Advertisement

 ಸಿನಿಮೀಯ ಸನ್ನಿವೇಶ: ಸ್ಟ್ರೆಚರ್‌ಲ್ಲಿ ಮಲಗಿ ಸಾಕ್ಷಿ ಹೇಳಿದ!

12:56 PM Oct 08, 2017 | |

ಥಾಣೆ: ಥಾಣೆ ಜಿಲ್ಲಾ ನ್ಯಾಯಾಲಯ ವ್ಯಕ್ತಿಯೊಬ್ಬರು ಸ್ಟ್ರೆಚರ್‌ ಮೇಲೆ ಮಲಗಿ ಸಾಕ್ಷಿ ಹೇಳಿದ ಸಿನಿಮೀಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಕಾಲುಗಳಿಗೆ ಬ್ಯಾಂಡೇಜ್‌ ಹಾಕಿದ್ದ ಸಾಹಿಬ್‌ ಮುಕಿಂ ಅನ್ಸಾರಿ ತನ್ನ ಮೇಲೆ ಹಲ್ಲೆ ಮಾಡಿ ಸಾಯಿಸಲೆತ್ನಿಸಿದ ನಾಲ್ಕು ಮಂದಿಯ ವಿರುದ್ಧ ಸಾಕ್ಷಿ ಹೇಳಿದರು. ಥಾಣೆ ಜಿಲ್ಲಾ ನ್ಯಾಯಾಲಯ ಈ ರೀತಿಯ ಸಿನಿಮೀಯ ಸನ್ನಿವೇಶವನ್ನು ನೋಡಿದ್ದು ಇದೇ ಮೊದಲು. 

Advertisement

ಹಲ್ಲೆಗೊಳಗಾದ ವ್ಯಕ್ತಿ ಸ್ಟ್ರೆಚರ್‌ ಮೇಲೆ ಮಲಗಿ ಕೊಂಡೇ ಸಾಕ್ಷಿ ಹೇಳಿ ತನ್ನ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗುವಂತೆ ಮಾಡುವ ದೃಶ್ಯವನ್ನು ನೋಡಲು ವಕೀಲರು ಮತ್ತು ಜನರು ಜಮಾಯಿಸಿದ ಕಾರಣ ನ್ಯಾಯಾಲಯದ ಕೊಠಡಿ ಕಿಕ್ಕಿರಿದು ತುಂಬಿತ್ತು. 

ಗುಜರಿ ವ್ಯಾಪಾರಿಯಾಗಿರುವ ಅನ್ಸಾರಿ ಸಮಾಜ ಸೇವಕರಾಗಿಯೂ ಗುರುತಿಸಿ ಕೊಂಡಿದ್ದಾರೆ. ನಾಲ್ಕು ಮಂದಿ ಇತ್ತೀಚೆಗೆ ಅವರನ್ನು ಅಪಹರಿಸಿ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಿ ರಿಕ್ಷಾದಿಂದ ಹೊರಗೆಸೆದ ಪರಿಣಾಮವಾಗಿ ಅವರ ಎರಡೂ ಕಾಲುಗಳು ಮುರಿದಿವೆ. ಅನ್ಸಾರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಏಳು ಸಲ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದಾರೆ. ಆದರೆ ಇನ್ನೂ ನಡೆದಾಡುವ ಸ್ಥಿತಿಯಲ್ಲಿಲ್ಲ. 

ನಿನ್ನೆ ಕೋರ್ಟಿನಲ್ಲಿ ಸರಕಾರಿ ಅಭಿ ಯೋಜಕರು ಅನ್ಸಾರಿಯ ಹೇಳಿಕೆ ದಾಖಲಿಸಿ ಕೊಂಡ ಬಳಿಕ ಪ್ರತಿವಾದಿ ವಕೀಲರು ಅವರನ್ನು ಪಾಟೀ ಸವಾಲಿಗೊಳಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next