Advertisement

‘ಬೋರಿಂಗ್‌’ಕೆಲಸ: ಬಾಸ್‌ ಮೇಲೇ ದೂರು ಕೊಟ್ಟು 33 ಲಕ್ಷ ರೂ. ಪರಿಹಾರವನ್ನೂ ಪಡೆದ ಕಿಲಾಡಿ!

07:59 PM Jan 12, 2022 | Team Udayavani |

ಪ್ಯಾರಿಸ್‌: “ಅಯ್ಯೋ, ಬೋರಿಂಗ್‌ ಕೆಲಸ’ ಇದು ಈಗಿನ ಸಾಕಷ್ಟು ಉದ್ಯೋಗಿಗಳ ದೂರು. ಇದೇ ರೀತಿ ದೂರನ್ನು ಹೊತ್ತಿದ್ದ ಪ್ಯಾರಿಸ್‌ನ ಕಂಪನಿಯೊಂದರ ಸಿಬ್ಬಂದಿಯೊಬ್ಬ, ತನ್ನ ಬಾಸ್‌ ವಿರುದ್ಧವೇ ಮೊಕದ್ದಮೆ ಹೇರಿ, ಕಂಪನಿಯಿಂದ 33 ಲಕ್ಷ ರೂ. ಪರಿಹಾರ ಪಡೆದಿದ್ದಾನೆ!

Advertisement

ಹೌದು. ಫ್ರೆಡೆರಿಕ್‌ ಡೆಸ್ನಾರ್ಡ್‌ ಹೆಸರಿನ ವ್ಯಕ್ತಿ 2015ರವರೆಗೆ ಇಂಟರ್‌ಪರ್ಫ್ಯೂಮ್ಸ್‌ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾನೆ. ಆತನಿಂದಾಗಿ ಕ್ಲೈಂಟ್‌ ಒಬ್ಬರು ತಪ್ಪಿಹೋದರು ಎನ್ನುವ ಕಾರಣಕ್ಕೆ ಆತನನ್ನು ಅತ್ಯಂತ ಬೋರಿಂಗ್‌ ವಿಭಾಗದಲ್ಲಿ ಮ್ಯಾನೇಜರ್‌ ಮಾಡಲಾಗಿತ್ತು. ಅದರಿಂದಾಗಿ ಆತ ಬೇಸತ್ತಿದ್ದನಂತೆ. ನಂತರ ಕಾರು ಅಪಘಾತಕ್ಕೆ ಸಿಲುಕಿದ್ದ ಆತ 7 ತಿಂಗಳು ರಜೆ ಹಾಕಿದ ಎನ್ನುವ ಕಾರಣಕ್ಕೆ ಕೆಲಸದಿಂದ ತೆಗೆಯಲಾಗಿದೆ.

ಇದನ್ನೂ ಓದಿ:ಮಲೈಕಾ ಜತೆಗಿನ ಬ್ರೇಕ್ ಅಪ್ ವದಂತಿ ತಳ್ಳಿಹಾಕಿದ ಅರ್ಜುನ್ ಕಪೂರ್

ಕೆಲಸ ಬಿಟ್ಟ ನಂತರ ಆತ, ಕಂಪನಿ ತನಗೆ ಬೋರಿಂಗ್‌ ಕೆಲಸ ಕೊಟ್ಟಿದ್ದಾಗಿ ಮೊಕದ್ದಮೆ ಹೂಡಿದ್ದು, ನಾಲ್ಕು ವರ್ಷಗಳ ನಂತರ ಅದರ ತೀರ್ಪು ಬಂದಿದೆ. ಆತನಿಗೆ 33 ಲಕ್ಷ ರೂ. ಪರಿಹಾರವನ್ನು ಕಂಪನಿಯಿಂದಲೇ ಕೊಡಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next