Advertisement

ಆಸ್ತಿಗಾಗಿ ಹೆತ್ತವ್ವಳ ಮೇಲೆ ಮಗನಿಂದ ಹಲ್ಲೆ: ಪೊಲೀಸ್ ಠಾಣೆ ಮೆಟ್ಟಿಲೇರಲು ತಾಯಿಯ ನಿರ್ಧಾರ

02:51 PM Aug 11, 2020 | keerthan |

ಯಾದಗಿರಿ: ತಾಯಿಯೇ ದೇವರು ಎನ್ನುವ ಮಾತಿದೆ. ಆದರೆ ಇಲ್ಲೊಬ್ಬ ಮಗ ಆಸ್ತಿಗಾಗಿ ತಾಯಿ ಮೇಲೆ ಹಲ್ಲೆ ನಡೆಸಿ ದುಷ್ಕೃತ್ಯ ಎಸಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

Advertisement

ವಡಗೇರಾ ತಾಲೂಕಿನ ಗೊಂದೆನೂರ ಗ್ರಾಮದಲ್ಲಿ ವಾಸವಿರುವ ತಾಯಿ ಮನೆಯ ಅಕ್ಕಿ, ಗೋದಿ, ಜೋಳ, ಧವಸ ಧಾನ್ಯ, ಪೀಠೋಪಕರಣ ಬಟ್ಟೆಗಳನ್ನು ಹಾಗೂ ಸಿಲಿಂಡರ್ ಕಟ್ಟೆಯನ್ನು ಮಗ ಪ್ರಭಯ್ಯ ಸ್ವಾಮಿ ಧ್ವಂಸ ಮಾಡಿದ್ದಾನೆ ಎಂದು ತಾಯಿ ದೂರಿದ್ದಾರೆ.

ಅನ್ನಮ್ಮ ಐನೋರ್ ಎಂಬಾಕೆ ತನ್ನ ಮಗ ಪ್ರಭಯ್ಯಗೆ 2 ಎಕರೆ ಜಮೀನು ಮತ್ತು ಮನೆ ಹೆಸರಿಗೆ ಮಾಡಿಕೊಟ್ಟಿದ್ದು, ತನ್ನ ಜೀವನೋಪಾಯಕ್ಕೆಂದು 16 ಗುಂಟೆ ಜಮೀನು ತನ್ನ ಬಳಿ ಇರಿಸಿಕೊಂಡಿದ್ದರು. ಲಾಕ್ ಡೌನ್ ಸಮಯದಲ್ಲಿ ಕೆಲಸ ಇಲ್ಲದೆ ಊರಿನ ಪ್ರಮುಖರಲ್ಲಿ ಕೈಸಾಲ ಮಾಡಿಕೊಂಡಿದ್ದೇನೆ ಅದನ್ನು ತೀರಿಸಲು ತನ್ನ ಪಾಲಿನ 16 ಗುಂಟೆ ಜಮೀನನ್ನು ಮಾರಲು ಮುಂದಾಗಿದ್ದರು ಎನ್ನಲಾಗಿದೆ.

ಮಗ, ಸೊಸೆ ಹಾಗೂ ಮೊಮ್ಮಕ್ಕಳು ಬಿಡುತ್ತಿಲ್ಲ ಮಾರಾಟ ಮಾಡುವುದಕ್ಕೂ ಬಿಡುತ್ತಿಲ್ಲ, ಜೀವನೋಪಾಯಕ್ಕೆ ಹಣ ಕೂಡ ಕೊಡುತ್ತಿಲ್ಲ, ವಯಸ್ಸಾಗಿದೆ ದುಡಿಯಲು ಆಗುತ್ತಿಲ್ಲ ಎಂದು ಅನ್ನಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

ಜಮೀನು ಮಾರಿದರೆ ಜೀವ ಸಹಿತ ಬಿಡಲ್ಲವೆಂದು ಕೊಡಲಿ ಹಿಡಿದುಕೊಂಡು ಓಡಾಡುತ್ತಿದ್ದಾನೆ ಎಂದು ತಾಯಿ ಆತಂಕ ವ್ಯಕ್ತಪಡಿಸಿದ್ದಾರೆ.

ಮನೆಯೊಳಗೆ ಇದ್ದಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದು, ಹಲ್ಲೆ ಮಾಡಿದ್ದಾನೆ ನನ್ನ ಜೀವ ರಕ್ಷಣೆಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next