Advertisement

ಕಾಬೂಲ್: ಮೃತ ದೇಹ ನೇತು ಹಾಕಿ ಕಾಪ್ಟರ್‌ ಹಾರಾಟ ನಡೆಸಿದ ತಾಲಿಬಾನ್ ಉಗ್ರರು?

10:27 AM Sep 01, 2021 | Team Udayavani |

ಕಾಬೂಲ್: ತಾಲಿಬಾನ್‌ ಉಗ್ರರು ಅಮೆರಿಕ ಯೋಧರು ಬಿಟ್ಟು ಹೋಗಿರುವ ಬ್ಲ್ಯಾಕ್‌ ಹಾಕ್‌  ಹೆಲಿಕಾಪ್ಟರ್‌ಗೆ ಮೃತ ದೇಹವನ್ನು ನೇತು ಹಾಕಿಕೊಂಡು ಹಾರಾಟ ನಡೆಸಿದ್ದಾರೆ. ಈ ಬಗೆಗಿನ ವಿಡಿಯೋ ಬೆಳಕಿಗೆ ಬಂದಿದ್ದು, ವೈರಲ್‌ ಆಗಿದೆ. ಅಫ್ಘಾನಿಸ್ತಾನದ್ದು ಎಂದು ಹೇಳಲಾಗಿರುವ ಈ ವಿಡಿಯೋವನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಮಾಧ್ಯಮ ಸಂಸ್ಥೆಗಳು ಪ್ರಕಟಿಸಿವೆ.

Advertisement

ಇದನ್ನೂ ಓದಿ:ಪಂಜ್‌ಶೀರ್‌ನಲ್ಲಿ ಕದನ: 8 ಸಾವು; ತಾಲಿಬಾನಿಗಳ ಕೈಗೆ ಸಿಗದು ಯುದ್ಧ ವಿಮಾನ

ಕಂದಹಾರ್‌ ಪ್ರಾಂತ್ಯ ವ್ಯಾಪ್ತಿಯಲ್ಲಿಕಾಪ್ಟರ್‌ ಹಾರಾಟ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹಾರುತ್ತಿರುವ ಹೆಲಿಕಾಲಿಪ್ಟರ್ ಕೆಳಗೆ ವ್ಯಕ್ತಿಯೊಬ್ಬ ನೇತಾಡುತ್ತಿದ್ದು, ಈ ವ್ಯಕ್ತಿ ಸಾವನ್ನಪ್ಪಿದ್ದಾನೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ ಎಂದು ವರದಿ ತಿಳಿಸಿದೆ.

ಈ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿಯೂ ಸ್ಪಷ್ಟವಾಗಿಲ್ಲ. ಆದರೆ ವರದಿಗಳ ಪ್ರಕಾರ ತಾಲಿಬಾನ್ ಉಗ್ರರ ಅಟ್ಟಹಾಸ ಅಫ್ಘಾನಿಸ್ತಾನದಲ್ಲಿ ಮಿತಿ ಮೀರಿದ್ದು, ಆ ವ್ಯಕ್ತಿಯನ್ನು ಕೊಂದ ಬಳಿಕವೇ ಹಗ್ಗ ಕಟ್ಟಿ ಹಾರಾಟ ನಡೆಸಲಾಗಿದೆ ಎಂದು ಹೇಳಿದೆ.

ತಾಲಿಬಾನ್ ಉಗ್ರರ ಜತೆ ಮಾಡಿಕೊಂಡಿದ್ದ ಒಪ್ಪಂದದಂತೆ ಆಗಸ್ಟ್ 31ರಂದು ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನದಿಂದ ನಿರ್ಗಮಿಸಿದೆ. ಅಮೆರಿಕ ಸೇನೆ ವಾಪಸ್ ಆದ ಬೆನ್ನಲ್ಲೇ ಉಗ್ರರು ಸಂಭ್ರಮ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next