ಉತ್ತರ ಪ್ರದೇಶ; ಚಲಿಸುತ್ತಿರುವ ಕಾರಿನ ಮೇಲೆ ಯುವಕನೊಬ್ಬ ಕುಳಿತು ಸ್ಟಂಟ್ ಮಾಡಲು ಹೋಗಿ ತನ್ನ ಡ್ರೈವಿಂಗ್ ಲೈಸೆನ್ಸ್ ಅನ್ನೇ ಕಳೆದುಕೊಂಡ ಘಟನೆ ನಡೆದಿದೆ.
ಗೌತಮ್ ಬುದ್ಧ ನಗರದಲ್ಲಿ ವ್ಯಕ್ತಿಯೊಬ್ಬ ರಸ್ತೆಯುದ್ದಕ್ಕೂ ಕಾರು ಚಾಲನೆ ಮಾಡಿದ್ದು ಅಲ್ಲದೆ ಈ ವೇಳೆ ಕಾರಿನ ಮೇಲೆ ಯುವಕನೊಬ್ಬ ಕುಳಿತು ಸ್ಟಂಟ್ ಮಾಡಿದ್ದಾನೆ, ಜೊತೆ ಗೆಳೆಯರು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ, ವೀಡಿಯೊ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಗೌತಮ್ ಬುದ್ಧ ನಗರ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥ ಯುವಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ . ಅಲ್ಲದೆ ಸ್ಟಂಟ್ ಮಾಡಿದ ಯುವಕರಿಗೆ 26,000 ರೂ. ದಂಡ ವಿಧಿಸಲಾಗಿದೆ ಜೊತೆಗೆ ವಾಹನದ ಆರ್ ಸಿ ಮತ್ತು ಯುವಕನ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ.
ಅಧಿಕಾರಿಗಳು ವಾಹನವನ್ನು ವಶಪಡಿಸಿಕೊಂಡಿದ್ದು ಸಿಆರ್ ಪಿಸಿ ಸೆಕ್ಷನ್ 151 ರ ಪ್ರಕಾರ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಗೌತಮ್ ಬುದ್ಧ ನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಜಡೇಜಾ, ಚಾಹಲ್‌ರನ್ನು ʻಕಳಪೆ ಸ್ಪಿನ್ನರ್ಸ್ʼ ಎಂದ ಪಾಕ್ ಮಾಜಿ ಕ್ರಿಕೆಟರ್