Advertisement

6ನೇ ತರಗತಿಯ ಬಾಲಕಿಯ ರೇಪ್‌, ಕೊಲೆ: ಅಪರಾಧಿಗೆ ಮರಣ ದಂಡನೆ

11:26 AM Mar 06, 2019 | Team Udayavani |

ಶಹದೋಲ್‌ : ನಾಲ್ಕು ವರ್ಷಗಳ ಹಿಂದೆ ಮಧ್ಯಪ್ರದೇಶದ ಶಹದೋಲ್‌ ಜಿಲ್ಲೆಯಲ್ಲಿ ಆರನೇ ತರಗತಿಯ ವಿದ್ಯಾರ್ಥಿಯನ್ನು ರೇಪ್‌ ಮಾಡಿ ಕೊಂದ 35 ವರ್ಷದ ಅಪರಾಧಿಗೆ ಇಲ್ಲಿನ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Advertisement

ಮಾನವತೆಯ ಮೇಲೆ ಭಾರೀ ದೊಡ್ಡ ಪ್ರಹಾರ ಮಾಡಿರುವ ಘಟನೆ ಇದಾಗಿದೆ ಎಂದು ಹೇಳಿದ ಬುರ್ಹರ್‌ ಟೌನ್‌ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಧೀಶ ಆರ್‌ ಜಿ ಪ್ರಜಾಪತಿ ಅವರು ರೇಪ್‌-ಕೊಲೆ ಅಪರಾಧಿ ರಾಮನಾಥ ಕೇವಟ್‌ ಗೆ ಮರಣ ದಂಡನೆಯ ಶಿಕ್ಷೆ ವಿಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next