Advertisement

10ರ ಹರೆಯದ ಮಗನನ್ನು ನೀರಲ್ಲಿ ಮುಳುಗಿಸಿ ಕೊಂದ ಅಪ್ಪ

11:57 AM Mar 01, 2018 | udayavani editorial |

ಜಮ್‌ಶೇದ್‌ಪುರ : ಬುಡಕಟ್ಟು ವ್ಯಕ್ತಿಯೋರ್ವ ತನ್ನ 10 ವರ್ಷ ಪ್ರಾಯದ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಗೈದ ಘಟನೆ ಜಾರ್ಖಂಡ್‌ನ‌ ಪೂರ್ವ ಸಿಂಗಭೂಮ್‌ ಜಿಲ್ಲೆಯಿಂದ ವರದಿಯಾಗಿದೆ. 

Advertisement

ಜಾರ್ಖಂಡ್‌ನ‌ ಪೂರ್ವ ಸಿಂಗಭೂಮ್‌ ಜಿಲ್ಲೆಯ ‘ಮೇಲಿನ ಸೋಲಿ’ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಈ ಗ್ರಾಮಕ್ಕೆ ತಾಗಿಕೊಂಡಿರುವ ಗ್ರಾಮದ ಕೊಳವೊಂದರಲ್ಲಿ ಹುಡುಗನ ಶವ ಪತ್ತೆ ಮಾಡಿದುದನ್ನು ಅನುಸರಿಸಿ ಆತನ ತಂದೆ ಬುಡಕಟ್ಟು ವ್ಯಕ್ತಿಯನ್ನು ಬಂಧಿಸಿದರು. 

ತನ್ನಿಬ್ಬರು ಸ್ನೇಹಿತರ ನೆರವಿನಲ್ಲಿ ತಾನು ಮಗನನ್ನು ಕೊಳದಲ್ಲಿ ಮುಳುಗಿಸಿ ಕೊಂದದ್ದು ಹೌದೆಂದು ಒಪ್ಪಿಕೊಂಡ ಆತ, ತನ್ನ ಮಗನು ತಾಯಿಯೊಂದಿಗೆ ಉದ್ಧಟತನದಿಂದ ನಡೆದುಕೊಳ್ಳುತ್ತಿದ್ದ; ಆ ಕಾರಣಕ್ಕಾಗಿ ನಾನು ಆತನನ್ನು ಕೊಂದು ಮುಗಿಸಿದೆ ಎಂದು ಪೊಲೀಸರಿಗೆ ಹೇಳಿದ. 

ಪೊಲೀಸರೀಗ ಬಾಲಕನ ಕೊಲೆಗೆ ನೆರವಾದ ಆತನ ಇಬ್ಬರು ಸಹಚರರನ್ನು  ಹುಡುಕಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next