Advertisement

ಅತ್ಯಾಚಾರ ಎಸಗಿದ ತರುಣನಿಗೆ 7 ವರ್ಷ ಕಠಿನ ಶಿಕ್ಷೆ

12:14 PM Jan 31, 2018 | Team Udayavani |

ಥಾಣೆ : ನೆರೆಯ ಪಾಲಗಢ ಜಿಲ್ಲೆಯ ನಿವಾಸಿಯಾಗಿರುವ 26ರ ಹರೆಯದ ತರುಣನೋರ್ವನಿಗೆ ಅತ್ಯಾಚಾರದ ಅಪರಾಧಕ್ಕಾಗಿ ಏಳು ವರ್ಷಗಳ ಸಶ್ರಮ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

Advertisement

ಅತ್ಯಾಚಾರದ ಅಪರಾಧಗೈದ ಅಶೋಕ್‌ ಕೃಷ್ಣ  ಮುಕನೆ ಎಂಬಾತನಿಗೆ ಹೆಚ್ಚುವರಿ ಸೆಶನ್ಸ್‌ ನ್ಯಾಯಾಧೀಶ ಎಸ್‌ ಸಿ ಖಾಲಿಪೆ ಅವರು ಏಳು ವರ್ಷಗಳ ಸಶ್ರಮ ಜೈಲು ಶಿಕ್ಷೆಯೊಂದಿಗೆ 7,000 ರೂ ದಂಡವನ್ನೂ ವಿಧಿಸಿ ತೀರ್ಪು ನೀಡಿದರು. 

ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿರುವ ಯುವಕನು 2013ರ ಅಕ್ಟೋಬರ್‌ 10ರಂದು ಸಂಜೆ ತನ್ನ ಮನೆಗೆ ಮರಳುತ್ತಿದ್ದ ವಿವಾಹಿತ ಮಹಿಳೆಯನ್ನು ಅಡ್ಡಗಟ್ಟಿ ಆಕೆಯನ್ನು ನಿರ್ಜನ ಸ್ಥಳಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿದ್ದ. ಅಪರಾಧಿಗೆ ವಿಧಿಸಲಾಗಿರುವ 7,000 ರೂ. ದಂಡವನ್ನು ಸಂತ್ರಸ್ತೆಗೆ ನೀಡಬೇಕು ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next