Advertisement

ವರದಕ್ಷಿಣೆ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ : ಪತಿಗೆ 7 ವರ್ಷ ಜೈಲು

07:04 AM Jan 24, 2019 | Team Udayavani |

ಮುಜಫ‌ರನಗರ : ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣನಾದ ಕಮಿಲ್‌ ಹಸನ್‌ ಎಂಬಾತನಿಗೆ ಇಲ್ಲಿನ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Advertisement

ನ್ಯಾಯಾಧೀಶ ಬಲರಾಜ್‌ ಸಿಂಗ್‌ ಅವರು ಅಪರಾಧಿ ಹಸನ್‌ ಗೆ 5,000 ದಂಡವನ್ನೂ ಹೇರಿ ತೀರ್ಪು ಪ್ರಕಟಿಸಿದರು. 

2013ರ ಜುಲೈ 24ರಂದು ಪತ್ನಿ ನಗ್ಮಾ ಗಂಡನ ವರದಕ್ಷಿಣೆ ಕಿರುಕುಳ ತಾಳಲಾರದೆ ತಿಸ್ಸಾ ಗ್ರಾಮದಲ್ಲಿನ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು ಎಂದು ವಕೀಲರು ಹೇಳಿದರು. ನಗ್ಮಾ ತಂದೆ ತನ್ನ ಮಗಳ ಸಾವಿಗೆ ಆಕೆಯ ಪತಿ ಹಸನ್‌ ಕಾರಣನೆಂದು ಪೊಲೀಸರಿಗೆ ದೂರು ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next