸ್ಟೋನಿಯಾ ಸಮಸ್ಯೆಯಿಂದ ಬಳಲುತ್ತಿರುವ ತುಷಾರ್‌ ಅವರ ಎಡಗೈನ ಮೂರು ಬೆರಳುಗಳು ಸೆಳೆತಕ್ಕೆ ಒಳಗಾಗಿ ಕ್ರಮಬದ್ಧವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಕಳೆದ ಒಂದೂವರೆ ವರ್ಷದ ಹಿಂದೆ ಗಿಟಾರ್‌ ನುಡಿಸುವ ಸಂದರ್ಭದಲ್ಲಿ ಈ ವಿಷಯ ಅವರ ಅರಿವಿಗೆ ಬಂದಿತ್ತು. ಬೆರಳುಗಳ ಮೇಲಿನ ಒತ್ತಡದಿಂದ ಮಾಂಸಖಂಡಗಳು ಸಂಕುಚಿತಗೊಂಡು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಸ್ಥಿತಿಗೆ ಬಂದಿತ್ತು. ಗಿಟಾರ್‌ ನುಡಿಸುವ ವೇಳೆಯಲ್ಲಿ ಮೆದುಳಿನ ನರಗಳಲ್ಲಿ ದೋಷ ಕಂಡುಬಂದಿದ್ದು, ಕ್ರಮೇಣ ಇದು ಹೆಚ್ಚಾಗಿತ್ತು. 

ಬ್ರಿಟಿಷ್‌ ಕೊಲಂಬಿಯಾ ವಿಶ್ವವಿದ್ಯಾಲಯದ ಹಿರಿಯ ನರರೋಗ ತಜ್ಞ ಡಾ.ಸಿ.ಸಿ.ಸಂಜಯ್‌ ಅವರು, ತೊಂದರೆಗೆ ಒಳಗಾದ ಮೆದುಳಿನ ಸೂಕ್ಷ್ಮಭಾಗವನ್ನು ಪತ್ತೆ ಮಾಡಲು ಹೊಸ ವಿಧಾನ ಅನುಸರಿಸಿದರು. ಶಸ್ತ್ರಚಿಕಿತ್ಸೆ ಮುನ್ನವೇ ಆಪರೇಷನ್‌ ಟೇಬಲ್‌ನಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವೈದ್ಯರ ಸಲಹೆಯಂತೆ ತುಷಾರ್‌ ಗಿಟಾರ್‌ ನುಡಿಸಲು ಆರಂಭಿಸುತ್ತಿದ್ದಂತೆ ಕಾರ್ಯೋನ್ಮುಖರಾದ
ಡಾ.ಸಂಜಯ್‌ ನೇತೃತ್ವದ ನರರೋಗ ತಜ್ಞರ ತಂಡ, ಮೆದುಳಿನ ಸೂಕ್ಷ್ಮಭಾಗದ ನರಗಳಲ್ಲಿದ್ದ ದೋಷ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ತುಷಾರ್‌ ಗಿಟಾರ್‌ ನುಡಿಸುತ್ತಲೇ ಇದ್ದರು. ದೋಷಪೂರಿತ ನರಗಳಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಲೇ
ಇದ್ದರು. ಅಂತಿಮವಾಗಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿ, ವೈದ್ಯರು ನಿಟ್ಟುಸಿರು ಬಿಟ್ಟಿದ್ದಾರೆ. 

ಜೈನ್‌ ಇನ್‌ಸ್ಟಿಟ್ಯೂಟ್‌ ಆಫ್ ಮೂವ್‌ ಮೆಂಟ್‌ ಡಿಸಾರ್ಡರ್ ಆ್ಯಂಡ್‌ ಸ್ಟಿರಿಯೋಟಾಕ್ಟಿಕ್‌ ನ್ಯೂರೋಸರ್ಜರಿ ಸಂಸ್ಥೆ ತಜ್ಞ ಡಾ.ಶರಣ್‌ ಶ್ರೀನಿವಾಸನ್‌ ಹೇಳುವಂತೆ, ಶಸ್ತ್ರಚಿಕಿತ್ಸೆಗೂ ಮೊದಲು 4 ಸೂðಗಳನ್ನು ಬಳಸಿ ಅವರ ತಲೆಗೆ ವಿಶೇಷವಾದ ಅಂಚನ್ನು 
ಅಳವಡಿಸಲಾಯಿತು. ನಂತರ ಎಂಐಆರ್‌ ಸ್ಕ್ಯಾನಿಂಗ್‌ ಮಾಡಲಾಯಿತು. ಸ್ಕ್ಯಾನಿಂಗ್‌ನಿಂದಾಗಿ ಶಸ್ತ್ರಚಿಕಿತ್ಸೆ ಮಾಡಬೇಕಿರುವ ಭಾಗ ತಲೆ ಬುರುಡೆಯಿಂದ 8ರಿಂದ 9 ಸಿಎಂ ಆಳದಲ್ಲಿದೆ ಎಂಬುದು ಪತ್ತೆ ಮಾಡಲಾಗಿತ್ತು. ತಜ್ಞರ ಸಹಕಾರದೊಂದಿಗೆ 14ಮೀ.ಮೀ. ತಲೆ
ಬುರುಡೆಗೆ ರಂಧ್ರ ಕೊರೆಯಲಾಯಿತು. ದೋಷಪೂರಿತ ಸ್ಥಳವನ್ನು ದೃಢೀಕರಿಸಲು ಮತ್ತು ತೊಡಕುಗಳನ್ನು ನಿವಾರಿಸಲು ವಿಶೇಷವಾದ ಎಲೆಕ್ಟ್ರೋಡ್‌ಗಳನ್ನು ಮೆದುಳಿನ ಭಾಗಕ್ಕೆ ವರ್ಗಾಯಿಸಲಾಗಿತ್ತು. ಅಸಹಜ ನಡುಕವನ್ನು ಪ್ರಚೋದಿಸುವ ಭಾಗವನ್ನು ಸುಡುವ ಮೂಲಕ ನಾಶ ಮಾಡಲಾಗಿತ್ತು. ಇದೊಂದು ಅತ್ಯಾಧುನಿಕ ಮತ್ತು ಸೂಕ್ಷ್ಮ ಸರ್ಜರಿಯಾಗಿದ್ದು, ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದ್ದಾರೆ. 

Advertisement

ಶಸ್ತ್ರಚಿಕಿತ್ಸೆ ನಂತರ ನನ್ನ ಬೆರಳುಗಳು ಶೇ.100ರಷ್ಟು ಗುಣಮುಖವಾಗಿವೆ. ಮೊದಲಿನಂತೆ ಬೆರಳುಗಳು ಚಲಿಸುವಂತಾಗಿದೆ. ಆಸ್ಪತ್ರೆಯಿಂದ ಹೊರಗೆ ಹೋದ ಬಳಿಕ ಮತ್ತೆ ಮೊದಲಿನಂತೆ ನನ್ನ ಮೆಚ್ಚಿನ ಗಿಟಾರ್‌ ನುಡಿಸುತ್ತಿರುವುದಕ್ಕೆ ಅತೀವ ಸಂತಸ ತಂದಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾದವರು

Advertisement

Udayavani is now on Telegram. Click here to join our channel and stay updated with the latest news.

Next