Advertisement

ರೈಲಿನಡಿ ಹಾರಿ ಪ್ರಾಣ ಕಳೆದುಕೊಂಡ ಕೋವಿಡ್‍ ನಿಂದ ಗುಣಮುಖನಾಗಿದ್ದ ಇಂಜನಿಯರ್

09:41 PM Apr 14, 2021 | Team Udayavani |

ಥಾಣೆ : ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದ ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿನಡಿ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಥಾಣೆ ಜಿಲ್ಲೆಯ ದೊಂಬಿವಿಲಿ ಗ್ರಾಮದ ಬಳಿ ಸೋಮವಾರ (ಏ.12) ನಡೆದಿದೆ.

Advertisement

ಅಜದೆ ಗ್ರಾಮದ ನಿವಾಸಿ 40 ವರ್ಷದ ಇಂಜನಿಯರ್ ಆತ್ಮಹತ್ಯೆಗೆ ಶರಣಾದವ ಎಂದು ತಿಳಿದು ಬಂದಿದೆ. ಇತ್ತೀಚಿಗಷ್ಟೆ ಈತನಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಈತ, ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದ ಎಂದು ತಿಳಿದು ಬಂದಿದೆ.

ಕೋವಿಡ್ ಸೋಂಕಿನ ವಿರುದ್ಧ ಹೋರಾಡಿ ಗೆದ್ದು ಬಂದಿದ್ದ ಇಂಜನಿಯರ್ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತವನ್ನುಂಟು ಮಾಡಿದೆ. ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದ ಈತ, ದೊಡ್ಡ ಬ್ಯಾಗ್‍ ಸಮೇತ ಮನೆ ತೊರೆದಿದ್ದ. ವಾಪಸ್ ಮನೆಗೆ ಮರಳಬಹುದೆಂದುಕೊಂಡು ಎಂದು ಆತನ ಕುಟುಂಬದವರು ಸುಮ್ಮನಾಗಿದ್ದರು.ಆದರೆ, ಸೋಮವಾರ ವೇಗದಿಂದ ಚಲಿಸುತ್ತಿದ್ದ ಕೊಂಕಣ ಎಕ್ಸ್ ಪ್ರೆಸ್‍ ರೈಲಿನಡಿ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಈತನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸತೀಶ್ ಪವಾರ್ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next