Advertisement

Kasaragod: ಊಟ ಮಾಡಿ ಕುಳಿತ್ತಿದ್ದಾಗ ಸಿಡಿಲು ಬಡಿದು ಸಾವು

09:40 PM May 25, 2024 | Team Udayavani |

ಕಾಸರಗೋಡು: ಊಟ ಮಾಡಿ ಮನೆಯೊಳಗೆ ಕುಳಿತಿದ್ದಾಗ ಸಿಡಿಲು ಬಡಿದು ನೆಟ್ಟಣಿಗೆ ಸಬ್ರಕಜೆಯ ದೇವರಗುತ್ತು ಗಂಗಾಧರ ರೈ(78) ಸಾವಿಗೀಡಾದರು. ಮೇ 24 ರಂದು ರಾತ್ರಿ 10 ಗಂಟೆಗೆ ಸಿಡಿಲು ಬಡಿದು ನೆಲಕ್ಕುರುಳಿದರು. ಕೂಡಲೇ ಸ್ಥಳೀಯರು ಮುಳ್ಳೇರಿಯದ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

Advertisement

ವಿದ್ಯುತ್‌ ಕಂಬ ಧರೆಗೆ : ಮೇ 24 ರಂದು ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ನೀರ್ಚಾಲು ಸಮೀಪ ದೇವರಮೆಟ್ಟುನಲ್ಲಿ ವಿದ್ಯುತ್‌ ಕಂಬಗಳು ನೆಲಕ್ಕಪ್ಪಳಿಸಿವೆ. ಒಂದು ಕಂಬ ಪೂರ್ಣವಾಗಿ ನೆಲಕ್ಕೆ ಅಪ್ಪಳಿಸಿದ್ದು, ಇನ್ನೆರಡು ವಾಲಿ ನಿಂತಿದೆ. ತಂತಿಗಳು ಹರಡಿಕೊಂಡಿದೆ. ವಿದ್ಯುತ್‌ ಇಲಾಖೆ ನೌಕರರು ವಿದ್ಯುತ್‌ ವಿಚ್ಛೇಧಿಸಿ ಸಂಭವನೀಯ ಅಪಾಯ ತಪ್ಪಿಸಿದರು.

ಪೊಲೀಸ್‌ ಠಾಣೆಯ ಸೀಲಿಂಗ್‌ ಕುಸಿತ : ಕುಂಬಳೆ ಪೊಲೀಸ್‌ ಠಾಣೆಯ ಕಟ್ಟಡದ ಸೀಲಿಂಗ್‌ ಕೆಲವು ದಿನಗಳಿಂದ ಕುಸಿದು ಬೀಳುತ್ತಿದೆ. ಮೇ 24 ರಂದು ಮತ್ತೆ ಕುಸಿದಿದ್ದು, ಆ ಸಂದರ್ಭದಲ್ಲಿ ಅಲ್ಲಿ ಯಾರೂ ಇಲ್ಲದ ಕಾರಣದಿಂದ ಸಂಭವನೀಯ ಅಪಾಯ ತಪ್ಪಿತು.

Advertisement

Udayavani is now on Telegram. Click here to join our channel and stay updated with the latest news.

Next