Advertisement

“ಮನುಷ್ಯ ಸಾರ್ಥಕತೆಯ ಬದುಕನ್ನು ನಡೆಸಬೇಕು’

10:38 PM Apr 24, 2019 | mahesh |

ನೆಹರೂನಗರ: ಮನುಷ್ಯ ಕೇವಲ ಜೀವಿಸುವುದಕ್ಕಿಂತ ನಮಗೆ ಲಭಿಸಿದ ಜೀವನವನ್ನು ಸಾರ್ಥಕತೆಯಿಂದ ಬದುಕುವುದು ಮುಖ್ಯ. ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಥೆಗಾರ, ಸಾಹಿತಿ ಎ.ಆರ್‌. ಮಣಿಕಾಂತ್‌ ಹೇಳಿದರು.

Advertisement

ವಿವೇಕಾನಂದ ಮಹಾವಿದ್ಯಾಲಯದ ಲಲಿತಕಲಾ ಸಂಘ ಹಾಗೂ ಇತರ ವಿಭಾಗಗಳ ವತಿಯಿಂದ ಆಯೋಜಿಸಿದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ ಅನೇಕ ಮಂದಿ ಇದ್ದಾರೆ. ಅವರ ಅಂಗ ನೂನ್ಯತೆ ಮುಂದೆ ನಮ್ಮ ಸೌಂದರ್ಯ ಪ್ರಜ್ಞೆ ಕುರಿತು ಚಿಂತಿಸುತ್ತೇವೆ. ಆದರೆ ಆ ನ್ಯೂನತೆಯ ವ್ಯಕ್ತಿ ಸಮರ್ಥವಾದ ಹಾಗೂ ಸಾಧನೆಯನ್ನು ಮಾಡುವ ಮೂಲಕ ಸಾರ್ಥಕ್ಯ ಜೀವನವನ್ನು ನಡೆಸುತ್ತಾನೆ. ಅದನ್ನೇ ನಾವು ನಮ್ಮ ಜೀವನ ಸ್ಫೂರ್ತಿಯಾಗಿ ಕಾಣಬೇಕು ಎಂದರು. ಸಾಧನೆಯ ಕಥೆಗಳ ಮೂಲಕ ಜೀವನ ವನ್ನು ಸಮರ್ಥವಾಗಿ ಎದುರಿಸಬಹುದು ಎನ್ನುವುದನ್ನು ವಿವರಿಸಿದ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಸ್ಫೂರ್ತಿಯ ಕೃತಿಗಳು
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯುಎಸಿ ಸಂಯೋಜಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ್‌ ಎಚ್‌.ಜಿ. ಮಾತನಾಡಿ, ಮಾನವೀಯ ಮೌಲ್ಯ ನೀಡುವ ಹಲವು ಕಥೆ, ಕೃತಿಗಳು ಎಲ್ಲರಿಗೂ ಸ್ಫೂರ್ತಿ. ಮನುಷ್ಯತ್ವದ ಮೌಲ್ಯಗಳನ್ನು ತಿಳಿಸುವ ನುಡಿಚಿತ್ರಗಳಂತಹ ನೈಜ ಘಟನೆಗಳ ಬರವಣಿಗೆಗಳು ಪ್ರತಿಯೊಬ್ಬರಿಗೂ ಜೀವನವನ್ನು ಯಾವ ರೀತಿಯಾಗಿ ನಡೆಸಬೇಕು ಎನ್ನುವ ಮಾದರಿಯನ್ನು ಒದಗಿಸುತ್ತವೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next