Advertisement

ಒಂದೇ ಗಿಡದಲ್ಲಿ 839 ಟೊಮೆಟೊ!

12:00 AM Sep 21, 2021 | Team Udayavani |

ಲಂಡನ್‌: ಇಂಗ್ಲೆಂಡ್‌ನ‌ ಸ್ಟಾನ್‌ಸ್ಟೆಡ್‌ ಅಬ್ಬೋಟ್ಸ್‌ ಎಂಬ ಪ್ರಾಂತ್ಯದ ಡಾಗ್ಲಾಸ್‌ ಸ್ಮಿತ್‌ ಎಂಬ ರೈತನೊಬ್ಬ ಒಂದೇ ಟೊಮೆಟೊ ಗಿಡದಲ್ಲಿ 839 ಟೊಮೆಟೊಗಳನ್ನು ಬೆಳೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

Advertisement

ಈ ಹಿಂದೆ, ಇಂಥ ದಾಖಲೆಯನ್ನು ಈ ಹಿಂದೆ ಇದೇ ದೇಶದ ಗ್ರಹಾಂ ಟ್ಯಾಂಟರ್‌ ಎಂಬುವರು ನಿರ್ಮಿಸಿದ್ದರು. ಅವರು ಬೆಳೆಸಿದ ಟೊಮೆಟೊ ಗಿಡವೊಂದು 448 ಹಣ್ಣುಗಳನ್ನು ನೀಡಿತ್ತು. ಈಗ ಡಗ್ಲಾಸ್‌, ಸರಿಸುಮಾರು ಗ್ರಹಾಂ, ಬೆಳೆದ ಟೊಮ್ಯಾಟೊದ ದುಪ್ಪಟ್ಟು ಹಣ್ಣುಗಳನ್ನು ಬೆಳೆದಿದ್ದಾರೆ.

2020ರಲ್ಲಿ ಡಗ್ಲಾಸ್‌ ಅವರು ವಿಶ್ವದ ಅತೀ ದೊಡ್ಡ ಟೊಮೆಟೊವೊಂದನ್ನು ಬೆಳೆದು ಸುದ್ದಿಯಾಗಿದ್ದರು. ಸುಮಾರು 27.5 ಇಂಚು ಅಗಲವಿದ್ದ ಅದು 3.1 ಕೆಜಿ ತೂಕವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next