ನವದೆಹಲಿ: ಸೂಕ್ತ ರೀತಿಯಲ್ಲಿ ಬಟ್ಟೆ ಧರಿಸಿಕೊಂಡಿಲ್ಲ ಎಂಬ ಕಾರಣಕ್ಕಾಗಿ ಗ್ರಾಹಕನೊಬ್ಬನ್ನು ಶನಿವಾರ, ಎಸ್‌ಬಿಐ ಬ್ಯಾಂಕಿನ ಶಾಖೆಯೊಳಕ್ಕೆ ಪ್ರವೇಶಿಸದಂತೆ ತಡೆದಿದ್ದು ಚರ್ಚೆಗೆ ಗ್ರಾಸವಾಗಿದೆ.
ಶನಿವಾರ, ಆಶಿಶ್ ಎಂಬ ಹೆಸರಿನ ವ್ಯಕ್ತಿ ಎಸ್‌ಬಿಐಗೆ ಟ್ವೀಟ್ ಮಾಡಿ, “ನಿಮ್ಮ ಶಾಖೆಯೊಂದಕ್ಕೆ ತೆರಳಿದ್ದ ನನಗೆ, ನಾನು ಚಡ್ಡಿ ಹಾಕಿದ್ದೇನೆ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಗ್ರಾಹಕರು ಸಭ್ಯತೆಯನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಯಿತು. ಗ್ರಾಹಕರು ಯಾವ ರೀತಿಯ ಬಟ್ಟೆ ಧರಿಸಿ ಬರಬೇಕು ಎಂಬ ಬಗ್ಗೆ ನಿಯಮಗಳು ಇದೆಯೇ’ ಎಂದು ಪ್ರಶ್ನೆ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಬಿಐ “ಬ್ಯಾಂಕ್ ಶಾಖೆಗೆ ಗ್ರಾಹಕರು ಇಂಥದ್ದೇ ರೀತಿಯಲ್ಲಿ ಬಟ್ಟೆ ಧರಿಸಿ ಬರಬೇಕು ಎಂಬ ನಿಯಮ ಇಲ್ಲ. ಆದರೆ, ಸ್ಥಳೀಯವಾಗಿ ಇರುವಂಥ ಪದ್ಧತಿಗಳಿಗೆ ಅನುಸಾರವಾಗಿ ಇರುವ ವಸ್ತ್ರ ಪದ್ಧತಿಯನ್ನು ಅನುಸರಿಸಲು ಅವಕಾಶವಿದೆ. ಯಾವ ಶಾಖೆಯಲ್ಲಿ ನಿಮಗೆ ಅನುಭವವಾಗಿದೆ, ಅದರ ವಿವರಗಳನ್ನು ನೀಡಿ’ ಎಂದು ಪ್ರತಿಕ್ರಿಯೆ ನೀಡಿದೆ.
ಇದನ್ನೂ ಓದಿ:ನಾಲ್ಕು ಕಿವಿಗಳುಳ್ಳ ಬೆಕ್ಕು ಈಗ ಫುಲ್ ಫೇಮಸ್
ಆಶಿಶ್ ಎಂಬುವರು ಮಾಡಿದ ಟ್ವೀಟ್‌ಗೆ ಟ್ವಿಟರ್‌ನಲ್ಲಿ ಸುಮಾರು 2 ಸಾವಿರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಅವರ ನಡೆಯನ್ನು ಕೆಲವರು ವಿರೋಧಿಸಿದ್ದಾರೆ.