ಲಕ್ನೋ: ವ್ಯಕ್ತಿಯೊಬ್ಬ ಸ್ನೇಹಿತನ ಚಿತಾಗಾರಕ್ಕೆ ಹಾರಿ ಸಾವನ್ನಪ್ಪಿರುವ ಘಟನೆ ಶನಿವಾರ (ಮೇ.27 ರಂದು) ಉತ್ತರ ಪ್ರದೇಶದ ಯಮುನಾ ನದಿಯ ದಡದಲ್ಲಿ ನಡೆದಿದೆ.
ನಾಗ್ಲಾ ಖಂಗರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಅಶೋಕ್ (42) ಕಳೆದ ಕೆಲ ಸಮಯದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಶನಿವಾರ ಮುಂಜಾನೆ ಅವರು ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಯಮುನಾ ನದಿಯ ದಡದಲ್ಲಿ ನಡೆಸಲು ಸಿದ್ದತೆ ಮಾಡಿಕೊಂಡಿದ್ದಾರೆ.
ಅಂತ್ಯಕ್ರಿಯೆಗೆ ಅಶೋಕ್ ಅವರ ಕುಟುಂಬಸ್ಥರು ಹಾಗೂ ಅವರ ಸ್ನೇಹಿತ ಆನಂದ್ ಅವರು ಕೂಡ ಬಂದಿದ್ದಾರೆ. ಅಂತ್ಯಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಎಲ್ಲರೂ ವಾಪಾಸ್ ಆಗಿದ್ದಾರೆ. ಆದರೆ ಈ ವೇಳೆ ಆನಂದ್ ಇದ್ದಕ್ಕಿದ್ದಂತೆ ಅಂತ್ಯಕ್ರಿಯೆಯ ಚಿತಾಗಾರಕ್ಕೆ ಹಾರಿದ್ದಾರೆ.
ವಾಪಾಸ್ ಆಗುತ್ತಿದ್ದಂತೆ ಜನ ಕೂಡಲೇ ಚಿತಾಗಾರದ ಬೆಂಕಿಗೆ ಹಾರಿದ ಆನಂದ್ ರನ್ನು ಎಳೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀವ್ರ ಸುಟ್ಟಗಾಯಗಳಿಂದ ಆನಂದ್ ಮೃತಪಟ್ಟಿದ್ದಾರೆ.
Related Articles
ಆನಂದ್ ಅವರ ಕುಟುಂಬದವರನ್ನು ಸಂಪರ್ಕ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.