Advertisement

ಮಧ್ಯಪ್ರದೇಶ: ಆಸ್ಪತ್ರೆಯಲ್ಲಿ ರೋಗಿಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪಿ ಸೆರೆ!

01:21 PM Jun 12, 2021 | Team Udayavani |

ಭೋಪಾಲ್: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಚಿಕ್ಕಮಗಳೂರು: ಕೋವಿಡ್ ಸೋಂಕಿತ ಬಾಲಕಿ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ತರೀಕೆರೆ ಶಾಸಕ

ಬಂಧಿತ ಆರೋಪಿ ಈ ಹಿಂದೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದ ಪರಿಣಾಮ ಆತ ಆಸ್ಪತ್ರೆಗೆ ದಾಖಲಾಗಿದ್ದ. ಈ ಘಟನೆ ಗುರುವಾರ ನಡೆದಿದ್ದು, ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವುದಾಗಿ ವರದಿ ವಿವರಿಸಿದೆ. ಎನ್ ಡಿಟಿವಿ ವರದಿ ಪ್ರಕಾರ, ಸಂತ್ರಸ್ತ ದಾಮೋದರ್ ಕೋರಿ ಈಗ ಸಾಗರ್ ಜಿಲ್ಲೆಯ ಬುಂದೇಲ್ ಖಂಡ್ ವೈದ್ಯಕೀಯ ಕಾಲೇಜಿನಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು, ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದೆ.

ಸಿಸಿಟಿವಿ ಫೂಟೇಜ್ ನಲ್ಲಿ ಸೆರೆಯಾದ ದೃಶ್ಯದಲ್ಲಿ ಆರೋಪಿ ಮಿಲನ್ ರಜಾಕ್ ಆಸ್ಪತ್ರೆಯ ಆವರಣದ ಸುತ್ತಲೂ ಲೈಟರ್ (ಬೆಂಕಿ ಹೊತ್ತಿಸುವ) ಹಿಡಿದು ಓಡಾಡುತ್ತಿರುವುದು ಪತ್ತೆಯಾಗಿದೆ. ನಂತರ ಆತ ಮಲಗಿದ್ದ ಕೋರಿ ಬಳಿ ತೆರಳಿ ಪೆಟ್ರೋಲ್ ಸುರಿದು ಲೈಟರ್ ನಿಂದ ಬೆಂಕಿ ಹಚ್ಚಿದ್ದ. ಬೆಂಕಿ ಹೊತ್ತಿಕೊಂಡ ನಂತರ ರೋಗಿ ದಾಳಿಕೋರನ ಬೆನ್ನಟ್ಟಿ ಓಡಿ ಬರುತ್ತಿರುವ ದೃಶ್ಯ ಕೂಡಾ ಸಿಸಿಟಿವಿಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next