ಬದೌನ್: ಸೊಸೆಯಾಗಿದ್ದವಳೇ ತಂದೆಯ ಎರಡನೇ ಪತ್ನಿಯಾಗಿ, ಮಲತಾಯಿಯಾಗಿ ಬಂದರೆ ಪುತ್ರನ ಸ್ಥಿತಿ ಹೇಗಾಗಬೇಡ? ಅಂಥ ಒಂದು ಪ್ರಕರಣ ಉತ್ತರ ಪ್ರದೇಶದ ಬದೌನ್‌ನಿಂದ ವರದಿಯಾಗಿದೆ.
ಅರ್ಜಿ ಸಲ್ಲಿಸಿದ ಯುವಕನಿಗೆ 2016ರಲ್ಲಿ ಮದುವೆಯಾಗಿತ್ತು. ಆತ ಮದ್ಯಪಾನ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆ, ಆತನನ್ನು ತೊರೆದಿದ್ದಳು. ಆರು ತಿಂಗಳಿಂದ ತಂದೆಯವರು ಖರ್ಚಿಗೆ ಹಣನೀಡುವುದನ್ನು ನಿಲ್ಲಿಸಿದ್ದು ಹಾಗೂ ಸಂಭಾಲ್‌ನಲ್ಲಿ ಪ್ರತ್ಯೇಕವಾಗಿ ವಾಸವಾಗಿ ಇರುತ್ತಿದ್ದದ್ದು ಪುತ್ರನ ಗಮನಕ್ಕೆ ಬಂದಿತ್ತು. ಹೀಗಾಗಿ, ತಂದೆಯವರ ಜೀವನ ವಿಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಡುವಂತೆ ಜಿ.ಪಂ.ಗೆ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದ್ದ.
ಇದನ್ನೂಓದಿ:‘ಪಕ್ಕದ ಮನೆಯವನ ಪತ್ನಿ…’ ಹೇಳಿಕೆಗೆ ಕ್ಷಮೆ ಕೇಳಿದ ದಿನೇಶ್ ಕಾರ್ತಿಕ್
ಮಗನಿಗೆ ಆಘಾತವಾಗುವಂತಹ ವಿಚಾರ ಗೊತ್ತಾಗಿದ್ದೇ ಆಗ. 2016ರಲ್ಲಿ ತಾನು ಮದುವೆಯಾಗಿದ್ದ ಯುವತಿಯನ್ನೇ ತಂದೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ ಅಂಶ ಬಹಿರಂಗವಾಯಿತು.
ಇದರಿಂದ ಕ್ರುದ್ಧಗೊಂಡ ಆತ ತಂದೆ ವಿರುದ್ಧ ಬಿಸೌಲಿ ಠಾಣೆಯಲ್ಲಿ ದೂರು ನೀಡಿದ್ದಾನೆ. ಗುಟ್ಟು ಗೊತ್ತಾದ ಬಳಿಕ ಯುವತಿ ಕೂಡ ತಂದೆಯ ಜತೆಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಪೊಲೀಸರೂ ಕೂಡ ವಿವಾದವನ್ನು ರಾಜಿ ಮೂಲಕ ಇತ್ಯರ್ಥಕ್ಕೆ ಮುಂದಾಗಿದ್ದಾರೆ.