Advertisement

ಸಾಮಾಜಿಕ ಜಾಲತಾಣ ವ್ಯಸನ; ಕೆನ್ನೆಗೆ ಬಾರಿಸಲು ಕೆಲಸದವಳು!

10:52 AM Nov 13, 2021 | Team Udayavani |

ವಾಷಿಂಗ್ಟನ್‌: ಸಾಮಾಜಿಕ ಜಾಲ ತಾಣಗಳ ಕಡೆಗೆ ನೋಡಿದಾಗಲೆಲ್ಲ ಕೆನ್ನೆಗೆ ಯಾರಾದರೂ ಬಾರಿಸುವುದಿದ್ದರೆ, ದಿನಕ್ಕೆ ಎಷ್ಟು ಬಾರಿ ಪೆಟ್ಟು ತಿನ್ನಬಹುದು! ಭಾರತ ಮೂಲದ ಅಮೆರಿಕ ನಿವಾಸಿಯೊಬ್ಬರು ಇಂಥ ಪ್ರಯತ್ನ ಮಾಡಿ ಸುದ್ದಿಯಾಗಿದ್ದಾರೆ.

Advertisement

ಸಾಮಾಜಿಕ ಜಾಲತಾಣಗಳ ವ್ಯಸನದಿಂದ ಕೆಲಸಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮನೀಶ್‌ ಸೇಥಿ ಈ ಉಪಾಯ ಹೂಡಿದ್ದಾರೆ. ಸೇಥಿ ಕಂಪ್ಯೂಟರ್‌ ಪ್ರೋಗ್ರಾಮರ್‌. 2012ರಲ್ಲಿ ಅತೀ ಹೆಚ್ಚು ಫೇಸ್‌ಬುಕ್‌ ಬಳಸುತ್ತಿದ್ದರಂತೆ. ಪ್ರತೀ ವಾರ ತಮ್ಮ ಕೆಲಸದ ಅವಧಿಯಲ್ಲಿ ಶೇ. 38ರಷ್ಟು ಭಾಗ ಇದರಲ್ಲೇ ಕಳೆಯುತ್ತಿದ್ದರಂತೆ. ಇದರಿಂದ ತಮ್ಮ ಕೆಲಸದ ಸಾಮರ್ಥ್ಯ ಕುಗ್ಗಿದ್ದನ್ನು ಗಮನಿಸಿದ ಅವರು, ತಮ್ಮ ಕೆನ್ನೆಗೆ ಹೊಡೆಯಲೆಂದು ಕ್ಲಾರಾ ಎಂಬ ಮಹಿಳೆ ಯನ್ನು ನೇಮಿಸಿಕೊಂಡಿದ್ದಾರೆ. ಕೆಲಸದ ಅವಧಿಯಲ್ಲಿ ಮನೀಶ್‌ ಸಾಮಾಜಿಕ ಜಾಲತಾಣ ತೆರೆದಾಗೆಲ್ಲ ಅವರಿಗೆ ಕಪಾಳಮೋಕ್ಷ ಮಾಡುವ ಕೆಲಸ ಕ್ಲಾರಾರದು. ಕ್ಲಾರಾಗೆ ಗಂಟೆಗೆ 595 ರೂ. ಸಂಬಳ ನಿಗದಿ ಮಾಡಲಾಗಿದೆ.

ಈ ರೀತಿ ಕೆನ್ನೆಗೆ ಹೊಡೆಸಿಕೊಂಡು ಕೆಲಸ ಮಾಡಿ ದ್ದ ರಿಂದ ಮನೀಶ್‌ ಅವರ ಕೆಲಸದ ಸಾಮರ್ಥ್ಯ, ಉತ್ಪಾದಕತೆ ಸುಮಾರು ಶೇ. 98ರಷ್ಟು ಹೆಚ್ಚಳ ವಾಗಿದೆಯಂತೆ. ಕ್ಲಾರಾ ತಮಗೆ ಕಪಾಳ ಮೋಕ್ಷ ಮಾಡುತ್ತಿರುವ ವೀಡಿಯೋವನ್ನೂ ಅವರು ಅಪ್‌ಲೋಡ್‌ ಮಾಡಿದ್ದು, ವೈರಲ್‌ ಆಗಿದೆ.

ಮಸ್ಕ್ ಮನಗೆದ್ದ ಮನೀಶ್‌:

ಮನೀಶ್‌ ಅವರ 2012ರ ಈ ವೀಡಿಯೋ ವನ್ನು ಇತ್ತೀಚೆಗೆ ಮಸ್ಸಿಮೋ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಅದನ್ನು ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್‌ ಮಸ್ಕ್ ಅವರೂ ಹಂಚಿಕೊಂಡಿದ್ದಾರೆ. ಅದಕ್ಕೆ ಮನೀಶ್‌ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಉತ್ಪಾದಕತೆ ಮೇಲೆ ಪರಿಣಾಮ :

ಸಾಮಾಜಿಕ ಮಾಧ್ಯಮಗಳ ಅವಿರತ ಬಳಕೆ ಉತ್ಪಾದಕತೆಯ ಮೇಲೆ ನಕಾ ರಾತ್ಮಕ ಪರಿಣಾಮ ಬೀರುತ್ತದೆ ಎಂಬು ದನ್ನು ಹಲವು ಅಧ್ಯಯನ ಗಳು ಸಾಬೀತುಪಡಿಸಿವೆ. ಒಂದು ವರದಿಯ ಪ್ರಕಾರ, ಶೇ. 83ರಷ್ಟು ಉದ್ಯೋಗಿಗಳು ಕೆಲಸದ ಸಮಯ ದಲ್ಲಿ  ಫೇಸ್‌ಬುಕ್‌ ನೋಡುತ್ತಾರೆ. ಪ್ರತೀ ದಿನ ನೌಕರರು ತಮ್ಮ ಕೆಲಸದ ಅವಧಿಯ ಶೇ. 32ರಷ್ಟು ಸಮಯವನ್ನು ಸಾಮಾಜಿಕ ಜಾಲ ತಾಣ ಗಳಲ್ಲೇ ಕಳೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next